ಸೈನಾ, ಕಶ್ಯಪ್ ಇತಿಹಾಸ ನಿರ್ಮಾಣಕ್ಕೆ ವೇದಿಕೆ ಸಜ್ಜು

ಹೈದರಾಬಾದಿನ ಹೆಮ್ಮೆ ಎನಿಸಿರುವ ಸೈನಾ ಹಾಗೂ ಕಶ್ಯಪ್ ಅವರಿಗೆ ನಿಜವಾದ ಅಗ್ನಿಪರೀಕ್ಷೆ ಎದುರಾಗಿದ್ದು, ಪ್ರಬಲ ಪ್ರತಿಸ್ಪರ್ಧಿಗಳನ್ನು ಎದುರಿಸುತ್ತಿದ್ದಾರೆ. ಇಬ್ಬರಲ್ಲಿ ಯಾರಾದರೂ ಮುಂದಿನ ಹಂತ ತಲುಪಿದರೂ ಸಾಕು ಇತಿಹಾಸ ನಿರ್ಮಾಣವಾಗುತ್ತದೆ. [ಆ.2: ಒಲಿಂಪಿಕ್ಸ್ ನಲ್ಲಿ ಭಾರತ]
ಕ್ವಾರ್ಟರ್ ಫೈನಲ್ ನಲ್ಲಿ ಡೆನ್ಮಾರ್ಕ್ ನ ಟೀಮ್ ಬುನ್ ರನ್ನು ಎದುರಿಸಲಿದ್ದಾರೆ. ಟಿಮ್ ಬುನ್ ಅವರು ಪ್ರೀ ಕ್ವಾರ್ಟರ್ ಫೈನಲ್ ನಲ್ಲಿ ಜಪಾನಿನ ಸಯಾಕಾ ಸಾಟೊ ಅವರನ್ನು ಸೋಲಿಸಿದ್ದಾರೆ. ಪುರುಷರ ಕ್ವಾರ್ಟರ್ ಫೈನಲ್ ಸಿಂಗಲ್ಸ್ ಸ್ಪರ್ಧೆಯಲ್ಲಿ ಪರುಪಲ್ಲಿ ಕಶ್ಯಪ್ ಅವರು ಮಲೇಶಿಯಾದ ಲೀ ಚಾಂಗ್ ವೈ ಅವರನ್ನು ಎದುರಿಸಲಿದ್ದಾರೆ.
ಸೈನಾ ಕ್ವಾರ್ಟರ್ ಫೈನಲ್ ನಲ್ಲಿ ನೆದರ್ಲೆಂಡ್ ನ ಜಿ ಯೊ ವಿರುದ್ಧ 21-14, 21-16ರಿಂದ ಪಂದ್ಯವನ್ನು ಗೆದ್ದುಕೊಂಡರು. ಸೈನಾ ಎರಡನೇ ಸೆಟ್ ನ್ನು 21-16ರಿಂದ ಗೆದ್ದುಕೊಂಡದ್ದಲ್ಲದೆ 10 ಅಂಕ ಸರ್ವ್ ನಲ್ಲಿ ಪಡೆದುಕೊಂಡರು ಮತ್ತು ಅಲ್ಲದೆ ಇತರ 11 ಅಂಕಗಳನ್ನು ಪಡೆದುಕೊಂಡರು.
ಮೊದಲ ಸೆಟ್ ನ್ನು ಸೈನಾ ಕೇವಲ 18 ನಿಮಿಷಗಳಲ್ಲಿ ಗೆದ್ದುಕೊಂಡ ಸೈನಾ ಮತ್ತೆ ಹಿಂತಿರುಗಿ ನೋಡಲಿಲ್ಲ. ಯೊ ವಿರುದ್ಧ 21-14ರಿಂದ ಮೊದಲ ಸೆಟ್ ನ್ನು ತನ್ನ ವಶಕ್ಕೆ ತೆಗೆದುಕೊಂಡರು. ಅಂತಿಮ ಗೇಮ್ ಅನ್ನು 20 ನಿಮಿಷದಲ್ಲಿ ವಶಪಡಿಸಿಕೊಳ್ಳುವ ಮೂಲಕ ಸಾಧನೆ ಮೆರೆದರು. ಬ್ಯಾಡ್ಮಿಂಟನ್ ನಲ್ಲಿ ಕೂಡ ಫಿಕ್ಸಿಂಗ್ ನಡೆಯುತ್ತಿದೆ ಎಂದು ವಿಶ್ವ ಬ್ಯಾಡ್ಮಿಂಟನ್ ಪಾಳಯ ದಂಗಾದ ದಿನವೇ ಸೈನಾ ಕ್ವಾರ್ಟರ್ ಫೈನಲಿಗೇರಿದ್ದಾರೆ.
