ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿದಂಬರಂಗೆ ಹಣಕಾಸು, ಶಿಂಧೆಗೆ ಗೃಹ ಖಾತೆ ಹಂಚಿಕೆ

By Mahesh
|
Google Oneindia Kannada News

ನವದೆಹಲಿ, ಜು.31: ನಿರೀಕ್ಷೆಯಂತೆ ಕೇಂದ್ರ ಸಚಿವ ಸಂಪುಟ ಪುನರಾಚನೆಯಾಗಿದೆ. ಪಿ ಚಿದಂಬರಂ, ಸುಶೀಲ್ ಕುಮಾರ್ ಶಿಂಧೆ, ವೀರಪ್ಪ ಮೊಯ್ಲಿ ಅವರ ಖಾತೆಗಳನ್ನು ಪ್ರಧಾನಿ ಮನಮೋಹನ್ ಸಿಂಗ್ ಬದಲಾಯಿಸಿದ್ದಾರೆ.

ಗೃಹ ಸಚಿವರಾಗಿದ್ದ ಪಿ ಚಿದಂಬರಂ ಅವರಿಗೆ ಹಣಕಾಸು, ಕಾರ್ಪೋರೇಟ್ ಖಾತೆ ಹೊಂದಿರುವ ವೀರಪ್ಪ ಮೊಯ್ಲೆ ಅವರಿಗೆ ಹೆಚ್ಚುವರಿಯಾಗಿ ಇಂಧನ ಖಾತೆ ನೀಡಲಾಗಿದೆ. ಇಂಧನ ಸಚಿವರಾಗಿದ್ದ ಸುಶೀಲ್ ಕುಮಾರ್ ಶಿಂಧೆ ಅವರನ್ನು ನೂತನ ಗೃಹ ಸಚಿವ ಪಟ್ಟದಲ್ಲಿ ಕೂರಿಸಲಾಗಿದೆ. ಸಂಕ್ಷಿಪ್ತವಾಗಿ ಹೇಳಬೇಕೆಂದರೆ,
* ಪಿ ಚಿದಂಬರಂ: ಕೇಂದ್ರ ಹಣಕಾಸು ಸ‌ಚಿವ
* ಸುಶೀಲ್ ಕುಮಾರ್ ಶಿಂಧೆ: ಗೃಹ ಸಚಿವ
* ವೀರಪ್ಪ ಮೊಯ್ಲಿ: ಇಂಧನ ಸಚಿವ (ಹೆಚ್ಚುವರಿ)

ಪ್ರಣಬ್ ಮುಖರ್ಜಿ ಅವರಿಂದ ಸ್ಥಾನ ತೆರವಾದ ನಂತರ ಭಾರತಕ್ಕೆ ಹೊಸ ಆರ್ಥಿಕ ಸಚಿವ, ಗೃಹ ಸಚಿವ ಹಾಗೂ ರಕ್ಷಣಾ ಖಾತೆ ಸಚಿವರು ನೇಮಕಗೊಳ್ಳುವ ನಿರೀಕ್ಷೆಯಿತ್ತು. ಹಣಕಾಸು ಖಾತೆ ಮತ್ತೆ ಮನಮೋಹನ್ ಸಿಂಗ್ ಅವರೇ ಉಳಿಸಿಕೊಳ್ಳುವ ಸಾಧ್ಯತೆಯೂ ಇತ್ತು. ಆದರೆ, ಹಣಕಾಸು, ಗೃಹ, ಇಂಧನ ಖಾತೆಗಳನ್ನು ಮಾತ್ರ ಅದಲು ಬದಲು ಮಾಡಲಾಗಿದೆ.

