ಅಂಕಲ್ ರೇಪ್ ಮಾಡ್ತಾ ಇದ್ರೆ ಅಮ್ಮ ನೋಡ್ತಾ ಇದ್ಳು

ಇಲ್ಲಿನ ಸರ್ಕಾರಿ ರಾಜಾಜಿ ಆಸ್ಪತ್ರೆಗೆ ಬಾಲಕಿಯನ್ನು ಸೇರಿಸಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ವಿಷಯ ಬೆಳಕಿಗೆ ಬಂದಿದೆ. ಬಾಲಕಿಯ ಮೇಲೆ ಹಲ್ಲೆ ಮಾಡಿ, ಅತ್ಯಾಚಾರ ಎಸೆಗಿರುವುದು ದೃಢಪಟ್ಟಿದೆ.
ಮಗಳ ಮೇಲೆ ಅತ್ಯಾಚಾರಕ್ಕೆ ಸಮ್ಮತಿ ನೀಡಿದ ತಾಯಿಯ ವಿರುದ್ಧ ನತದೃಷ್ಟ ಬಾಲಕಿಯ ತಂದೆ ದೂರು ನೀಡಿದ್ದಾರೆ. ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಬಾಲಕಿಯ ತಾಯಿಯನ್ನು ಬಂಧಿಸಿದ್ದಾರೆ. ಆಕೆಯ ಪ್ರಿಯಕರ ಅತ್ಯಾಚಾರಿಯನ್ನು ಕನ್ಯಾಕುಮಾರಿಯಲ್ಲಿ ಸೆರೆ ಹಿಡಿಯಲಾಗಿದೆ.
ತನ್ನ ಪ್ರಿಯಕರ ರವಿ ಎಂಬುವವನಿಗೆ ಮಗಳ ಮೇಲೆ ಅತ್ಯಾಚಾರ ಎಸಗಳು ತಾಯಿ ಕುಪ್ಪಮಣಿ ಅನುಮತಿ ನೀಡಿದ್ದಳು. ಅದರಂತೆ ಮದುರೈ ಸಮೀಪದ ಸಕ್ಕಿಮಂಗಲಂನಲ್ಲಿ ಎರಡು ದಿನಗಳ ಹಿಂದೆ ಬಾಲಕಿಯ ಮೇಲೆ ರವಿ ಅತ್ಯಾಚಾರ ಎಸೆಗಿದ್ದ. ಅಂಕಲ್ ರೇಪ್ ಮಾಡ್ತಾ ಇದ್ರೆ ಅಮ್ಮ ನೋಡ್ತಾ ಇದ್ದಳು ಎಂದು ಬಾಲಕಿ ಕಣ್ಣೀರಿಟ್ಟು ಹೇಳಿಕೆ ನೀಡಿದ್ದಾಳೆ.
ಅತ್ಯಾಚಾರಕ್ಕೊಳಗಾದ ನಂತರ ನೋವಿನಿಂದ ನರಳುತ್ತಿದ್ದ ಬಾಲಕಿಯ ನೆರವಿಗೆ ಸಮಾಜ ಕಲ್ಯಾನ ಇಲಾಖೆ ಅಧಿಕಾರಿ ಹಾಗೂ ರೆಡ್ ಕ್ರಾಸ್ ಸೊಸೈಟಿಯ ಜಂಟಿ ಕಾರ್ಯದರ್ಶಿ ಗೋಪಾಲಕೃಷ್ಣ ಬಂದಿದ್ದಾರೆ. ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಿ ಸೂಕ್ತ ಚಿಕಿತ್ಸೆ ನೀಡಲಾಗಿದೆ.
ಆದರೆ, ತಾಯಿ ತನ್ನ ಮಗಳ ಮೇಲೆ ಈ ರೀತಿ ಅನ್ಯಾಯವಾಗಲು ಅನುಮತಿ ಕೊಟ್ಟಿದ್ದು ಏಕೆ? ಪತಿಯ ಮೇಲಿನ ಕೋಪ, ಪ್ರಿಯಕರನ ಮೇಲಿನ ಮೋಹ, ತಾಯಿಯನ್ನು ಕುರುಡುಗೊಳಿಸಿತೇ? ಎಂಬ ಪ್ರಶ್ನೆಯೊಂದಿಗೆ ಪೊಲೀಸರು ವಿಚಾರಣೆ ಕೈಗೊಂಡಿದ್ದಾರೆ.












Click it and Unblock the Notifications