ವೇಶ್ಯೆಯರ ಡೈಲಿ ಬ್ರೆಡ್ ಕಿತ್ತುಕೊಂಡ ಒಲಿಂಪಿಕ್ಸ್

ಲಂಡನ್ ಸೇರಿದಂತೆ ಇಂಗ್ಲೆಂಡ್ ನ ನಗರಗಳಲ್ಲಿ ವೇಶ್ಯಾವಾಟಿಕೆಗೆ ಕಾನೂನಿನ ಮಾನ್ಯತೆ ಇದೆ. ಆದರೆ, ಒಲಿಂಪಿಕ್ಸ್ ಸಂದರ್ಭದಲ್ಲಿ ಸೆಕ್ಸ್ ಟೂರಿಸಂ ಭೀತಿ ಎದುರಾಗಿದೆ. ಅಲ್ಲದೆ, ಕೆಲ ದೇಶಗಳ ಅಥ್ಲೀಟ್ ಗಳು ವೇಶ್ಯಾವಾಟಿಕೆ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದು ಇದೆ. ಹಾಗಾಗಿ ಆಯೋಜಕರು ಯಾವುದೇ ಮುಜುಗರಕ್ಕೆ ಒಳಗಾಗುವುದು ಬೇಡ ಶಿಸ್ತು ಕ್ರಮ ಕೈಗೊಳ್ಳಲಾಗಿದೆ ಎಂದು ನ್ಯೂಹ್ಯಾಮ್ ಪೊಲೀಸರು ಹೇಳಿದ್ದಾರೆ.
ಒಲಿಂಪಿಕ್ಸ್ ಕ್ರೀಡಾಗಾಮದ ಸಮೀಪದಲ್ಲೇ 80ಕ್ಕೂ ಅಧಿಕ ವೇಶ್ಯಾಗೃಹಗಳಿತ್ತು. ಆದರೆ, ಬಹುತೇಕ ಎಲ್ಲವನ್ನೂ ಮುಚ್ಚಿಸಲಾಗಿದೆ. ಕಳೆದ ಎರಡು ವರ್ಷಗಳಿಂದ ಪೊಲೀಸರ ಕಾಟ ತಡೆಯಲು ಅಸಾಧ್ಯವಾಗಿದೆ. ಹೊಟ್ಟೆಪಾಡಿಗಾಗಿ ಈ ವೃತ್ತಿ ಮಾಡುತ್ತಿದ್ದೇವೆ. ಈಗ ಒಲಿಂಪಿಕ್ಸ್ ನಿಂದಾಗಿ ಬೀದಿಗೆ ಬೀಳುವಂತಾಗಿದೆ ಎಂದು ವೇಶ್ಯಾವೃತ್ತಿಗೆ ಆಸರೆಯಾಗಿರುವ ಯೋಜನೆಯ ಓಪನ್ ಡೋರ್ ನ ಜಾರ್ಜಿಯಾ ಪೆರ್ರಿ ಹೇಳಿದ್ದಾರೆ.
ಲೈಂಗಿಕ ಕಾರ್ಯಕರ್ತೆಯರು ಬೀದಿಗಿಳಿದರೆ ಎಲ್ಲರಿಗೂ ಅಪಾಯ ಎಂಬುದು ತಿಳಿದಿದೆ. ಆದರೆ, ಪೊಲೀಸರ ವರ್ತನೆ ಬೇಸರ ತರಿಸಿದೆ ಎಂಬ ವೇಶ್ಯೆಯರ ಕೂಗಿಗೆ ಪ್ರತಿಕ್ರಿಯಿಸಿರುವ ನ್ಯೂಹ್ಯಾಮ್ ಪೊಲೀಸರು, ಒಲಿಂಪಿಕ್ಸ್ ಗೂ ವೇಶ್ಯಾಗೃಹಗಳ ಮೇಲಿನ ದಾಳಿಗೂ ಯಾವುದೇ ಸಂಬಂಧವಿಲ್ಲ ಎಂದಿದ್ದಾರೆ.
ಪ್ರಧಾನಿ ಡೇವಿಡ್ ಕೆಮರೂನ್ ಒಲಿಂಪಿಕ್ಸ್ ನಿಂದಾಗಿ 13 ಬಿಲಿಯನ್ ಪೌಂಡ್(20.2 ಡಾಲರ್, 16.3 ಯುರೋ) ಲಾಭ ಗಳಿಸುವ ನಿರೀಕ್ಷೆಯಲ್ಲಿದ್ದಾರೆ. ವೇಶ್ಯಾ ವ್ಯಾಪಾರ ನಿಂತರೆ ಸರ್ಕಾರಕ್ಕೆ ಭಾರಿ ನಷ್ಟವಾಗುವುದಲ್ಲದೆ, ವೇಶ್ಯೆಯರನ್ನು ಸರಿಯಾಗಿ ನೋಡಿಕೊಳ್ಳಲು ಸೂಕ್ತ ವ್ಯವಸ್ಥೆ ಕಲ್ಪಿಸುವ ಜವಾಬ್ದಾರಿ ಕೂಡಾ ಸರ್ಕಾರದ ಮೇಲಿರುತ್ತದೆ.
ವೇಶ್ಯಾಗೃಹಗಳ ಮೇಲಿನ ದಾಳಿಯನ್ನು ಸಮರ್ಥಿಸಿಕೊಂಡಿರುವ ಲಂಡನ್ ಮೇಯರ್ ಬೊರಿಸ್ ಜಾನ್ಸನ್, ವೇಶ್ಯಾವಾಟಿಕೆ ಹೆಸರಿನಲ್ಲಿ ಮಾನವ ಕಳ್ಳಸಾಗಣೆ ಹಾಗೂ ಸೆಕ್ಸ್ ಟೂರಿಸಂ ಬೆಳೆಯಲು ಬಿಡುವುದಿಲ್ಲ. ಅದರಲ್ಲೂ ಒಲಿಂಪಿಕ್ಸ್ ಸಂದರ್ಭದಲ್ಲಿ ನಗರದ ಗೌರವ ಕಾಪಾಡಬೇಕಿದೆ ಎಂದಿದ್ದಾರೆ.
ಸ್ಥಳೀಯ ಬಾಂಗ್ಲಾದೇಶಿ ಮುಸ್ಲಿಂ ಕುಟುಂಬದವರು ಪೊಲೀಸರ ಕ್ರಮವನ್ನು ಸ್ವಾಗತಿಸಿದ್ದಾರೆ. ಕಾಂಡೋಮ್ ಗಳ ರಾಶಿಯ ಮೇಲೆ ದಿನ ನಡೆದಾಡುವುದು ಇನ್ನು ತಪ್ಪುತ್ತದೆ ಎಂದು ಉದ್ಗರಿಸಿದ್ದಾರೆ. ಇನ್ನೊಂದೆಡೆ ವೇಶ್ಯೆಯರಿಗೆ ತಾತ್ಕಾಲಿಕ ಪುನರ್ವಸತಿ, ಇತರೆ ಸೌಲಭ್ಯ ಒದಗಿಸುವಲ್ಲಿ ಸರ್ಕಾರೇತರ ಸಂಸ್ಥೆಗಳು ನಿರತವಾಗಿದೆ.












Click it and Unblock the Notifications