ಲಂಡನ್ ಒಲಿಂಪಿಕ್ಸಲ್ಲಿ ಬೋಣಿಗೆ ಮಾಡಿದ ಭಾರತ

ಲಂಡನ್, ಜು.30: ಒಲಿಂಪಿಕ್ಸ್ 2012 ಶೂಟಿಂಗ್ 10 ಮೀ ಏರ್ ರೈಫಲ್ ಫೈನಲ್ ಸ್ಪರ್ಧೆಯಲ್ಲಿ ಭಾರತದ ಗಗನ್ ನಾರಂಗ್ ಸೋಮವಾರ(ಜು.30)ಕಂಚಿನ ಪದಕ ಗೆದ್ದಿದ್ದಾರೆ. ಈ ಮೂಲಕ ಲಂಡನ್ ಒಲಿಂಪಿಕ್ಸ್ 2012 ರಲ್ಲಿ ಭಾರತದ ಪದಕ ಬೇಟೆಗೆ ನಾಂದಿ ಹಾಡಿದ್ದಾರೆ. ಹೈದರಾಬಾದಿನ ಶೂಟರ್ ಗಗನ್ ಅವರು ಭಾರತಕ್ಕೆ ಪ್ರಥಮ ಪದಕ ದೊರೆಕಿಸಿಕೊಟ್ಟಿದ್ದಾರೆ.

ಆದರೆ. ಗಗನ್ ಪದಕ ದಾಹ ಇನ್ನೂ ಇಂಗಿಲ್ಲ. 50 ಮೀ ಶೂಟಿಂಗ್ ವಿಭಾಗದಲ್ಲಿ ಎರಡು ಸ್ಪರ್ಧೆಗಳಲ್ಲಿ ಗಗನ್ ನಾರಂಗ್ ಸ್ಪರ್ಧಿಸುತ್ತಿದ್ದು ಇನ್ನೂ ಎರಡು ಪದಕ ಗೆಲ್ಲುವ ಭರವಸೆ ಮೂಡಿಸಿದ್ದಾರೆ.

ಅರ್ಹತಾ ಸುತ್ತಿನಲ್ಲಿ ಆರಂಭದಿಂದಲೂ ಗಗನ್ ನಾರಂಗ್ ಉತ್ತಮ ಪ್ರದರ್ಶನ ನೀಡಿ ಒಟ್ಟಾರೆ 598/600 ಕಲೆ ಹಾಕಿ ನಾಲ್ಕನೇ ಸ್ಥಾನ ಪಡೆದಿದ್ದರು. ಮೂರನೇ ಸ್ಥಾನದಲ್ಲಿರುವ ಚೀನಾದ ಸ್ಪರ್ಧಿ ಕೂಡಾ 3598 ಅಂಕ ಗಳಿಸಿದ್ದಾರೆ. ಬಿಂದ್ರಾ 594 ಅಂಕ ಗಳಿಸಿ 16ನೇ ಸ್ಥಾನ ಗಳಿಸಿ ಅರ್ಹತೆ ಪಡೆಯುವಲ್ಲಿ ವಿಫಲರಾದರು.

ಅರ್ಹತಾ ಸುತ್ತಿನಲ್ಲಿ ಆರಂಭದಿಂದಲೂ ಗಗನ್ ನಾರಂಗ್ ಉತ್ತಮ ಪ್ರದರ್ಶನ ನೀಡಿ ಒಟ್ಟಾರೆ 598/600 ಕಲೆ ಹಾಕಿ ನಾಲ್ಕನೇ ಸ್ಥಾನ ಪಡೆದಿದ್ದರು. ಮೂರನೇ ಸ್ಥಾನದಲ್ಲಿರುವ ಚೀನಾದ ಸ್ಪರ್ಧಿ ಕೂಡಾ 3598 ಅಂಕ ಗಳಿಸಿದ್ದಾರೆ. ಬಿಂದ್ರಾ 594 ಅಂಕ ಗಳಿಸಿ 16ನೇ ಸ್ಥಾನ ಗಳಿಸಿ ಅರ್ಹತೆ ಪಡೆಯುವಲ್ಲಿ ವಿಫಲರಾದರು.

