ಯಾರೂ ಬೇಡ; ಅನಂತ ಕುಮಾರೇ ರಾಜ್ಯಾಧ್ಯಕ್ಷರಾಗಲಿ

ananth-kumar-may-head-karnataka-bjp-yeddyurappa
ಬೆಂಗಳೂರು, ಜುಲೈ 11: ಏನು, ಅನಂತ ಕುಮಾರ್ ಬಗ್ಗೆ ಯಡಿಯೂರಪ್ಪ ಈ ಮಾತು ಹೇಳಿದರೇ? ಎಂದು ಗಾಬರಿಯಾಗಬೇಡಿ. ರಾಜಕಾರಣದಲ್ಲಿ ಅದರಲ್ಲೂ ಅಧೋಗತಿಗೆ ತಲುಪಿರುವ ರಾಜ್ಯ ಬಿಜೆಪಿಯು ಯಾವುದೇ ದುಸ್ಸಾಹಸಕ್ಕೂ ಕೈಹಾಕಬಹುದು.

ಬಿಜೆಪಿ ಮೂಲಗಳ ಪ್ರಕಾರ ಖುದ್ದು ಯಡಿಯೂರಪ್ಪ ಮತ್ತು ನಿಯೋಜಿತ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಈ ಬಗ್ಗೆ ಅಂತಿಮ ಸುತ್ತಿನ ಮಾತುಕತೆಯಲ್ಲಿ ತೊಡಗಿದ್ದಾರೆ ಎಂಬುದು ತಾಜಾ ಮಾಹಿತಿ. ನಿರ್ಗಮಿತ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡರು ನಿನ್ನೆ ರಾಜ್ಯ ರಾಜಕಾರಣದಲ್ಲಿ ದಿಢೀರ್ ದಂಗೆಯೆಂದ್ದಿದ್ದನ್ನು ಕಂಡು ಯಡಿಯೂರಪ್ಪ ಅಂತಹ ಯಡಿಯೂರಪ್ಪ ಅವರೇ ದಂಗಾಗಿದ್ದಾರೆ.

ಅಧಿಕಾರದಲ್ಲಿದ್ದಷ್ಟೂ ದಿನ ತನ್ನನ್ನು ಇನ್ನಿಲ್ಲದಂತೆ ಕಾಡಿದ ಸದಾನಂದ ಮುಂದೆ ರಾಜ್ಯಾಧ್ಯಕ್ಷ ಸ್ಥಾನದಲ್ಲಿ ಕುಳಿತರೆ ತಾನು ಸದಾದುಃಖಿಯಾಗುತ್ತೇನೆ ಎಂದು ದಿಢೀರನೆ ಲೆಕ್ಕಾಚಾರ ಹಾಕಿರುವ ಯಡಿಯೂರಪ್ಪ ಶತಾಯಗತಾಯ ಆತನನ್ನು ರಾಜ್ಯಾಧ್ಯಕ್ಷ ಸ್ಥಾನದಲ್ಲಿ ಕೂಡಿಸಬಾರದು ಎಂದು ನಿರ್ಧರಿಸಿದ್ದಾರೆ ಎನ್ನಲಾಗಿದೆ.

'ಸದಾ'ನಂದರ ಬಂಡಾಯದ ಸಮ್ಮುಖದಲ್ಲಿ, ಹಳೆಯ ಗೆಳೆಯನ ಪಾದವೇ ಗಟ್ಟಿ ಎಂಬಂತೆ ಯಡಿಯೂರಪ್ಪ ಅವರು ರಾಜಕಾರಣದಲ್ಲಿ ಯಾರೂ ಶತ್ರುಗಳಲ್ಲ ಎಂಬಂತೆ ತಮ್ಮ ಪುರಾತನ ದುಷ್ಮನ್ ಅನಂತ ಕುಮಾರ್ ಅವರನ್ನು ಒಪ್ಪಿ, ಅಪ್ಪಿಕೊಳ್ಳಲು ಮಾನಸಿಕವಾಗಿ ಸಿದ್ಧರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಒಟ್ಟಿನಲ್ಲಿ ಅನಂತ್ ಗೆ ಅನಂತಾವಕಾಶ: ಒಂದು ವೇಳೆ ಪಕ್ಷದ ವರಿಷ್ಠರು ರಾಜ್ಯಕ್ಕೆ ಇಬ್ಬರು ಡೆಪ್ಯುಟಿಗಳನ್ನು ದಯಪಾಲಿಸಿದರೆ ಕೆಎಸ್ ಈಶ್ವರಪ್ಪಗೂ ಉಪ ಮುಖ್ಯಮಂತ್ರಿ ಹುದ್ದೆ ಪ್ರಾಪ್ತಿಯಾಗಲಿದೆ. ಅವರಿಂದ ತೆರವಾಗುವ ರಾಜ್ಯಾಧ್ಯಕ್ಷ ಸ್ಥಾನದಲ್ಲಿ ಸಂಸದ ಅನಂತ ಕುಮಾರ್ ಅವರನ್ನು ಪ್ರತಿಷ್ಠಾಪಿಸಿದರೆ ಹೇಗೆ? ಎಂದು ಯಡಿಯೂರಪ್ಪ ಅವರು ಒಂದೇ ಸಮನೆ ಆಲೋಚಿಸುತ್ತಿದ್ದಾರಂತೆ.

