ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಂಎನ್ ಸಿಗಳಿಂದ 71000 ಉದ್ಯೋಗ ಕಡಿತ

By Mahesh
|
Google Oneindia Kannada News

MNCs to Cut 71,000 jobs
ಬೆಂಗಳೂರು, ಜೂ.18: ನೋಕಿಯಾ ಸಂಸ್ಥೆ ಜಾಗತಿಕವಾಗಿ 10,000 ಉದ್ಯೋಗಿಗಳ ಕಡಿತಕ್ಕೆ ಮುಂದಾದ ಬೆನ್ನಲ್ಲೇ ಡಜನ್ ಗಟ್ಟಲೇ ಎಂಎನ್ ಸಿಗಳು ಅದೇ ಹಾದಿ ಹಿಡಿದಿದೆ.

ಮುಂದಿನ ಎರಡು ವರ್ಷಗಳಲ್ಲಿ 71,000ಕ್ಕೂ ಅಧಿಕ ಉದ್ಯೋಗಿಗಳು ಕೆಲಸ ಕಳೆದುಕೊಳ್ಳಲಿದ್ದಾರೆ. ಎಚ್ ಪಿ, ನೋಕಿಯಾ, ಯಾಹೂ ಸೇರಿದಂತೆ 12ಕ್ಕೂ ಅಧಿಕ ಕಂಪನಿಗಳು ಉದ್ಯೋಗಿಗಳ ಸಂಖ್ಯೆ ತಗ್ಗಿಸಿಕೊಳ್ಳಲು ಮುಂದಾಗಿದೆ.

ಕೆಲ ಟೆಕ್ ಕಂಪನಿಗಳು 2012ರ ಆರ್ಥಿಕ ವರ್ಷ ಮುಗಿಯುವ ಮುನ್ನ ಪಿಂಕ್ ಚೀಟಿ ವಿತರಣೆ ಕಾರ್ಯ ಮುಕ್ತಾಯಗೊಳಿಸಲು ನಿರ್ಧರಿಸಿದೆ.

ಹೆಲ್ವೆಟ್ ಪ್ಯಾಕರ್ಡ್(HP), ಮೊಬೈಲ್ ದಿಗ್ಗಜ ನೋಕಿಯಾ, ಗ್ರಾಹಕ ಎಲೆಕ್ಟ್ರಾನಿಕ್ ಉತ್ಪನ್ನ ಸಂಸ್ಥೆ ಸೋನಿ ಕಾರ್ಪ್, ಇಂಟರ್ನೆಟ್ ಪ್ರಮುಖ ಸಂಸ್ಥೆ ಯಾಹೂ, ಪೆಪ್ಸಿಕೋ, ರಾಯಲ್ ಬ್ಯಾಂಕ್ ಆಫ್ ಸ್ಕಾಟ್ಲೆಂಡ್ ಹಾಗೂ ವಿಮಾನಯಾನ ಕ್ಷೇತ್ರದ ಲುಫ್ತಾನ್ಸಾ ಸಂಸ್ಥೆ ಉದ್ಯೋಗ ಕಡಿತಕ್ಕೆ ಮುಂದಾಗಿದೆ.

ಇದಲ್ಲದೆ ಪಟ್ಟಿಯಲ್ಲಿ ಕೆಮೆರಾ ಮೇಕರ್ ಒಲಿಂಪಸ್, ಸ್ವೀಡನ್ ಮೂಲದ ಬೇರಿಂಗ್ ಸಂಸ್ಥೆ ಎಸ್ ಕೆ ಎಫ್ , ಔಷಧ ಕ್ಷೇತ್ರದ ನೋವರ್ತಿಸ್ ಎಜಿ, ಆಂಗ್ಲೋ ಡಚ್ ಕಂಪನಿ ಯೂನಿಲೆವರ್, ಮೌಸ್ ಉತ್ಪಾದಕ ಲಾಜಿಟೆಕ್, ಮೋಬೈಲ್ ನಿಸ್ತಂತು ಸೇವೆಯ ವೇರಿಜಾನ್ ವೈರ್ ಲೆಸ್ ಕಂಪನಿಗಳು ಪಟ್ಟಿಯಲ್ಲಿದೆ.

