ಉಡುಪಿ ಮಧ್ವಸರೋವರದಲ್ಲಿ ವಿದ್ಯಾರ್ಥಿ ಮುಳುಗಿ ಸಾವು

Student drowns in Udupi Krishna Math Madhwa Sarovara
ಉಡುಪಿ, ಜು 11: ಉಡುಪಿ ಶ್ರೀಕೃಷ್ಣ ಮಠದ ಆವರಣದಲ್ಲಿರುವ ಮಧ್ವ ಸರೋವರ ಪುಷ್ಕರಣಿಯಲ್ಲಿ ವಿದ್ಯಾರ್ಥಿ ಮುಳುಗಿ ಸಾವನ್ನಪ್ಪಿದ ದುರ್ಘಟನೆ ಸಂಭವಿಸಿದೆ. ಪೂರ್ಣಪ್ರಜ್ಞ ಕಾಲೇಜಿನಲ್ಲಿ ದ್ವಿತೀಯ ಬಿ.ಕಾಂ ವ್ಯಾಸಂಗ ಮಾಡುತ್ತಿರುವ ಪ್ರಮೋದ್ (20) ಎನ್ನುವವನು ಮೃತ ಪಟ್ಟ ವಿದ್ಯಾರ್ಥಿ.

ಬುಧವಾರ (ಜು. 11) ಸಂಜೆ 6.30ರ ಸುಮಾರಿಗೆ ಈ ದುರ್ಘಟನೆ ನಡೆದಿದೆ. ಈತನಿಗೆ ಸರಿಯಾಗಿ ಈಜು ಬರುತ್ತಿರಲಿಲ್ಲ. ಮುಳುಗುತ್ತಿದ್ದ ಈತನನ್ನು ರಕ್ಷಿಸಲು ಭದ್ರತಾ ಸಿಬ್ಬಂದಿ ಹರಸಾಹಸ ಪಟ್ಟರೂ ಪ್ರಯೋಜನವಾಗಿಲ್ಲ ಎನ್ನಲಾಗಿದೆ..

ಸರೋವರದಿಂದ ಈತನ ಶವ ಹೊರಕ್ಕೆ ತೆಗೆಯಲಾಗಿದೆ. ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಈತನ ಶವವನ್ನು ಉಡುಪಿ ಸರಕಾರಿ ಆಸ್ಪತ್ರೆಯಲ್ಲಿ ಇಡಲಾಗಿದೆ.

ಪುಷ್ಕರಣಿಯಲ್ಲಿ ಮುಳುಗಿ ಸಾಯುವ ಘಟನೆ ಈ ಹಿಂದೆಯೂ ನಡೆದಿದೆ. ಸುಮಾರು 25 ಅಡಿ ಆಳವಿರುವ ಪುಷ್ಕರಣಿಯ ಒಳಗಡೆ ಎರಡು ಬಾವಿಗಳೂ ಇವೆ. ಅಷ್ಟ ಮಠದ ಸ್ವಾಮೀಜಿಗಳು ಶ್ರೀಕೃಷ್ಣ ಪೂಜೆಗೆ ತೆರಳುವ ಮುನ್ನ ಇಲ್ಲಿ ಸ್ನಾನ ಮಾಡಿ ಹೋಗುವುದು ಪದ್ಧತಿ.

1980ರ ಸುಮಾರಿನಲ್ಲಿ ಹಿಂದಿನ ಕಾಣಿಯೂರು ಮಠದ ಸ್ವಾಮೀಜಿಗಳು ತಮ್ಮ ಪರ್ಯಾಯದ ಅವಧಿಯಲ್ಲಿ ಪುಷ್ಕರಣಿಯ ಕೆಸೆರೆತ್ತುವ ಕೆಲಸವನ್ನು ಕೈಗೊಂಡಿದ್ದರು. ಇಂದಿನ ಈ ದುರ್ಘಟನೆಯ ನಂತರ ಪುಷ್ಕರಣಿ ಶುದ್ದೀಕರಣ ಕಾರ್ಯದ ಬಗ್ಗೆ ಹೆಚ್ಚಿನ ಮಾಹಿತಿ ಸದ್ಯಕ್ಕೆ ಲಭ್ಯವಾಗಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+