ಸ್ಪೇನಿಗೆ ಪ್ರಯಾಸದ ಗೆಲುವು, ಕ್ವಾಟರ್ ಗೆ ಎಂಟ್ರಿ

ಸ್ಪೇನ್ ಹಲವಾರು ಅವಕಾಶವನ್ನು ಕಳಕೊಂಡ ಬಳಿಕ ಅಂತಿಮವಾಗಿ 88ನೇ ನಿಮಿಷದಲ್ಲಿ ಗೋಲು ಬಾರಿಸಲು ಯಶಸ್ವಿಯಾಯಿತು. ಸೆಸ್ಕ್ ಫೆಬ್ರಿಗಾಸ್ ಬಾರಿಸಿದ ಚೆಂಡನ್ನು ಆಂಡ್ರೆಸಾ ಇನಿಯೆಸ್ಟಾ ತನ್ನ ಹಿಡಿತಕ್ಕೆ ಪಡೆದುಕೊಂಡು ನವಾಸ್ ಗೆ ಪಾಸ್ ನೀಡಿದರು. ನವಾಸ್ ಐರ್ಲೆಂಡ್ ನ ರಕ್ಷಣಾ ಪಾಳಯವನ್ನು ಹಿಂದಿಕ್ಕಿ ಚೆಂಡನ್ನು ಗೋಲು ಬಾಕ್ಸಿನೊಳಗೆ ಒದ್ದು ಸ್ಪೇನ್ ಗೆಲುವಿಗೆ ಕಾರಣರಾದರು.
ಆದರೆ, ಇನಿಯಸ್ಟಾ ಚೆಂಡನ್ನು ತಡೆಯುವಾಗ ಭುಜದ ಜೊತೆಗೆ ಕೈಗೂ ತಾಕಿದೆ. ಹ್ಯಾಂಡ್ ಬಾಲ್ ಎಂದು ಐರ್ಲೆಂಡ್ ಆಟಗಾರರು ಫೌಲ್ ಬಗ್ಗೆ ತಲೆ ಕೆಡಿಸಿಕೊಳ್ಳುವಾಗ ನವಾಸ್ ಗೋಲು ಹೊಡೆದು ಬಿಟ್ಟರು.
ಸ್ಪೇನ್ ಹೆಚ್ಚಿನ ಸಮಯ ಚೆಂಡಿನ ಮೇಲೆ ಹಿಡಿತವನ್ನು ಪಡೆದುಕೊಂಡಿತು. ಆದರೆ ಸಿಕ್ಕಿದ ಅವಕಾಶದಲ್ಲಿ ಗೋಲು ಬಾರಿಸಲು ಯಶಸ್ವಿಯಾಗಲಿಲ್ಲ. ದ್ವಿತೀಯಾರ್ಧದಲ್ಲಿ ಸ್ಪೇನ್ ನ ಗೋಲ್ ಕೀಪರ್ ಇಕರ್ ಕ್ಯಾಸಿಲ್ಲಾಸ್ ಆಕರ್ಷಕವಾಗಿ ಕೆಲವು ಗೋಲುಗಳನ್ನು ಉಳಿಸಿ ಎದುರಾಳಿಗಳಿಗೆ ತಡೆಗೋಡೆಯಾದರು.
ಹಾಲಿ ಚಾಂಪಿಯನ್ ಸ್ಪೇನ್ ಗ್ರೂಪ್ ಡಿ ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದಿರುವ ತಂಡವನ್ನು ಕ್ವಾರ್ಟರ್ ಫೈನಲಿನಲ್ಲಿ ಶನಿವಾರ ಎದುರಿಸಲಿದೆ.












Click it and Unblock the Notifications