ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Q1: ಟಿಸಿಎಸ್ ನಿವ್ವಳ ಲಾಭ ಶೇ 37.4 ಹೆಚ್ಚಳ

By Mahesh
|
Google Oneindia Kannada News

TCS Q1
ಬೆಂಗಳೂರು, ಜು.12: ಭಾರತದ ಅತಿದೊಡ್ಡ ಸಾಫ್ಟ್ ವೇರ್ ಸಂಸ್ಥೆ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ಸಂಸ್ಥೆ ಗುರುವಾರ(ಜು.12) ತನ್ನ ಮೊದಲ ತ್ರೈಮಾಸಿಕ ವರದಿಯನ್ನು ಪ್ರಕಟಿಸಿದೆ. ಮಾರುಕಟ್ಟೆ ನಿರೀಕ್ಷೆಗೆ ತಕ್ಕಂತೆ ಪ್ರಗತಿ ಸಾಧಿಸಿರುವ ಟಿಸಿಎಸ್ ಸಂಸ್ಥೆ 2012-13ರ ಮೊದಲ ತ್ರೈಮಾಸಿಕದಲ್ಲಿ ಶುಭಾರಂಭ ಮಾಡಿದೆ.

ಯುರೋಪ್, ಅಮೆರಿಕದ ಆರ್ಥಿಕ ಸ್ಥಿತಿಗತಿ ಅವ್ಯವಸ್ಥೆ ನಡುವೆಯೂ ಟಿಸಿಎಸ್ ಪ್ರಗತಿ ಸಾಧಿಸಿರುವುದು ಇನ್ಫೋಸಿಸ್ ಸಂಸ್ಥೆಯ ಪ್ರಥಮ ತ್ರೈ ಮಾಸಿಕದಲ್ಲಿ ಆದ ಗಾಯದ ಮೇಲೆ ಉಪ್ಪು ಸವರಿದಂತೆ ಆಗಿದೆ.

ಟಿಸಿಎಸ್ ಸಂಸ್ಥೆ 14,890 ಕೋಟಿ ರು ಆದಾಯ ಗಳಿಸಿದ್ದು, ಕಳೆದ ವರ್ಷ ಇದೇ ಅವಧಿ(y-o-y)ಗೆ ಹೋಲಿಸಿದರೆ ಶೇ 37.7ರಷ್ಟು ಪ್ರಗತಿ ಸಾಧಿಸಲಾಗಿದೆ. ಕಳೆದ ತ್ರೈಮಾಸಿಕಕ್ಕೆ ಹೋಲಿಸಿದರೆ(q-o-q)ಪ್ರಸಕ್ತ ತ್ರೈಮಾಸಿಕದಲ್ಲಿ ಶೇ 12.1ರಷ್ಟು ಏರಿಕೆಯಾಗಿದೆ.

ಒಟ್ಟು ನಿವ್ವಳ ಲಾಭ y-o-yನಲ್ಲಿ ಶೇ 37.4ರಷ್ಟು ಏರಿಕೆನಂತೆ 3,318 ಕೋಟಿ ಗಳಿಕೆಯಾಗಿದೆ. q-o-qನಲ್ಲಿ ಶೇ 14.6ರಷ್ಟು ಪ್ರಗತಿ ಕಾಣಲಾಗಿದೆ.

ನಿರ್ವಹಣಾ ಲಾಭ y-o-yನಲ್ಲಿ ಶೇ 44.3ರಷ್ಟು ಏರಿಕೆ ಕಂಡು 4,077ಕೋಟಿ ರು ಬಂದಿದೆ. ಟಿಸಿಎಸ್ ಸಂಸ್ಥೆ ಪ್ರತಿ ಷೇರಿಗೆ 3 ರು.ನಂತೆ ಡಿವಿಡೆಂಡ್ ಘೋಷಿಸಿದೆ. ಪ್ರತಿ ಷೇರಿನ ಗಳಿಗೆ ರು. 16.92ಗೆ ನಿಂತಿತ್ತು.