ಬೀಜಿಂಗ್ 2008 ಒಲಿಂಪಿಕ್ಸ್ ನಲ್ಲಿ ಕ್ವಾರ್ಟರ್ ಫೈನಲ್ ಹಂತ ತಲುಪಿದ್ದ ಸೈನಾ ನೆಹ್ವಾಲ್ ನಂತರ ಮುಂದಿನ ಹಂತಕ್ಕೇರಲಾಗದೆ ಕುಸಿದಿದ್ದರು. ಭಾರತ ಶಟ್ಲರ್ ಗಳಾದ ಡಿಜು, ಜ್ವಾಲಾ ಗುಟ್ಟಾ ಹಾಗೂ ಅಶ್ವಿನಿ ಪೊನ್ನಪ್ಪ ನಿರ್ಗಮಿಸಿರುವುದರಿಂದ ಈ ಇಬ್ಬರು ಆಟಗಾರರ ಮೇಲೆ ಪದಕ ನಿರೀಕ್ಷೆ ಹೆಚ್ಚಾಗಿದೆ.
ಮಹಿಳಾ ಸಿಂಗಲ್ಸ್ ಕ್ವಾರ್ಟರ್ ಫೈನಲ್ಸ್
ಸೈನಾ ನೆಹ್ವಾಲ್ (ವಿಶ್ವ ಶ್ರೇಯಾಂಕ ನಂ.5) ವಿರುದ್ಧ ಟೀನ್ ಬಾನ್ (ವಿಶ್ವದ ನಂ.7) (6.32 IST ಗೆ ಪಂದ್ಯ ಆರಂಭ)
ಬಲಾಬಲ : (3-3)
ಮಲೇಶಿಯಾ ಓಪನ್ : (13.1.2012) ಸೈನಾಗೆ ಗೆಲುವು 21-13, 21-23, 21-13
ಬಿಡಬ್ಲ್ಯೂ ಎಫ್ ವಿಶ್ವ ಸೂಪರ್ ಸೀರಿಸ್ : (17.12.2011) ಸೈನಾಗೆ ಗೆಲುವು 21-17, 21-18
ಹಾಂಗಾಂಗ್ ಓಪನ್ (18.11.2011) ಬಾನ್ ಗೆ ಗೆಲುವು 21-16, 21-15
ಇಂಡೋನೇಶಿಯಾ ಓಪನ್ : (24.06.2011) ಸೈನಾಗೆ ಗೆಲುವು 21-19, 21-19
ಆಲ್ ಇಂಗ್ಲೆಂಡ್ ಸೂಪರ್ ಸೀರಿಸ್ (13.03.2010) : ಬಾನ್ ಗೆ ಗೆಲುವು 21-19, 21-17
ಹಾಂಗಾಂಗ್ ಸೂಪರ್ ಸೀರಿಸ್ (27.11.2007) : ಬಾನ್ ಗೆ ಗೆಲುವು 21-15, 12-21, 21-16
ಪುರುಷರ ಕ್ವಾರ್ಟರ್ ಫೈನಲ್ಸ್
ಪಿ ಕಶ್ಯಪ್ (ವಿಶ್ವದ ನಂ.21) ವಿರುದ್ಧ ಲೀ ಚಾಂಗ್ ವೈ (ವಿಶ್ವದ ನಂ.2) (ಪಂದ್ಯದ ಆರಂಭ 9.30 IST)
ಡೆನ್ಮಾರ್ಕ್ ಓಪನ್ (19.10.2011) : ವೈಗೆ ಗೆಲುವು 21-11, 21-13












Click it and Unblock the Notifications