ಆ.2: ಗುರುವಾರದ ಮಾನ ಸನ್ಮಾನ ಸೈನಾ, ಸಾನಿಯಾಗೆ

ಶೂಟಿಂಗ್ : ಪುರುಷರ 25 ಮೀ. rapid ಫೈರ್ ಪಿಸ್ತೂಲ್ ವಿಭಾಗದ ಅರ್ಹತಾ ಸುತ್ತಿನಲ್ಲಿ ಪಟ್ಟಿಯಲ್ಲಿ ಐದನೆ ಸ್ಥಾನ ಹಾಗೂ ಪಾಯಿಂಟ್ ಪಟ್ಟಿಯಲ್ಲಿ ಒಟ್ಟಾರೆ ಎರಡನೆ ಸ್ಥಾನವನ್ನು ಪಡೆದ ಶೂಟರ್ ವಿಜಯ್ ಕುಮಾರ್ ಫೈನಲ್ ಪ್ರವೇಶಿಸಿದ್ದಾರೆ. ಗುರುವಾರ ನಡೆದ ಶೂಟಿಂಗ್‌ನ ಅರ್ಹತಾ ಸುತ್ತಿನ ಮೊದಲ ಹಂತದಲ್ಲಿ ಒಟ್ಟು 293 ಅಂಕಗಳಿಸಿರುವ ವಿಜಯ್ 9.767 ಸರಾಸರಿಯಲ್ಲಿ ಸ್ಕೋರ್ ದಾಖಲಿಸಿದರು.
ಶುಕ್ರವಾರ ನಡೆಯಲಿರುವ ಎರಡನೆ ಹಂತದ ಶೂಟಿಂಗ್ ಸ್ಪರ್ಧೆಯಲ್ಲಿ ಅಗ್ರ ಆರು ಶೂಟರ್‌ಗಳು ಒಲಿಂಪಿಕ್ಸ್ ಫೈನಲ್‌ಗೆ ತಲುಪಲಿದ್ದಾರೆ.ಆದರೆ, ಪದಕದ ಭರವಸೆ ಮೂಡಿಸಿದ್ದ ಮಾಜಿ ವಿಶ್ವ ನಂ.1 ಶೂಟರ್ ರಂಜನ್‌ಸಿಂಗ್ ಸೋಧಿ ಅವರು ಡಬಲ್‌ಟ್ರಾಪ್‌ನಲ್ಲಿ ಫೈನಲ್‌ಗೇರಲು ವಿಫಲರಾಗಿ ನಿರಾಶೆ ಮೂಡಿಸಿದರು. ಗರಿಷ್ಠ 150 ಅಂಕಗಳಲ್ಲಿ 134 ಅಂಕಗಳಿಸಿ 24 ಸ್ಪರ್ಧಿಗಳ ಪೈಕಿ 11 ಸ್ಥಾನಕ್ಕೆ ತೃಪ್ತಿ ಪಟ್ಟರು.
***
ಬಾಕ್ಸಿಂಗ್: ಭಾರತದ ಜೈ ಭಗವಾನ್ ಪುರುಷರ ಲೈಟ್‌ವೇಟ್ ವಿಭಾಗದ ಪ್ರಿ-ಕ್ವಾರ್ಟರ್ ಫೈನಲ್‌ನಲ್ಲಿ ಕಜಕ್‌ಸ್ತಾನದ ಗನಿ ಝೈಲಾವೊವ್ ವಿರುದ್ಧ ಹೀನಾಯವಾಗಿ ಸೋತು ಗೇಮ್ಸ್‌ನಿಂದ ನಿರ್ಗಮಿಸಿದರು. ಗುರುವಾರ ನಡೆದ ಪುರುಷರ 60 ಕೆಜಿ ವಿಭಾಗದಲ್ಲಿ ಭಗವಾನ್ 8-16 ರಿಂದ ಸೋಲನುಭವಿಸಿದರು. ಶಿವಥಾಪ ಹಾಗೂ ಸುಮಿತ್ ಸಾಂಗ್ವನ್ ನಂತರ ಭಗವಾನ್ ಲಂಡನ್ ಗೇಮ್ಸ್‌ನಿಂದ ಹೊರ ನಡೆದ ಮೂರನೆ ಬಾಕ್ಸರ್ ಆಗಿದ್ದಾರೆ.
ಪುರುಷರ ಮಿಡ್ಲ್ ವೆಯ್ಟ್(75ಕೆ.ಜಿ.) ವಿಭಾಗದಲ್ಲಿ ವಿಜೇಂದರ್ ಅಮೆರಿಕದ ಟೆರೆಲ್ ಗೌಶ್ ವಿರುದ್ಧ 16:15 ರಿಂದ ಗೆಲುವು ದಾಖಲಿಸಿಕೊಂಡು ಕ್ವಾರ್ಟರ್ ಫೈನಲಿನಲ್ಲಿ ಸ್ಥಾನ ಗಳಿಸಿದರು. ಮೊದಲ ರೌಂಡ್ ನಲ್ಲಿ ಟೆರೆಲ್ 4:3 ರ ಮುನ್ನಡೆ ಪಡೆದಿದ್ದರು. ಎರಡನೇ ರೌಂಡ್ ನಲ್ಲಿ ಟೆರೆಲ್ ಮೇಲೆ ವಿಜೇಂದರ್ ಕೆಲವು ಹೊಡೆತಗಳನ್ನು ಬಾರಿಸುವಲ್ಲಿ ಯಶಸ್ವಿಯಾದರು.