ತ್ರೈಮಾಸಿಕ ವರದಿ ಬಗ್ಗೆ ಮಾತನಾಡಿದ, ಸಿಇಒ ಎನ್ ಚಂದ್ರಶೇಖರನ್, 'ಸೇವಾಕ್ಷೇತ್ರದಲ್ಲಿ ಉತ್ತಮ ಪ್ರಗತಿ ಸಾಧಿಸಲಾಗಿದ್ದು, ಹೊಸ ತಂತ್ರಜ್ಞಾನದ ಮೇಲೆ ಮಾಡಿರುವ ಹೂಡಿಕೆ ಫಲ ನೀಡಿದ್ದು ಇದರಿಂದ ಮಾರುಕಟ್ಟೆಯಲ್ಲಿ ಮೌಲ್ಯ ಹೆಚ್ಚಿದೆ' ಎಂದರು.

ಸರಾಸರಿ ಸಂಬಳ ಏರಿಕೆ, ನೇಮಕಾತಿ ವೆಚ್ಚಳ ಏರಿಕೆ ಹಾಗೂ ವೀಸಾ ಶುಲ್ಕ ಏರಿಕೆ ಇದು ಸಂಸ್ಥೆ ಮುಂದಿರುವ ಸವಾಲು. H1B ವೀಸಾಗಾಗಿ ಸಂಸ್ಥೆ ಹೆಚ್ಚಿನ ಅರ್ಜಿ ಸಲ್ಲಿಸಿದೆ ಎಂದು ಸಿಇಒ ಚಂದ್ರಶೇಖರನ್ ಹೇಳಿದರು.

ಪ್ರಸಕ್ತ ತ್ರೈಮಾಸಿಕದಲ್ಲಿ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ಸಂಸ್ಥೆ ಒಟ್ಟಾರೆ 13, 831 ಉದ್ಯೋಗಿ(ನಿವ್ವಳ ಸೇರ್ಪಡೆ 4,962)ಗಳನ್ನು ನೇಮಕಾತಿ ಮಾಡಿಕೊಂಡಿದೆ. 29 ಹೊಸ ಗ್ರಾಹಕರನ್ನು ಸೇರ್ಪಡೆ ಮಾಡಿಕೊಳ್ಳಲಾಗಿದೆ. attrition rate (LTM) ಶೇ 12.0 ರಷ್ಟಿದೆ. ಟಿಸಿಎಸ್ ನಲ್ಲಿ ಒಟ್ಟು 2,43,545 ಜನ ಉದ್ಯೋಗಿಗಳು ಇದ್ದಾರೆ ಎಂದು ಪ್ರಕಟಿಸಲಾಗಿದೆ.

ಪ್ರಸಕ್ತ ಆರ್ಥಿಕ ವರ್ಷದಲ್ಲಿ ಸುಮಾರು 50,000 ಹೊಸ ನೇಮಕಾತಿ ಮಾಡಿಕೊಳ್ಳುವುದಾಗಿ ಕಂಪನಿ ಹೇಳಿದೆ. ಪ್ರಥಮ ತ್ರೈಮಾಸಿಕದಲ್ಲಿ ರೀಟೈಲ್, ಟೆಲಿಕಾಂ ಹಾಗೂ BFSI (ಬ್ಯಾಂಕಿಂಗ್, ಫೈನಾನ್ಸ್ ಸರ್ವೀಸಸ್ ಹಾಗೂ ಇನ್ಸೂರೆನ್ಸ್) ಕ್ಷೇತ್ರದಲ್ಲಿ ಉತ್ತಮ ಪ್ರಗತಿ ಸಾಧಿಸಿದೆ. ಬಿಎಸ್ ಇನಲ್ಲಿ ಟಿಸಿಎಸ್ ಷೇರುಗಳು ದಿನದ ಅಂತ್ಯಕ್ಕೆ 1236.10ರು ನಂತೆ ಶೇ 1.80ರಷ್ಟು ಇಳಿಕೆ ಕಂಡಿತ್ತು.

English summary
India's largest software service exporter, Tata Consultancy Services (TCS) results came inline with market expectation, with a good set of numbers for Q1 2012-13.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X