ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಸಚಿವ ಸಂಪುಟ

Posted By:
Subscribe to Oneindia Kannada

ಬೆಂಗಳೂರು, ಜು. 12 : ನಾಲ್ಕು ಬಾರಿ ಮುಖ್ಯಮಂತ್ರಿಯಾಗುವ ಚಾನ್ಸ್ ತಪ್ಪಿಸಿಕೊಂಡಿದ್ದ ಹುಬ್ಬಳ್ಳಿ ಗ್ರಾಮೀಣ ಶಾಸಕ, ಸೋಲಿಲ್ಲದ ಸರದಾರ ಎಂದೇ ಬಿರುದು ಪಡೆದಿರುವ ಜಗದೀಶ್ ಶೆಟ್ಟರ್ ಅವರು ಕರ್ನಾಟಕದ 21ನೇ ಮುಖ್ಯಮಂತ್ರಿಯಾಗಿ ರಾಜಭವನದಲ್ಲಿ ನಡೆದ ಸಮಾರಂಭದಲ್ಲಿ ಪ್ರಮಾಣವಚನ ಸ್ವೀಕರಿಸಿದರು.

ಮುಖ್ಯಮಂತ್ರಿಯ ಜೊತೆಗೆ ಯಾರ್ಯಾರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ, ಯಡಿಯೂರಪ್ಪ ಬಣಕ್ಕೆ ಎಷ್ಟು ಪಾಲು ದೊರೆಯಲಿದೆ, ಸದಾನಂದ ಗೌಡರ ಬಣಕ್ಕೆ ಎಷ್ಟು ಸ್ಥಾನಗಳು ಲಭಿಸಲಿವೆ ಎಂಬ ಬಗ್ಗೆ ಭಾರೀ ಕುತೂಹಲ ಮತ್ತು ಊಹಾಪೋಹಗಳು ಎದ್ದಿದ್ದವು. ಜೊತೆಗೆ ಉಪ ಮುಖ್ಯಮಂತ್ರಿಯಾಗಿ ಯಾರು ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂಬ ಬಗ್ಗೆಯೂ ಚರ್ಚೆಗಳು ನಡೆದಿದ್ದವು.

ಅಂತಿಮವಾಗಿ, ಜಗದೀಶ್ ಶೆಟ್ಟರ್ ಜೊತೆಗೆ ಉಪ ಮುಖ್ಯಮಂತ್ರಿಗಳಾಗಿ ಯಡಿಯೂರಪ್ಪ ಬಣದಿಂದ ಆರ್ ಅಶೋಕ್ ಮತ್ತು ಸದಾನಂದ ಗೌಡರ ಬಣದಿಂದ ಕೆಎಸ್ ಈಶ್ವರಪ್ಪ ಅವರು ಪ್ರಮಾಣ ಸ್ವೀಕರಿಸಿದ್ದಾರೆ. ಶೆಟ್ಟರ್ ಜೊತೆಗೆ ಒಟ್ಟು 31 ಶಾಸಕರು ಸಂಪುಟ ದರ್ಜೆಯ ಸಚಿವರಾಗಿ ಆಡಳಿತ ಯಂತ್ರವನ್ನು ನಡೆಸಲಿದ್ದಾರೆ.

ಈ 31 ಸಚಿವರಲ್ಲಿ 21 ಮಂತ್ರಿಗಳು ಮುಖ್ಯಮಂತ್ರಿ ಸ್ಥಾನವನ್ನು ತ್ಯಾಗ ಮಾಡಿದ ಸದಾನಂದ ಗೌಡರ ಸಂಪುಟದಲ್ಲಿ ಸಚಿವರಾಗಿ ವಿವಿಧ ಹುದ್ದೆಗಳನ್ನು ವಹಿಸಿಕೊಂಡಿದ್ದರು. ನಿಧನರಾದವರು ಮತ್ತು ಅಮಾನತುಗೊಂಡಿರುವ ಕೆಲವರನ್ನು ಹೊರತುಪಡಿಸಿ ಉಳಿದ 21 ಸಚಿವರು ಸ್ಥಾನ ಉಳಿಸಿಕೊಂಡಿದ್ದಾರೆ. ಯಡಿಯೂರಪ್ಪ ಸಂಪುಟದಲ್ಲಿದ್ದ ಮೂವರು, ಆರು ಹೊಸ ಮುಖಗಳು ಮತ್ತು ಮೂವರು ವಿಧಾನ ಪರಿಷತ್ ಸದಸ್ಯರು ಸಂಪುಟ ಸೇರಿಕೊಂಡಿದ್ದಾರೆ.

ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಕೇರೂರ ಗ್ರಾಮದಲ್ಲಿ 17ನೇ ಡಿಸೆಂಬರ್ 1955ರಲ್ಲಿ ಜನಿಸಿದ ಜಗದೀಶ್ ಶೆಟ್ಟರ್ ಅವರ ಸಂಪುಟವನ್ನು ಸೇರಿಕೊಂಡಿರುವ ಶಾಸಕರ ಹೆಸರು, ಕ್ಷೇತ್ರಗಳ ವಿವರಗಳು ಕೆಳಗಿನಂತಿವೆ.

