'ನಿದ್ದೇಲಿ ನಡೆಯುತ್ತಿದ್ದಾಗ ಅತ್ಯಾಚಾರ ಮಾಡಿಬಿಟ್ಟರು'

'ಮೊನ್ನೆ dinner partyಗೆ ಅಂತ ಹೋಗಿದ್ದೆ. ಅಲ್ಲೇ ಲೇಟಾಗ್ಹೋಯ್ತು. ಅದಕ್ಕೆ ಅಲ್ಲೇ ಉಳಿದುಕೊಂಡುಬಿಟ್ಟೆ. ಆದರೆ ನನಗೆ ನಿದ್ರೆ ಮಾಡುವಾಗ ನಡೆದಾಡುವ ಅಭ್ಯಾಸವಿದೆ (somnambulism). ಅದ್ಯಾವ ಮಾಯದಲ್ಲೋ ಎದ್ದು ನಡೆದಾಡುವಾಗ ನನ್ನ ಮೇಲೆ ರೇಪ್ ಮಾಡಿಬಿಟ್ಟರು' ಎಂದು ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದಂತೆ, 48 ವರ್ಷದ ಮಹಿಳೆ ಪೊಲೀಸರ ಎದುರು ಗೊಳೋ ಎಂದಿದ್ದಾಳೆ.
ಏನಾಯಿತು ಎಂದರೆ ಈ ಪುಣ್ಯಾತ್ತಗಿತ್ತಿ ಪಾರ್ಟಿ ಮುಗಿಸಿ, ನಿದ್ದೆಗೆ ಜಾರಿದ್ದಾಳೆ. ನಟ್ಟನಡುರಾತ್ರಿಯಲ್ಲಿ ನಿದ್ರೆ ಮಾಡುತ್ತಿರುವಾಗ ಎದ್ದು ಮನೆಯಿಂದ ಹೊರಬಿದ್ದಿದ್ದಾಳೆ. ಸೀದಾ ರಸ್ತೆಗೆ ಬಂದವಳೇ ರಸ್ತೆಯನ್ನು ಅಳೆಯುತ್ತಾ ಸಾಗಿದ್ದಾಳೆ. ದೂರದಿಂದ ಮಹಿಳೆಯ ಅಪರಾತಪರ ಅವತಾರವನ್ನು ಗ್ರಹಿಸಿದ ದುಷ್ಕರ್ಮಿಗಳು ... ನಡೆಯಬಾರದ್ದು 'ನಡೆ'ದಿದೆ.
ಅತ್ಯಾಚಾರ ಪ್ರಕರಣಗಳ ತನಿಖೆಯಲ್ಲಿ ನೈಪುಣ್ಯ ಪಡೆದಿರುವ ಮೆಟ್ರೋಪಾಲಿಟನ್ ಪೊಲೀಸರು (Operation Sapphire) ಈಗ ಅತ್ಯಾಚಾರಿಗಳ ಹಿಂದೆ ಬಿದ್ದಿದ್ದಾರೆ.












Click it and Unblock the Notifications