ಕೊಲಂಬಿಯಾ ಏಷ್ಯಾ ಆಸ್ಪತ್ರೆಯಲ್ಲಿ ವೆಲ್ ನೆಸ್ ಹಬ್ಬ

ಉತ್ತಮ ಆರೋಗ್ಯದ ಅರಿವು ಮೂಡಿಸುವ, ಉತ್ತಮ ಗುಣಮಟ್ಟದ ಆರೋಗ್ಯ ಸೇವೆಯನ್ನು ಮೈಸೂರಿನ ಜನರಿಗೆ ಪರಿಚಯಿಸುವ ಉದ್ದೇಶದಿಂದ ಈ 15 ದಿನಗಳ ವೆಲ್ ನೆಸ್ ಹಬ್ಬವನ್ನು ಆಚರಿಸಲಾಗುತ್ತಿದೆ ಎಂದು ಸಂಸ್ಥೆ ನಿರ್ದೇಶಕ ಡಾ ಸಂತೋಷ್ ಹೇಳಿದ್ದಾರೆ.
ಈ ಕಾರ್ಯಕ್ರಮದಲ್ಲಿ ಆರೋಗ್ಯ ಶಿಬಿರ, ಆರೋಗ್ಯ ತಪಾಸಣೆ ಹಾಗೂ ಹಲವಾರು ವೆಲ್ ನೆಸ್ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿದೆ. ಈ ವೆಲ್ ನೆಸ್ ಹಬ್ಬದಲ್ಲಿ ಆರೋಗ್ಯ ಶಿಬಿರಕ್ಕೆ ಹೆಚ್ಚಿನ ಮಹತ್ವ ನೀಡಲಾಗಿದೆ.
ಕಿವಿ ಮೂಗು ಮತ್ತು ಗಂಟಲು, ಗ್ಯಾಸ್ಟ್ರೊಎಂಟೆರಾಲಜಿ, ಸಾಮಾನ್ಯ ಶಸ್ತ್ರಚಿಕಿತ್ಸೆ, ಎಂಡೋ ಕ್ರೈನೋಲಾಜಿ, ಮೂತ್ರಪಿಂಡ ಶಾಸ್ತ್ರ, ಪ್ರಸೂತಿ ವಿಜ್ಞಾನ ಮತ್ತು ಸ್ತ್ರೀರೋಗ ಶಾಸ್ತ್ರ, ಶಿಶುವೈದ್ಯ ಶಾಸ್ತ್ರ, ಶ್ವಾಸಕೋಶ ಶಾಸ್ತ್ರ, ಮೂತ್ರರೋಗ ಶಾಸ್ತ್ರ, ಮೂಳೆರೋಗ ಶಾಸ್ತ್ರ ಮುಂತಾದ ವಿಷಯಗಳ ಬಗ್ಗೆ ಉಚಿತ ಸಮಾಲೋಚನೆ ಏರ್ಪಡಿಸಲಾಗಿದೆ.
ಕಾರ್ಯಕ್ರಮದ ವಿಶೇಷ: ಉಚಿತ ವೈದ್ಯಕೀಯ ಸಮಾಲೋಚನೆ ಬೆಳಗ್ಗೆ 11.30 ರಿಂದ ಮಧ್ಯಾಹ್ನ 12.30ರವರೆಗೆ ವೈದ್ಯರಿಂದ ಉತ್ತಮ ಆರೋಗ್ಯದ ಬಗ್ಗೆ ಸಂಬೋಧನೆ, ಲ್ಯಾಬ್ ಮತ್ತು ರೇಡಿಯೋಲಜಿ ತಪಾಸಣೆಗಳ ಮೇಲೆ ವಿಶೇಷ ರಿಯಾಯತಿ.
ಸಾರ್ವಜನಿಕರು ಈ ವೆಲ್ ನೆಸ್ ಹಬ್ಬದ ಪ್ರಯೋಜನವನ್ನು ಪಡೆದುಕೊಳ್ಳಬೇಕು. ಆರೋಗ್ಯದ ಬಗ್ಗೆ ಇರುವ ಅರಿವನ್ನು ಹೆಚ್ಚಿಸಿಕೊಳ್ಳಬೇಕು ಎಂದು ಕೊಲಂಬಿಯಾ ಏಷ್ಯಾ ಆಸ್ಪತ್ರೆಯ ಪ್ರಧಾನ ವ್ಯವಸ್ಥಾಪಕರಾದ ಡಾ. ಸಂತೋಷ್ ಅವರು ಮನವಿ ಮಾಡಿದ್ದಾರೆ.












Click it and Unblock the Notifications