ಕೆಎಂಎಫ್: ದಿನವೊಂದಕ್ಕೆ 14 ಲಕ್ಷ ಹಾಲು ಸಂಗ್ರಹ ಗುರಿ

ಈಗ ದಿನನಿತ್ಯ 4ರಿಂದ 5 ಲಕ್ಷ ಲೀಟರ್ ಹಾಲು ಹೆಚ್ಚು ಉಳಿಕೆಯಾಗುತ್ತಿತ್ತು, ಖರೀದಿಯಲ್ಲಾಗಿರುವ ಅನಿರೀಕ್ಷಿತ ಬೆಳವಣಿಗೆಯಿಂದ 14 ಲಕ್ಷ ಲೀಟರ್ ಹಾಲು ಒಂದೆಡೆ ಶೇಖರಣೆಯಾಗುತ್ತಿದೆ. ಕಳೆದ ವರ್ಷ ಈ ಹೊತ್ತಿಗೆ 43 ಲಕ್ಷ ಕಿಲೋ ಹಾಲು ಖರೀದಿ ಮಾಡಲಾಗುತ್ತಿದ್ದರೆ
ಈಗ 52 ಲಕ್ಷ ಕಿಲೋಗೆ ಹೆಚ್ಚಿದೆ ಎಂದು ಫೆಡರೇಶನ್ ವರದಿ ಮಾಡಿದೆ.
ಪ್ರಸಕ್ತ ಕೆಎಂಎಫ್ 31 ಲಕ್ಷ ದ್ರವೀಕೃತ ಹಾಲು, 3.5 ಲಕ್ಷ ಲೀಟರ್ ಮೊಸರು, 2.5 ಲಕ್ಷ ಲೀಟರ್ UHT ಹಾಲು (ಗುಡ್ಲೈಫ್) ಮತ್ತು ಒಂದು ಲಕ್ಷ ಲೀಟರ್ ಹಾಲು ಹಾಗೂ ಹಾಲಿನ ಉತ್ಪನ್ನಗಳಿಗೆ ಬಳಕೆ ಮಾಡಲಾಗುತ್ತದೆ. ಉಳಿದಂತೆ 2 ಲಕ್ಷ ಲೀಟರ್ ಹಾಲನ್ನು ಕೇರಳಕ್ಕೆ ಸರಬರಾಜು ಮಾಡಲಾಗುತ್ತಿದೆ.
'ಹಾಲಿನ ಖರೀದಿಯಲ್ಲಿನ ಹೆಚ್ಚಳ 2015-16ರವರೆಗೆ ಮಾತ್ರ ನಿರೀಕ್ಷಿಸಲಾಗಿದೆ. ನಾವೀಗ ಮಾರುಕಟ್ಟೆ ಸೌಕರ್ಯ ಮತ್ತು ಮೂಲಭೂತ ಸೇವೆ ಮೇಲ್ದರ್ಜೆಗೇರಿಸುವ ಕಾರ್ಯದಲ್ಲಿ ತೊಡಗಿದ್ದೇವೆ. ಭವಿಷ್ಯದಲ್ಲಿ ದೇಶದಲ್ಲಿನ ದ್ರವೀಕೃತ ಹಾಲು ಮಾರುಕಟ್ಟೆಯಲ್ಲಿ ನಮ್ಮ ಪಾಲು ಹೆಚ್ಚಿಸಲು ಹಾಗೂ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕೆಎಂಎಫ್ ಕೆನೆರಹಿತ (ಸ್ಕಿಮ್ಡ್) ಹಾಲಿನ ಪುಡಿ ಪ್ರಮಾಣ ಹೆಚ್ಚಿಸಲಿದ್ದೇವೆ ಎಂದು ಕೆಎಂಎಫ್ ಅಧಿಕಾರಿ ಶ್ರೀನಾಥ್ ಅವರು ದಿ ಹಿಂದೂ ಪತ್ರಿಕೆಗೆ ಹೇಳಿದ್ದಾರೆ.
ರಾಷ್ಟ್ರೀಯ ಕೋ-ಅಪರೇಟಿವ್ ಡೈರಿ ಫೆಡರೇಶನ್ ನಲ್ಲಿ ಕೆಎಂಎಫ್ ಹಾಲಿನ ಪ್ರಮಾಣ ಹೇಳಿಕೊಳ್ಳುವಂತಿಲ್ಲ. ಕಳೆದ ವರ್ಷ ರೈಲಿನಲ್ಲಿ (ರಾಜಧಾನಿ ಎಕ್ಸ್ಪ್ರೆಸ್) ಹಾಲು ಸರಬರಾಜು ಮಾಡುವಂಥ ಯೋಜನೆ ಹಾಕಿಕೊಂಡಿದರೂ ಅದು ಫಲಿಸಲಿಲ್ಲ ಎಂದು ಶ್ರೀನಾಥ್ ಹೇಳಿದ್ದಾರೆ.
ದೇಶದಲ್ಲಿ ಕ್ಷೀರ ಕ್ಷಾಮ ತಲೆದೋರಿದ ಹಿನ್ನೆಲೆಯಲ್ಲಿ ಫೆಬ್ರವರಿ 2011ರಲ್ಲಿ ಕೇಂದ್ರ ಸರ್ಕಾರ ಹಾಲು ಹಾಗೂ ಹಾಲಿನ ಉತ್ಪನ್ನಗಳನ್ನು ರಫ್ತು ಮಾಡುವುದನ್ನು ನಿಷೇಧಿಸಿದ್ದ ಫಲವಾಗಿ ಹಾಲು ಸಂಗ್ರಹಣೆ ದಾಖಲೆ ಪ್ರಮಾಣದಲ್ಲಿ ಆಗಿದೆ. ಸ್ಕಿಮ್ ಮಿಲ್ಕ್ ಪೌಡರ್ ಗಳನ್ನು ಮಾರಾಟ ಮಾಡುತ್ತಿದ್ದ ಖಾಸಗಿ ಡೈರಿಗಳು ಹಾಲು ಸಂಗ್ರಹಣೆಯನ್ನು ನಿಲ್ಲಿಸಿಬಿಟ್ಟವು. ನಂತರ ಕೆಎಂಎಫ್ ಸೇರಿದಂತೆ ಕೋ ಆಪರೇಟಿವ್ ಸೊಸೈಟಿಗಳಿಗೆ ಬೇಡಿಕೆ ಹೆಚ್ಚಾಯಿತು ಎಂದು ಶ್ರೀನಾಥ್ ಹೇಳಿದರು.












Click it and Unblock the Notifications