ಹೆಣ್ಣಾಗಿದ್ದ ಅಥ್ಲೀಟ್ ಪಿಂಕಿ, ರೇಪ್ ಕೇಸ್ ನಲ್ಲಿ ಫಿಟ್

ಗುರುವಾರ(ಜೂ.14) ಬೆಳಗ್ಗೆ ಪ್ರಮಾಣಿಕ್ ಅವರನ್ನು ಬಂಧಿಸಲಾಗಿದೆ. ಮಹಿಳೆಯೊಬ್ಬರ ಮೇಲೆ ಏಳೆಂಟು ತಿಂಗಳಿನಿಂದ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪವಿದೆ. ಕಾಮತೃಷೆ ತೀರಿಸಿಕೊಂಡ ಮೇಲೆ ಆಕೆಯನ್ನು ಮದುವೆಯಾಗುವ ಭರವಸೆ ನೀಡಿದ್ದಾನೆ(ಳೆ). ಆದರೆ, ಮಹಿಳೆಯೆಗೆ ಕೈ ಕೊಟ್ಟು ಪಿಂಕಿ ತಲೆ ಮರೆಸಿಕೊಂಡಿದ್ದು ದೂರಿನಿಂದ ತಿಳಿದುಬಂದಿದೆ ಎಂದು ಬಗೌತಿ ಪೊಲೀಸ್ ಸ್ಟೇಷನ್ ಅಧಿಕಾರಿಗಳು ಹೇಳಿದ್ದಾರೆ.
ಬಂಧನದ ನಂತರ ಪ್ರಮಾಣಿಕ್ ರನ್ನು ಸಮೀಪದ ಖಾಸಗಿ ನರ್ಸಿಂಗ್ ಹೋಮ್ ಗೆ ಸೇರಿಸಿ ಲಿಂಗ ಪರೀಕ್ಷೆ ಮಾಡಲಾಗಿದೆ. ವರದಿ ಪ್ರಕಾರ ಪಿಂಕಿ ಹೆಣ್ಣಲ್ಲ, ಗಂಡು ಎಂಬುದು ದೃಢಪಟ್ಟಿದೆ.
ಸರ್ಕಾರಿ ಆಸ್ಪತ್ರೆಯಲ್ಲಿ ಮತ್ತೊಮ್ಮೆ ಪರೀಕ್ಷೆ ನಡೆಸಿ ವರದಿ ಬಂದ ಮೇಲೆ ಪಿಂಕಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ಹೇಳಿದ್ದಾರೆ.
ದೋಹಾದಲ್ಲಿ ನಡೆದ 2006ರ ಏಷ್ಯನ್ ಗೇಮ್ಸ್ ನ 4×400 ಮೀ ರಿಲೇ ನಲ್ಲಿ ಪಿಂಕಿ ಪ್ರಮಾಣಿಕ್ ಚಿನ್ನದ ಪದಕ ಗೆದ್ದಿದ್ದರು. ಮೆಲ್ಬೋರ್ನಿನಲ್ಲಿ ನಡೆದ ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಬೆಳ್ಳಿ ಪದಕ ಸಿಕ್ಕಿತ್ತು. ಮೂರು ವರ್ಷಗಳ ಹಿಂದೆ ಪ್ರಮಾಣಿಕ್ ಅಥ್ಲೀಟೆಕ್ಸ್ ನಿಂದ ನಿವೃತ್ತಿ ಹೊಂದಿದ್ದರು.
1986 ರ ಏಪ್ರಿಲ್ 10ರಂದು ಪುರೂಲಿಯಾದಲ್ಲಿ ಪಿಂಕಿ ಪ್ರಮಾಣಿಕ್, 400 ಮೀ ಹಾಗೂ 800 ಮೀಟರ್ಸ್ ಟ್ರ್ಯಾಕ್ ನಲ್ಲಿ ಜನಪ್ರಿಯತೆ ಗಳಿಸಿದ್ದರು. 2006ರ ಕಾಮನ್ ವೆಲ್ತ್ ನಲ್ಲಿ ಬೆಳ್ಳಿ, 2006ರ ಏಷ್ಯನ್ ಗೇಮ್ಸ್ ನಲ್ಲಿ ಚಿನ್ನ, 2005ರ ಏಷ್ಯನ್ ಇಂಡೋರ್ ಗೇಮ್ಸ್ ನಲ್ಲಿ ಚಿನ್ನ ಹಾಗೂ 2006ರ ದಕ್ಷಿಣ ಏಷ್ಯಾ ಗೇಮ್ಸ್ ನಲ್ಲಿ ಚಿನ್ನ ಗೆದ್ದ ಸಾಧನೆ ಪಿಂಕಿ ಹೆಸರಲ್ಲಿದೆ.
17 ವರ್ಷ ವಯಸ್ಸಿನಲ್ಲಿ ಏಷ್ಯನ್ ಇಂಡೋರ್ ಅಥ್ಲೆಟಿಕ್ಸ್ ಚಾಂಪಿಯನ್ಸ್ ನಲ್ಲಿ ಎರಡು ಕಂಚಿನ ಪದಕ ಗೆದ್ದಿದ್ದು, ಆಲ್ ಇಂಡಿಯಾ ಓಪನ್ ನ್ಯಾಷನಲ್ ಚಾಂಪಿಯನ್ ಶಿಪ್ ನಲ್ಲಿ ಮೂರು ಬಾರಿ ಚಾಂಪಿಯನ್ ಆಗಿದ್ದ ಪಿಂಕಿ ನಂತರ ಸತತವಾಗಿ ಕಾಡುತ್ತಿದ್ದ ಗಾಯದ ಸಮಸ್ಯೆಯಿಂದ ಅಥ್ಲೆಟಿಕ್ಸ್ ಗೆ ವಿದಾಯ ಹೇಳುವ ನಿರ್ಧಾರ ಕೈಗೊಂಡಿದ್ದರು. 2007ರಲ್ಲಿ ಕಾರು ಅಪಘಾತವಾದ ನಂತರ ಕ್ರೀಡೆಯಿಂದ ಸಂಪೂರ್ಣ ದೂರ ಉಳಿದರು.












Click it and Unblock the Notifications