ಹೀಗಾಗಿ ಎಕೆ ಆಂಟನಿ ಅವರಿಗೆ ರಕ್ಷಣಾ ಖಾತೆ ಹೊಣೆ ನೀಡುವ ಸಾಧ್ಯತೆ ನಿಚ್ಚಳವಾಗಿದೆ. ಪಿ ಚಿದಂಬರಂ ಅವರಿಗೆ ರಕ್ಷಣಾ ಖಾತೆ ಹೊಣೆಯನ್ನು ನೀಡುವ ಮಾತುಕತೆ ನಡೆದಿತ್ತಾದರೂ ಚಿದಂಬರಂ ಅವರು ಒಂದು ಖಾತೆ ಮಾತ್ರ ಸಾಕು ಎಂದಿದ್ದಾರೆ ಎನ್ನಲಾಗಿದೆ.

ಪ್ರಜಾರಾಜ್ಯಂ ಪಕ್ಷದ ಅಧ್ಯಕ್ಷ ಚಿರಂಜೀವಿ ಕೂಡಾ ಸಂಪುಟ ಸ್ಥಾನ ಆಕಾಂಕ್ಷಿಯಾಗಿದ್ದಾರೆ. ಆದರೆ, ಸಂಸತ್ ಅಧಿವೇಶನಕ್ಕೂ ಮುನ್ನ ಚಿರಂಜೀವಿ ಅವರ ಆಸೆ ಈಡೇರುವ ಸಾಧ್ಯತೆ ಕ್ಷೀಣಿಸಿದೆ. ಈ ಬಾರಿ ಮನಮೋಹನ್ ಸಿಂಗ್ ಅವರ ಸಚಿವ ಸಂಪುಟಕ್ಕೆ ಚಿರಂಜೀವಿ ಸೇರ್ಪಡೆಗೊಳ್ಳಲಿದ್ದಾರೆ ಎಂಬ ಸುದ್ದಿ ಮಾತ್ರ ಇನ್ನೂ ದಟ್ಟವಾಗಿ ರಾಜಕೀಯ ವಲಯದಲ್ಲಿ ಸುತ್ತುತ್ತಿದೆ.

ಲೋಕಸಭೆ ಶಾಸಕಾಂಗ ಪಕ್ಷದ ನಾಯಕನ ಸ್ಥಾನ ಇನ್ನೂ ಇತ್ಯರ್ಥವಾಗಿಲ್ಲ. ಪಿ ಚಿದಂಬರಂ ಹಾಗೂ ಸುಶೀಲ್ ಕುಮಾರ್ ಶಿಂಧೆ ನಡುವೆ ಮತ್ತೊಮ್ಮೆ ಪೈಪೋಟಿ ನಡೆದಿದೆ. ಆದರೆ, ಕೊನೆ ಹಂತದಲ್ಲಿ ಸುಶೀಲ್ ಕುಮಾರ್ ಶಿಂಧೆ ಅವರಿಗೆ ಶಾಸಕಾಂಗ ಪಕ್ಷದ ನಾಯಕನ ಸ್ಥಾನ ಒಲಿಯುವ ಎಲ್ಲಾ ಲಕ್ಷಣಗಳು ಕಂಡು ಬಂದಿದೆ.

ಮುಂದಿನ ಸಂಪುಟ ವಿಸ್ತರಣೆ, ಬದಲಾವಣೆ, ಖಾತೆ ಹಂಚಿಕೆ ಏನಿದ್ದರೂ ಸಂಸತ್ತಿನ ಮುಂಗಾರು ಅಧಿವೇಶನ ಮುಕ್ತಾಯವಾದ ಮೇಲೆ ಅಂದರೆ, ಸೆಪ್ಟೆಂಬರ್ ತಿಂಗಳಿನಲ್ಲಿ.. ಹೀಗಾಗಿ ಚಿರಂಜೀವಿ ಸೇರ್ಪಡೆಗೆ ಇನ್ನೂ ಮುಹೂರ್ತ ಕೂಡಿ ಬಂದಿಲ್ಲ.

English summary
Manmohan Singh Cabinet reshuffle : P Chidambaram gets Finance Ministry, Sushil Kumar Shinde Home Ministry, Veerappa Moily gets Power portfolio as additional responsibility.Shinde is also expected to be made the Leader of the House in Lok Sabha.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X