ಸದಾನಂದ ಗೌಡ u ಟರ್ನ್; ಅಶೋಕ್ ಕಂಗಾಲು

ಗೃಹ ಸಚಿವರ ಅಶೋಕ್ ಎದುರೇ U ಟರ್ನ್ ಹೊಡೆದ ಸದಾನಂದ:
ಬೆಂಗಳೂರು ಮಟ್ಟಿಗೆ ಇಲ್ಲಿನ ಅಷ್ಟೂ ಶಾಸಕರನ್ನು ತಮ್ಮ ಹಿಡಿತದಲ್ಲಿಟ್ಟುಕೊಂಡು ಮುಕುಟವಿಲ್ಲದ ಮಹಾರಾಜರಾಗಿದ್ದ ಆರ್ ಅಶೋಕ್ ಅವರ ವಿರುದ್ಧ ಬಹುತೇಕ ಅಷ್ಟೂ ಶಾಸಕರು ತಿರುಗಿಬಿದ್ದಿದ್ದಾರೆ. ಸತೀಶ್ ರೆಡ್ಡಿ ಮತ್ತು ಎಂ ಕೃಷ್ಣಪ್ಪ ಅವರನ್ನು ಹೊರತುಪಡಿಸಿ, ಉಳಿದೆಲ್ಲ ಶಾಸಕರು ಸದಾನಂದರ ಬಣಕ್ಕೆ shift ಆಗಿದ್ದಾರೆ.
ಆರಂಭದಿಂದಲೂ ತೆರೆಯ ಮರೆಯಲ್ಲಿ ಉಪಮುಖ್ಯಮಂತ್ರಿ ಪಟ್ಟಕ್ಕಾಗಿ ಲಾಬಿ ನಡೆಸುತ್ತಾ, ಗುಪ್ತ ಆಟಕ್ಕೆ ಇಳಿದಿದ್ದ ಆಶೋಕ್ ಅವರಿಗೆ ಇದು ಬರಸಿಡಿಲಿನಂತೆ ಬಡಿದಿದೆ. ಇದರಿಂದ ಅಶೋಕ್ ಸದಾ ಯಡಿಯೂರಪ್ಪ ಬಣಕ್ಕೆ ಸೇರಿದವರು ಎಂಬ ಸೂಕ್ಷ್ಮವನ್ನು ಅರಿತಿರುವ ಸದಾನಂದರು ಅಶೋಕ್ ಅವರಿಗೆ ಬಿಸಿಮುಟ್ಟಿಸಿದ್ದಾರೆ.
ತಾವು ರಾಜ್ಯಾಧ್ಯಕ್ಷ ಸ್ಥಾನಕ್ಕೆ ಏರಿ, ಈಶ್ವರಪ್ಪ ಅಥವಾ ಗೋವಿಂದ ಕಾರಜೋಳ ಅವರಿಗೆ ಡಿಸಿಎಂ ಪಟ್ಟ ನೀಡಬೇಕು ಎಂಬುದು ಸದಾನಂದರ ಹೊಸ ವರಾತ.












Click it and Unblock the Notifications