ಅಥೆನ್ಸ್ 2004 (12ನೇ ಸ್ಥಾನ) ಹಾಗೂ ಬೀಜಿಂಗ್ 2008 (9ನೇ ಸ್ಥಾನ) ಒಲಿಂಪಿಕ್ಸ್ ನಲ್ಲಿ ಪದಕ ಗೆಲ್ಲುವಲ್ಲಿ ವಿಫಲರಾಗಿದ್ದ ಗಗನ್, ಈ ಬಾರಿ ಅದ್ಭುತ ಪ್ರದರ್ಶನ ನೀಡಿ ಭಾರತಕ್ಕೆ ಪದಕ ತಂದಿತ್ತಿದ್ದಾರೆ. 29 ವರ್ಷದ ನಾರಂಗ್ ಅವರು 701.1 ಅಂಕಗಳೊಂದಿಗೆ ಕಂಚಿನ ಪದಕ ಗೆದ್ದಿದ್ದಾರೆ. ರೋಮಾನಿಯಾದ ಅಲಿನ್ ಜಾರ್ಜ್ ಮೊಲ್ಡೊವೆನು 702.1 ಅಂಕಗಳೊಂದಿಗೆ ಚಿನ್ನದ ಪದಕ ಗೆದ್ದರೆ, ಇಟಾಲಿಯನ್ ನಿಕ್ಕೊಲೊ ಕಂಪ್ರಿಯಾನಿ 701.5 ಅಂಕಗಳೊಂದಿಗೆ ಬೆಳ್ಳಿ ಪದಕ ಗೆದ್ದರು.

10 ಮೀ ಏರ್ ರೈಫಲ್ ಸ್ಪರ್ಧೆಯಲ್ಲಿ ಎಲ್ಲರ ನಿರೀಕ್ಷೆ ಅಭಿನವ್ ಬಿಂದ್ರಾ ಮೇಲಿತ್ತು. ಸಂಖ್ಯಾಶಾಸ್ತ್ರಜ್ಞರು ಕೂಡಾ ಬಿಂದ್ರಾ ಪರ ಬ್ಯಾಟಿಂಗ್ ಮಾಡಿದ್ದರು. ಆದರೆ, ಗ್ರಹಬಲವೋ, ದೈವ ಬಲವೋ, ಅಭಿಮಾನಿಗಳ ಹಾರೈಕೆಯೋ ಭಾರತಕ್ಕೆ ಶೂಟಿಂಗ್ ನಲ್ಲಿ ಪದಕ ಲಭಿಸಿದೆ. ಭಾರತದ ಕೀರ್ತಿಯನ್ನು ನಾರಂಗ್ ಗಗನಕ್ಕೇರಿಸಿದ್ದಾರೆ.

2010 ರಲ್ಲಿ ಎರಡು ಬಾರಿ ವಿಶ್ವ ಶೂಟಿಂಗ್ ಚಾಂಪಿಯನ್ ಆಗಿ ದಾಖಲೆ ನಿರ್ಮಿಸಿದ್ದ ಗಗನ್ ನಾರಂಗ್ ಅವರು ದೆಹಲಿ ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ನಾಲ್ಕು ಚಿನ್ನದ ಪದಕ ಕೊರಳಿಗೇರಿಸಿಕೊಂಡಿದ್ದರು. ಗುಂಗ್ಜಾವೊ ಏಷ್ಯನ್ ಗೇಮ್ಸ್ 2010ರಲ್ಲಿ ಎರಡು ಬೆಳ್ಳಿ ಪದಕ ಗೆದ್ದಿರುವ ಗಗನ್ 2006ರ ಮೆಲ್ಬೋರ್ನ್ ಕಾಮನ್ ವೆಲ್ತ್ ಗೇಮ್ಸ್ ನಲ್ಲೂ 4 ಚಿನ್ನದ ಪದಕ ಗೆದ್ದಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+