• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಐದು ಲಕ್ಷ ಪೌಂಡ್ ಬಹುಮಾನ ಗೆದ್ದ ಕನ್ನಡಿಗ!

|
ಬೆಂಗಳೂರು, ಜು. 25 : ಹುಟ್ಟಿಸಿದ ಶಿವ ಹುಲ್ಲು ಮೇಯ್ಸದೆ ಇರ್ತಾನಾ ಎನ್ನುವುದು ಗಾದೆಮಾತು. ಮೈಬಗ್ಗಿಸಿ ದುಡಿದು ಸಮಾಜದಲ್ಲಿ ನೆಮ್ಮದಿಯ ಬದುಕು ಕಾಣುವುದು ಬಿಟ್ಟು ಸಾರ್ವಜನಿಕರಿಗೆ ಟೋಪಿಹಾಕುವವರಿಗೆ ಈ ಭೂಮಿಯಲ್ಲಿ ಏನೂ ಬರವಿಲ್ಲ. ಟೋಪಿ ಹಾಕಿಸಿಕೊಳ್ಳುವವರು ಇರುವ ತನಕ ಟೋಪಿ ಹಾಕುವವರು ಇದ್ದೇ ಇರುತ್ತಾರೆ.

ಇಂದು ನನ್ನ ಮೊಬೈಲ್ ಗೆ ಒಂದು ಮೆಸೇಜ್ ಬಂತು. ಈ ರೀತಿಯ ಮೆಸೇಜ್/ ಇಮೇಲ್ ಗಳು ಬರುವುದು ಹೊಸತೇನೂ ಅಲ್ಲ. ಆದರೂ ನಮ್ಮ ಓದುಗರ ಜೊತೆ ಇನ್ನೊಮ್ಮೆ, ಮಗುದೊಮ್ಮೆ ಈ ವಿಷಯವನ್ನು ಹಂಚಿಕೊಳ್ಳೋಣಾಂತನೇ ಈ ಲೇಖನ.

+919716704485 ಈ ನಂಬರ್ ನಿಂದ ಮೆಸೇಜ್ ನಲ್ಲಿ ಈ ರೀತಿ ಬರೆದಿತ್ತು " COCACOLA: You have won the pound 500,000GBP in Cocacola INT draw to claim your money send bank detail, gender, name, address, mobile" to email : cocacola_drawuk@w.cn.

ವಿದೇಶಿ ವಿನಿಮಯ ದರದಲ್ಲಿ ಪೌಂಡ್ ಒಂದರ ಇಂದಿನ ದರ ಹೆಚ್ಚುಕಮ್ಮಿ 87 ರೂಪಾಯಿ. ಐದು ಲಕ್ಷ ಪೌಂಡ್ ಅಂದರೆ ಇಂಡಿಯನ್ ಕರೆನ್ಸಿಯಲ್ಲಿ ನಾಲ್ಕು ಕೋಟಿ ಮೂವತ್ತೈದು ಲಕ್ಷ. ಅಬ್ಬಬ್ಬಾ ತಿಮ್ಮಪ್ಪ ನಿನ್ನ ಭಕ್ತನಿಗೆ ಎಂಥಾ ಕರುಣೆ ತೋರಿಸಿಬಿಟ್ಟೆ.

ಕುಂತ ಕೂತಲ್ಲೇ ಇದೆಂಥಾ ಲಕ್ಷ್ಮಿಕಟಾಕ್ಷ ಎಂದು ಬ್ಯಾಂಕ್ ಮಾಹಿತಿ ನೀಡಿದರೆ ಗೋವಿಂದಾ.. ಏಳು ಕುಂಡಲವಾಡು ತಿಮ್ಮಪ್ಪನೂ ರಕ್ಷಣೆಗೆ ಬರಲಾರ.