ಕುತೂಹಲದ ಸಂಗತಿಯೆಂದರೆ, ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಇಲ್ಲವೇ ಪರಿಶಿಷ್ಟ ಜಾತಿಯ ಗೋವಿಂದ ಕಾರಜೋಳಗೆ ರಾಜ್ಯಾಧ್ಯಕ್ಷ ಹುದ್ದೆ ನೀಡಿದರೆ ಪಕ್ಷಕ್ಕೆ ಹೆಚ್ಚಿನ ಬಲ ಬರಲಿದೆ ಎಂಬ ಚಿಂತನೆ ನಡೆದಿತ್ತಾದರೂ ಸದ್ಯದ ಸಂದಿಗ್ಧ ಪರಿಸ್ಥಿತಿಯಲ್ಲಿ ಅನಂತ ಕುಮಾರ್‌ಗೆ ಅಧ್ಯಕ್ಷ ಹೊಣೆಗಾರಿಕೆ ವಹಿಸಿದರೆ ಸಮರ್ಥವಾಗಿ ನಿಭಾಯಿಸಬಹುದು ಎಂಬ ಲೆಕ್ಕಾಚಾರ ಪಕ್ಷದ ವರಿಷ್ಠರಲ್ಲೂ ಇದೆ.

ಮುಖ್ಯಮಂತ್ರಿ ಹುದ್ದೆ ತೊರೆಯುತ್ತಿರುವ ಡಿವಿ ಸದಾನಂದ ಗೌಡರಿಗೆ ರಾಜ್ಯಾಧ್ಯಕ್ಷ ಹುದ್ದೆ ಕೊಡಬೇಕು ಎಂಬ ಬೇಡಿಕೆ (ಒಕ್ಕಲಿಗರಿಂದ) ತೀವ್ರವಾಗಿದೆಯಾದರೂ ಯಡಿಯೂರಪ್ಪ ಸಹ ಅಷ್ಟೇ ವಿರೋಧವೊಡ್ಡಿರುವ ಹಿನ್ನೆಲೆಯಲ್ಲಿ ವರಿಷ್ಠರು ಇನ್ನೂ ಸ್ಪಷ್ಟ ತೀರ್ಮಾನ ತೆಗೆದುಕೊಂಡಿಲ್ಲ. ಒಂದು ವೇಳೆ ಸದಾನಂದಗೌಡರಿಗೇ ಅಧ್ಯಕ್ಷ ಹುದ್ದೆ ಕೊಟ್ಟರೆ, ಒಕ್ಕಲಿಗರಾದ ಅಶೋಕ್‌ಗೆ ಡಿಸಿಎಂ ಹುದ್ದೆ ಕೈತಪ್ಪುವ ಸಾಧ್ಯತೆಯಿದೆ ಎಂಬ ಆತಂಕವೂ ಇದೆ.

ಉತ್ತರ ಕರ್ನಾಟಕ ಭಾಗದ ಲಿಂಗಾಯತ ಸಮುದಾಯದ ಜಗದೀಶ್ ಶೆಟ್ಟರ್‌ಗೆ ಸಿಎಂ, ಹಿಂದುಳಿದ ಕುರುಬ ಜನಾಂಗಕ್ಕೆ ಸೇರಿದ ಈಶ್ವರಪ್ಪ ಹಾಗೂ ಹಳೆ ಮೈಸೂರು ಭಾಗದ ಒಕ್ಕಲಿಗ ಸಮುದಾಯಕ್ಕೆ ಸೇರಿದ ಅಶೋಕ್‌ಗೆ ಡಿಸಿಎಂ ಹಾಗೂ ಬ್ರಾಹ್ಮಣರಾದ ಅನಂತಕುಮಾರ್‌ಗೆ ರಾಜ್ಯಾಧ್ಯಕ್ಷ ಹುದ್ದೆ ನೀಡಿದರೆ ಮುಂದಿನ ಚುನಾವಣೆಗೆ ಹೋಗಲು ಒಳ್ಳೆ ಜಾತಿ ಸಮೀಕರಣ ನಿರ್ಮಾಣ ಆಗಲಿದೆ ಎಂಬ ಎಣಿಕೆಯೂ ನಡೆದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+