ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಜೇಯ ಜರ್ಮನಿ ಕ್ವಾಟ್ವರ್ಸ್ ಗೆ, ಡೆನ್ಮಾರ್ಕ್ ಔಟ್

By Mahesh
|
Google Oneindia Kannada News

Lukas Podolski
ಲವಿವ್, ಜೂ.18: ಡಿಫೆಂಡರ್ ಲಾರ್ಸ್ ಬೆಂಡರ್ಚೊಚ್ಚಲ ಅಂತಾರಾಷ್ಟ್ರೀಯ ಗೋಲು ಹಾಗೂ ನೂರನೇ ಪಂದ್ಯವನ್ನು ಆಡುತ್ತಿರುವ ಲೂಕಸ್ ಪೋಡಲಸ್ಕಿ ಬಾರಿಸಿದ ಗೋಲಿನಿಂದಾಗಿ ಯುರೋ ಕಪ್ ನಲ್ಲಿ ಡೆನ್ಮಾರ್ಕ್ ವಿರುದ್ಧ ಜರ್ಮನಿ 2-1ರ ಗೆಲುವು ದಾಖಲಿಸಿಕೊಂಡು ಯುರೋ ಕಪ್ ನ ಕ್ವಾರ್ಟರ್ ಫೈನಲಿಗೇರಿದೆ. ಜರ್ಮನ್ ಸಾಮರ್ಥ್ಯಕ್ಕೆ ತಕ್ಕಂತೆ ಆಡವಾಡಿ ಪ್ರೇಕ್ಷಕರನ್ನು ರಂಜಿಸಿದ್ದಲ್ಲದೆ ಟೂರ್ನಿಯ ಫೇವರೀಟ್ ಟ್ಯಾಗ್ ಅನ್ನು ಉಳಿಸಿಕೊಂಡಿದೆ.

ಗ್ರೂಪ್ ಬಿ ನಲ್ಲಿ ಮೂರಕ್ಕೆ ಮೂರು ಪಂದ್ಯಗಳನ್ನು ಗೆದ್ದ ಜರ್ಮನಿ ಅಗ್ರ ಸ್ಥಾನಿಯಾಗಿ 9 ಅಂಕಗಳಿಸಿ ಮುಂದಿನ ಹಂತಕ್ಕೇರಿದೆ. ಗ್ರೂಪ್ ಆಫ್ ಡೆತ್ ನಲ್ಲಿ ನೆದರ್ಲೆಂಡ್ ಹಾಗೂ ಡೆನ್ಮಾರ್ಕ್ ಟೂರ್ನಿಯಿಂದ ಹೊರಬಿದ್ದಿದೆ. ಕ್ವಾರ್ಟರ್ ಫೈನಲಿನಲ್ಲಿ ಜರ್ಮನಿ ಗ್ರೀಸ್ ವಿರುದ್ಧ ಆಡಲಿದೆ.

ನೂರನೇ ಪಂದ್ಯವನ್ನು ಆಡುತ್ತಿರುವ ಲೂಕಸ್ ಪೋಡಲಸ್ಕಿ 19ನೇ ನಿಮಿಷದಲ್ಲಿ ಗೋಲು ಬಾರಿಸಿ ತನ್ನ ಶತಕದ ಪಂದ್ಯವನ್ನು ಭರ್ಜರಿಯಾಗಿ ಆರಂಭಿಸಿದರು. ಆದರೆ ಐದು ನಿಮಿಷಗಳ ಬಳಿಕ ಡೆನ್ಮಾರ್ಕ್ ಗೆ ಮೈಕಲ್ ಕ್ರೊಹ್ನ್ ಡೆಹ್ಲಿ ಗೋಲು ಬಾರಿಸಿ ತಂಡಕ್ಕೆ ಸಮಬಲ ಒದಗಿಸಿಕೊಟ್ಟರು.

ಆದರೆ, ಪಂದ್ಯದ 80ನೇ ನಿಮಿಷದಲ್ಲಿ 23 ವರ್ಷದ ರಕ್ಷಣಾ ಪಂಕ್ತಿ ಆಟಗಾರ ಬೆಂಡರ್ ಗೋಲು ಬಾರಿಸಿ ತಂಡದ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದರು. ಕಳೆದ ಸಪ್ಟೆಂಬರ್ ನಲ್ಲಿ ಪೋಲೆಂಡ್ ವಿರುದ್ಧ ನಡೆದ ಪ್ರದರ್ಶನ ಪಂದ್ಯದಲ್ಲಿ ಜರ್ಮನಿ ಪರವಾಗಿ ಮೊದಲ ಪಂದ್ಯವಾಡಿದ ಬೆಂಡರ್ ಗೋಲು ಜರ್ಮನಿಯ ಗರಿಮೆಯನ್ನು ಹೆಚ್ಚಿಸಿ, ತಂಡಕ್ಕೆ ಜಯ ತಂದು ಕೊಟ್ಟಿದೆ.

ಡೇನಿಯಲ್ ಅಗ್ಗರ್ ತಂಡಕ್ಕೆ ಜರ್ಮನಿಯ ಅದ್ಭುತ ದಾಳಿಕೋರರನ್ನು ತಡೆಯುವುದು ಕಷ್ಟ ಎಂಬ ನಿರೀಕ್ಷೆಯಿತ್ತು. ಆದರೆ, ಪೊಲ್ಸನ್, ಅಗ್ಗರ್ ಹೆಚ್ಚಿನ ಶ್ರಮ ವಹಿಸಿ ಜರ್ಮನಿ ಸ್ಟ್ರೈಕರ್ ಗೊಮೆಜ್ ರನ್ನು ಕಟ್ಟಿ ಹಾಕಿಬಿಟ್ಟರು. ಡೆನ್ಮಾರ್ಕ್ ಮಿಡ್ ಫೀಲ್ಡ್ ಅಷ್ಟಾಗಿ ಬಲಿಷ್ಠವಾಗಿಲ್ಲದಿರುವುದು ಹಾಗೂ ಮುಂಪಡೆಯಲ್ಲಿ ಕ್ರೋನ್ ಡೆಹ್ಲಿ,ಬೆಂಟ್ನರ್ ಅವರಿಗೆ ಸಾಥ್ ನೀಡಲು ರೊಮ್ಮಡೆಲ್ ಇಲ್ಲದಿರುವುದು ಹೊಡೆತ ಕೊಟ್ಟಿತು.

ಡೆನ್ಮಾರ್ಕ್ 1 - 2 ಜರ್ಮನಿ
6(4) ಗೋಲು ಯತ್ನ(ಗುರಿಗೆ ಹತ್ತಿರವಾಗಿದ್ದು) 6(6)
5 ಕಾರ್ನರ್ಸ್ 3
8 ಫೌಲ್ಸ್ 6
4 ಆಫ್ ಸೈಡ್ 2
0 ಹಳದಿ ಕಾರ್ಡ್ 0
0 ಕೆಂಪು ಕಾರ್ಡ್ 0
English summary
Germany failed to sparkle but still advanced to a quarterfinal against Greece after grinding out a 2-1 victory over Denmark at the European Championship.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X