ಎರಡನೇ ರೌಂಡ್ 5:5ರ ಸಮಬಲ ಸಾಧಿಸಿದರು. ಅಂತಿಮ ಸೆಕೆಂಡುಗಳಲ್ಲಿ ಟೆರೆಲ್ ಆಕ್ರಮಣಕಾರಿಯಾಗಿ ಆಡಿ ಭಾರತದ ಬಾಕ್ಸರ್ ಮೇಲೆ ದಾಳಿ ಮಾಡಿದರೂ. ಅಂತಿಮ ಸುತ್ತು 7-7ರ ಸಮಬಲದಲ್ಲಿ ಕೊನೆಗೊಂಡಿತು. ಒಂದು ಅಂಕದಿಂದ ವಿಜೇಂದರ್ ವಿಜಯಿಯಾದರು. 16:15ರ ಅಂಕದೊಂದಿಗೆ ವಿಜೇಂದರ್ ಕ್ವಾರ್ಟರ್ ಫೈನಲಿಗೇರಿದರು.
***
ಟೆನಿಸ್ : ಪೇಸ್ ಸಾನಿಯಾ ಮಿರ್ಜಾ ಜೋಡಿ ಮಿಶ್ರ ಡಬಲ್ಸ್ ವಿಭಾಗದಲ್ಲಿ ಕ್ವಾಟರ್ ಫೈನಲ್ ತಲುಪಿದ್ದಾರೆ. ಗುರುವಾರ ನಡೆದ ಪಂದ್ಯದಲ್ಲಿ ಸೆರ್ಬಿಯಾದ ಆನಾ ಇವಾನೊವಿಕ್ ಹಾಗೂ ನೆನಾದ್ ಜಿಮೊಂಜಿಕ್ ಜೋಡಿಯನ್ನು 6-2,6-4 ರಿಂದ ಸೋಲಿಸಿದರು. ಶುಕ್ರವಾರ ಅಗ್ರ ಕ್ರಮಾಂಕದ ವಿಕ್ಟೋರಿಯಾ ಅಜರೆಂಕಾ ಹಾಗೂ ಮ್ಯಾಕ್ಸ್ ಮಿರ್ನಿ ಜೋಡಿಯನ್ನು ಎದುರಿಸಲಿದ್ದಾರೆ.
ಪೇಸ್ ವಿಷ್ಣುವರ್ಧನ್ ಜೋಡಿ ಬುಧವಾರ 2ನೇ ಸುತ್ತಿನಲ್ಲಿ ಫ್ರಾನ್ಸ್ ಜೋಡಿಗೆ ಶರಣಾದ ಮೇಲೆ ಸಾನಿಯಾ ಮಿರ್ಜಾ ಹಾಗೂ ಲಿಯಾಂಡರ್ ಪೇಸ್ ಜೋಡಿ ಕಣದಲ್ಲಿ ಉಳಿದಿರುವ ಏಕೈಕ ಭಾರತದ ತಂಡವಾಗಿದೆ.
****
ಬಾಡ್ಮಿಂಟನ್ : ಸೈನಾ ನೆಹ್ವಾಲ್ ಅವರು ಕ್ವಾರ್ಟರ್ ಫೈನಲ್ ನಲ್ಲಿ ಡೆನ್ಮಾರ್ಕಿನ ಬಾನ್ (ವಿಶ್ವದ 7ನೇ ಶ್ರೇಯಾಂಕಿತ) ಅವರನ್ನು 21-15, 22-20 ಅಂತರದಲ್ಲಿ ಸೋಲಿಸಿ ಸೆಮಿಫೈನಲ್ ಪ್ರವೇಶಿಸಿದರು. ಈ ಮೂಲಕ ಒಲಿಂಪಿಕ್ಸ್ ನಲ್ಲಿ ಸೆಮಿಫೈನಲ್ ಹಂತಕ್ಕೇರಿದ ಮೊದಲ ಭಾರತೀಯ ಬಾಡ್ಮಿಂಟನ್ ಆಟಗಾರ್ತಿ ಎನಿಸಿದರು. [ಸೆಮಿಸ್ ಗೆ ಸೂಪರ್ ಸೈನಾ ಎಂಟ್ರಿ]
ಕ್ವಾರ್ಟರ್ ಫೈನಲ್ ಸಿಂಗಲ್ಸ್ ಸ್ಪರ್ಧೆಯಲ್ಲಿ ಉದಯೋನ್ಮುಖ ಆಟಗಾರ ಪಾರುಪಲ್ಲಿ ಕಶ್ಯಪ್ ಅವರು ಮಲೇಶಿಯಾದ ಬಲಿಷ್ಠ ಎದುರಾಳಿ ಲೀ ಚಾಂಗ್ ವೈ ಅವರ ವಿರುದ್ಧ 15-21, 10-21 ಅಂತರದಲ್ಲಿ ಸೋಲುಂಡಿದ್ದಾರೆ. ವಿಶ್ವದ ನಂ.21 ಆಟಗಾರ ಪಿ ಕಶ್ಯಪ್ ಅವರನ್ನು ವಿಶ್ವದ ನಂ.2 ಆಟಗಾರ ಲೀ ಚಾಂಗ್ ವೈ ಸುಲಭವಾಗಿ ಸೋಲಿಸಿ ಭಾರತದ ಪದಕದ ಆಸೆಗೆ ತಣ್ಣೀರೆರಚಿದರು.












Click it and Unblock the Notifications