* ಯೂನಿಲೆವರ್ ಕಂಪನಿ ಬ್ರಿಟನ್ನಿನಲ್ಲಿ 500 ಉದ್ಯೋಗಿಗಳನ್ನು ತೆಗೆದುಹಾಕಲಿದೆ. ಭಾರತದಲ್ಲಿನ ವಿಭಾಗಕ್ಕೂ ಹೊಡೆತ ಬೀಳಲಿದೆ.
* ನೋಕಿಯಾ ಜಾಗತಿಕವಾಗಿ 10,000 ಉದ್ಯೋಗ ಕಡಿತ ಮಾಡಲಿದೆ.
* ನೋಕಿಯಾಗೆ ಇದರಿಂದ 1.6 ಬಿಲಿಯನ್ ಯುರೋ ಹಣ ಉಳಿತಾಯವಾಗಲಿದೆ.
* ಎಸ್ ಕೆಎಫ್ ನಿಂದ 400 ಜನ ಉದ್ಯೋಗಿಗಳು ಕೆಲಸ ಕಳೆದುಕೊಳ್ಳಲಿದ್ದಾರೆ. ಭಾರತ, ಚೀನಾ ಹಾಗೂ ಯುರೋಪ್ ನಲ್ಲಿ ಉದ್ಯಮ ಕುಸಿತಕ್ಕೆ ಇದಕ್ಕೆ ಕಾರಣ ಎನ್ನಲಾಗಿದೆ.
* ಲಾಜಿಟೆಕ್ 450 ಜನ ಅಥವಾ ಶೇ 13 ರಷ್ಟು ಮಾನವ ಸಂಪನ್ಮೂಲ ಕಡಿತಗೊಳಿಸಿ ವಾರ್ಷಿಕವಾಗಿ 80 ಮಿಲಿಯನ್ ಯುಎಸ್ ಡಾಲರ್ ಉಳಿಸುವ ನಿರೀಕ್ಷೆ ಹೊಂದಿದೆ.

* ಒಲಿಂಪಸ್ ಕಾರ್ಪ್ 40,000 ಜನರನ್ನು ಕಿತ್ತುಹಾಕಲಿದ್ದು, ಈ ತಿಂಗಳಲ್ಲೇ 2,700 ಉದ್ಯೋಗಿಗಳನ್ನು ಹೊರತಬ್ಬಲಿದೆ. ಶೇ 7 ರಷ್ಟು ಮಾನವ ಸಂಪನ್ಮೂಲ ಕಡಿತ ಗೊಳಿಸಿ ಲಾಭ ಗಳಿಸುವ ಗುರಿ ಹೊಂದಿದೆ.

* ಮುಂದಿನ ಎರಡು ವರ್ಷಗಳಲ್ಲಿ ಎಚ್ ಪಿ 27,000 ಉದ್ಯೋಗಳನ್ನು ಕಳೆದುಕೊಳ್ಳಲಿದೆ.

ಈ ಎಲ್ಲಾ ಉದ್ಯೋಗ ಕಡಿತಕ್ಕೆ ಯುರೋಪ್ ರಾಷ್ಟ್ರಗಳ ಆರ್ಥಿಕ ಬಿಕ್ಕಟ್ಟು ಮೂಲ ಕಾರಣ ಎನ್ನಬಹುದು. 2014ರ ಆರ್ಥಿಕ ವರ್ಷದ ವೇಳೆಗೆ ಸುಮಾರು 3 ರಿಂದ 3.5 ಬಿಲಿಯನ್ ಡಾಲರ್ ಉಳಿತಾಯ ನಿರೀಕ್ಷಿಸಲಾಗಿದೆ.

English summary
More than a dozen Multinational companies including HP, Nokia, Yahoo and so on decided to cut 71,000 jobs worldwide. This is the biggest shock after Nokia announced t cut workforce by about 10,000 people worldwide by the end of 2013.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X