ಇಮೇಲ್/ ಮೆಸೇಜ್ ಮೂಲಕ ಮೋಸ ಮಾಡುವವರ ಗುಂಪಿಗೆ ಒಂದು ವೇಳೆ ಬ್ಯಾಂಕ್ ಮಾಹಿತಿ ನೀಡಿದರೆ ಆ ಕಡೆಯಿಂದ ಒಂದು ಕರೆ ಬಂದು ಈ ಬಹುಮಾನದ ಹಣ ನಿಮಗೆ ತಲುಪ ಬೇಕಾದರೆ ಕೆಲವೊಂದು ಫಾರ್ಮಾಲಿಟೀಸ್ ಮುಗಿಸಬೇಕು.

ಅದಕ್ಕೆ ನೀವು ಮೆಂಬರ್ಶಿಪ್ ಶುಲ್ಕ, ಪ್ರೊಸೆಸಿಂಗ್ ಫೀ ನೀಡಬೇಕು. ನಮ್ಮ ಏಜೆಂಟ್ ನಿಮ್ಮ ಬಳಿ ಬರುತ್ತಾನೆ. ಅವನಿಗೆ ನಗದು ರೂಪದಲ್ಲಿ ಶುಲ್ಕಪಾವತಿಸಿ ಎಂದು ಲಕ್ಷ ರೂಪಾಯಿ ಲೆಕ್ಕದಲ್ಲಿ ದೋಚಿ ಪರಾರಿಯಾಗುವುದು ಇವರ job profile.

ನೈಜೀರಿಯಾ ಮೂಲದ ಬಹಳಷ್ಟು ಮಂದಿಯನ್ನು ಈಗಾಗಲೇ ಪೊಲೀಸರು ಈ ಸಂಬಂಧ ಬಂಧಿಸಿದ್ದಾರೆ. ವೀಸಾ ಅವಧಿ ಮುಗಿದಿದ್ದರೂ ಕಾನೂನುಬಾಹಿರವಾಗಿ ನೆಲೆಸಿ ಇಂತಹ ಕೆಲಸ ಮಾಡುವುದೇ ಇವರ ಕಾಯಕ.ಈ ರೀತಿ ಮೋಸ ಹೋಗಿರುವವರ ಉದಾಹರಣೆ ಪ್ರತಿದಿನ ನಡೆಯುತ್ತಲೇ ಇರುತ್ತೆ. ಯಾಕೆಂದರೆ ಆಸೆಗೆ ಕೊನೆಯಿಲ್ಲ.. ಮಿತಿಯಿಲ್ಲ.

ಮಾಧ್ಯಮಗಳೂ, ಅಂತರ್ಜಾಲಗಳು, ಪೋಲೀಸ್ ಇಲಾಖೆ ಈ ಬಗ್ಗೆ ಸಾರ್ವಜನಿಕ ಹಿತಾಶಕ್ತಿ ಮಾಹಿತಿ ನೀಡುತ್ತಿದ್ದರೂ ಇಂತಹ ಘಟನೆಗಳು ಮರುಕಳಿಸುತ್ತಲೇ ಇರುತ್ತವೆ.

ಸಾರ್ವಜನಿಕರು ಪೋಲೀಸ್ ಇಲಾಖೆಗೆ ಸಹಕರಿಸದಿದ್ದರೆ ಇಂಥಹ ದುರುಳರನ್ನು ಮಟ್ಟ ಹಾಕುವುದು ತುಸು ತ್ರಾಸದ ಕೆಲಸವೇ ಸರಿ.

lok-sabha-home

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Lot of people getting SMS text message or email from unknown numbers about winning the lottery prize. Do not fall for it, do not reply to those messages. There is no money, they will charge tax or fee and they will abscond.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X

Loksabha Results

PartyLWT
BJP+9345354
CONG+28890
OTH108898

Arunachal Pradesh

PartyLWT
BJP32831
JDU167
OTH3710

Sikkim

PartyLWT
SKM01717
SDF21315
OTH000

Odisha

PartyLWT
BJD10112113
BJP21122
OTH11011

Andhra Pradesh

PartyLWT
YSRCP0150150
TDP02424
OTH011

-
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more