ಮಾರನ್ ಪಡೆದಿದ್ದು ಕೇವಲ 550 ಕೋಟಿ ಲಂಚ

Dayanidhi Maran, bro took 550 cr bribe
ಚೆನ್ನೈ/ನವದೆಹಲಿ, ಜು.27: ಏರ್ ಸೆಲ್ ಕಂಪೆನಿಗೆ 2ಜಿ ತರಂಗಾಂತರ ಗುಚ್ಛ ಕೊಡಿಸಲು ಮಾರನ್ ಸೋದರರು ಸುಮಾರು 550 ಕೋಟಿ ರು ಲಂಚ ಪಡೆದಿದ್ದಾರೆ ಎಂಬುದು ವಿಚಾರಣೆ ವೇಳೆ ಸಾಬೀತಾಗಿದೆ ಎಂದು ಸಿಬಿಐ ಅಧಿಕಾರಿಗಳು ಶುಕ್ರವಾರ(ಜು.27) ಹೇಳಿದ್ದಾರೆ. ಗುರುವಾರ ಮಾಜಿ ಕೇಂದ್ರ ಸಚಿವ ದಯಾನಿಧಿ ಮಾರನ್ ಅವರ ವಿಚಾರಣೆ ಸಂದರ್ಭದಲ್ಲಿ ಏರ್ ಸೆಲ್ ಮ್ಯಾಕ್ಸಿಸ್ ಒಪ್ಪಂದ ಮೊತ್ತ ಹೊರಬಿದ್ದಿದೆ.

ದಯಾನಿಧಿ ಮಾರನ್ ಹಾಗೂ ಕಳಾನಿಧಿ ಮಾರನ್ ಸೇರಿಕೊಂಡು ಶಿವ ಸಮೂಹಕ್ಕೆ ಯಾವುದೇ ಗುತ್ತಿಗೆ ಸಿಗದಂತೆ ಮಾಡಿದ್ದಾರೆ. ಮ್ಯಾಕ್ಸಿಸ್ ಕಮ್ಯೂನಿಕೇಷನ್ ಒಡೆತನ ಬದಲಾವಣೆ, ಡಿಶ್ ನೆಟ್ ಡಿಎಸ್ ಎಲ್ ಮನವಿಯನ್ನು ತಡೆಹಿಡಿದಿದ್ದಕ್ಕೆ ಸಾಕ್ಷಿ ಇದೆ ಎಂದು ಜಂಟಿ ಸಂಸದೀಯ ಸಮಿತಿಗೆ ಸಲ್ಲಿಸಿರುವ ವರದಿಯಲ್ಲಿ ಸಿಬಿಐ ಹೇಳಿಕೊಂಡಿದೆ.

ಸುಮಾರು 549,96,01,793 ಲಂಚ ರೂಪದಲ್ಲಿ ಪಡೆದು ಸನ್ ಡೈರೆಕ್ಟ್ ನಲ್ಲಿ ಬಂಡವಾಳ ರೂಪದಲ್ಲಿ ಹೂಡಲಾಗಿತ್ತು. ಆಸ್ಟ್ರೋ ಆಲ್ ಏಷ್ಯಾ ನೆಟ್ವರ್ಕ್ಸ್ ಒಡೆತನದ ಸೌಥ್ ಏಷ್ಯಾ ಎಂಟರ್ ಟ್ರೈನ್ ಮೆಂಟ್ ಹೋಲಿಂಗ್ಸ್ ಹಣ ಪಾವತಿಸಿರುವ ಬಗ್ಗೆ ಮಾಹಿತಿ, ಪುರಾವೆ ಸಿಕ್ಕಿದೆ. ಬಹುಕೋಟಿ ಟೆಲಿಕಾಂ ಹಗರಣದಲ್ಲಿ ಆರೋಪಗಳು ಕೇಳಿ ಬಂದ ನಂತರ ಕೇಂದ್ರ ಜವಳಿ ಖಾತೆಗೆ ದಯಾನಿಧಿ ಮಾರನ್ ರಾಜೀನಾಮೆ ನೀಡಿದ್ದರು.

ಚೆನ್ನೈನ ತಮ್ಮ ನಿವಾಸಕ್ಕೆ ಅಕ್ರಮವಾಗಿ 300 ದೂರವಾಣಿ ಸಂಪರ್ಕ ಪಡೆದು ನಂತರ ಸೋದರ ಕಲಾನಿಧಿ ಮಾರನ್ ಒಡೆತನದ ಸನ್ ನೆಟ್ವರ್ಕ್ ಕಚೇರಿಗೆ ನೀಡಲಾಗಿತ್ತು ಎಂಬ ಆರೋಪ ಮಾರನ್ ಸೋದರರ ಮೇಲಿದೆ.

ದಯಾನಿಧಿ ಮಾರನ್, ಕಲಾನಿಧಿ ಮಾರನ್, ರಾಲ್ಫ್ ಮಾರ್ಷಲ್ (ಆಸ್ಟ್ರಾ ಟಿವಿ ಸಿಇಒ, ಟಿ ಅನಂದಕೃಷ್ಣನ್ ಮೇಲೆ FIR ದಾಖಲಿಸಲಾಗಿದೆ. ಏರ್ ಸೆಲ್ ಹಾಗೂ ಮಾಕ್ಸಿಸ್ ಒಪ್ಪಂದ, 2ಜಿ ಹಗರಣ, ಟೆಲಿಕಾಂ ನಿಯಮ ಉಲ್ಲಂಘನೆ ಮುಂತಾದ ಆರೋಪಗಳು ಮಾರನ್ ವಿರುದ್ಧ ಕೇಳಿ ಬಂದಿದೆ.

ಅತ್ಯಾಧುನಿಕ ಡಿಜಿಟಲ್ ಜಾಲವನ್ನು ಉಚಿತವಾಗಿ ಸನ್ ನೆಟ್ವರ್ಕ್ ಗೆ ಒದಗಿಸಲಾಗಿದೆ. ಆದರೆ, ಮಾರನ್ ಗೂ ನಮಗೂ ಸಂಬಂಧವಿಲ್ಲ ಎಂದು ಸನ್ ನೆಟ್ವರ್ಕ್ ಸ್ಪಷ್ಟಪಡಿಸಿತ್ತು.

ಸನ್ ಟಿವಿ ಸ್ಪಷ್ಟನೆ ನೀಡಿದರೂ,ಮಾರನ್ ಹೂಡಿರುವ ಬಂಡವಾಳಗಳ ಪಟ್ಟಿಯನ್ನು ನೋಡಿದರೆ ಸನ್ ಟಿವಿ ಪಾಲುಗಾರಿಕೆಯ ಚಿತ್ರಣ ಸಿಗುತ್ತದೆ. ಮಲೇಷಿಯಾ ಮೂಲದ ಏರ್ ಸೆಲ್ ಕಂಪೆನಿಗೆ 2ಜಿ ತರಂಗಾಂತರ ಗುಚ್ಛ ಕೊಡಿಸಿದ್ದು, ಸನ್ ಟಿವಿ ಡೈರೆಕ್ಟ್ ನಲ್ಲಿ ಸುಮಾರು 675 ಕೋಟಿ ರು ಷೇರು ಹೊಂದಿರುವುದು ಮುಂತಾದ ಆರೋಪಗಳು ಕೇಳಿ ಬಂದಿತ್ತು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+