ಕ್ರಮ ಸಂಖ್ಯೆ ಸಚಿವರ ಹೆಸರು ಕ್ಷೇತ್ರ
1 ಜಗದೀಶ್ ಶೆಟ್ಟರ್ (ಮುಖ್ಯಮಂತ್ರಿ) ಹುಬ್ಬಳ್ಳಿ ಗ್ರಾಮೀಣ
2 ಕೆ.ಎಸ್. ಈಶ್ವರಪ್ಪ (ಉಪ ಮುಖ್ಯಮಂತ್ರಿ) ಶಿವಮೊಗ್ಗ ಗ್ರಾಮೀಣ
3 ಆರ್. ಅಶೋಕ್ (ಉಪ ಮುಖ್ಯಮಂತ್ರಿ) ಪದ್ಮನಾಭನಗರ
4 ಗೋವಿಂದ ಕಾರಜೋಳ ಮುಧೋಳ
5 ಎಸ್. ಸುರೇಶ್ ಕುಮಾರ್ ರಾಜಾಜಿನಗರ
6 ವಿಶ್ವೇಶ್ವರ ಹೆಗಡೆ ಕಾಗೇರಿ ಶಿರಸಿ
7 ಬಸವರಾಜ ಬೊಮ್ಮಾಯಿ ಶಿಗ್ಗಾಂವಿ
8 ಸಿಎಂ ಉದಾಸಿ ಹಾನಗಲ್
9 ಉಮೇಶ್ ವಿಶ್ವನಾಥ ಕತ್ತಿ ಹುಕ್ಕೇರಿ
10 ಶೋಭಾ ಕರಂದ್ಲಾಜೆ ಯಶವಂತಪುರ
11 ಮುರುಗೇಶ್ ನಿರಾಣಿ ಬಿಳಗಿ
12 ವಿ. ಸೋಮಣ್ಣ ವಿಧಾನ ಪರಿಷತ್ ಸದಸ್ಯ
13 ಬಿ.ಎನ್. ಬಚ್ಚೇಗೌಡ ಹೊಸಕೋಟೆ
14 ಎಂ.ಪಿ. ರೇಣುಕಾಚಾರ್ಯ
ಹೊನ್ನಾಳಿ
15 ಸಿ.ಪಿ. ಯೋಗೇಶ್ವರ್
ಚೆನ್ನಪಟ್ಟಣ
16 ಎಸ್.ಎ. ರವೀಂದ್ರನಾಥ್
ದಾವಣಗೆರೆ
17 ರೇವುನಾಯಕ್ ಬೆಳಮಗಿ
ಗುಲಬರ್ಗ ಗ್ರಾಮೀಣ
18 ಬಾಲಚಂದ್ರ ಜಾರಕಿಹೊಳಿ
ಅರಭಾವಿ
19 ಎಸ್.ಎ. ರಾಮದಾಸ್
ಕೃಷ್ಣರಾಜ
20 ಆನಂದ ಆಸ್ನೋಟಿಕರ್
ಕಾರವಾರ
21 ಎ. ನಾರಾಯಣಸ್ವಾಮಿ
ಆನೇಕಲ್
22 ವರ್ತೂರು ಪ್ರಕಾಶ್
ಕೋಲಾರ
23 ನರಸಿಂಹ ನಾಯಕ್ (ರಾಜೂಗೌಡ)
ಸುರಪುರ
24 ಸೊಗಡು ಶಿವಣ್ಣ
ತುಮಕೂರು ನಗರ
25 ಸಿ.ಟಿ. ರವಿ
ಚಿಕ್ಕಮಗಳೂರು
26 ಡಿ.ಎನ್. ಜೀವರಾಜ್
ಶೃಂಗೇರಿ
27 ಎಸ್.ಕೆ. ಬೆಳ್ಳುಬ್ಬಿ
ಬಸವನ ಬಾಗೇವಾಡಿ
28 ಅರವಿಂದ ಲಿಂಬಾವಳಿ
ಮಹದೇವಪುರ
29 ಬಿ.ಜೆ. ಪುಟ್ಟಸ್ವಾಮಿ
ವಿಧಾನ ಪರಿಷತ್ ಸದಸ್ಯ
30 ಆನಂದ್ ಸಿಂಗ್
ಹೊಸಪೇಟೆ
31 ಕಳಕಪ್ಪ ಬಂಡಿ
ರೋಣ
32 ಕೋಟ ಶ್ರೀನಿವಾಸ ಪೂಜಾರಿ
ವಿಧಾನ ಪರಿಷತ್ ಸದಸ್ಯ
33 ಅಪ್ಪಚ್ಚು ರಂಜನ್
ಮಡಿಕೇರಿ
34 ಸುನೀಲ್ ಕುಮಾರ್ ವಲ್ಯಾಪುರೆ
ಚಿಂಚೋಳಿ

ಗುರುವಾರ ಸಂಜೆಯ ಹೊತ್ತಿಗೆ ಖಾತೆ ಹಂಚಿಕೆಯಾಗುವ ಸಂಭವನೀಯತೆಯಿದ್ದು, ಸಂಪೂರ್ಣ ವಿವರಗಳಿಗಾಗಿ ನಿರೀಕ್ಷಿಸಿ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

Please Wait while comments are loading...