ಗ್ರೀಸ್ ಗೆ ಆಘಾತ ತಲೆಕೆಳಗಾದ ಲೆಕ್ಕಾಚಾರ

ಜೆಕ್ ಪರ ಪಿಟ್ರ್ ಜಿರಾಸೆಕ್ ಮೊದಲ 3 ನಿಮಿಷದಲ್ಲಿ ಗೋಲು ಹೊಡೆದರು. ನಂತರ ವಾಕ್ಲಾವ್ ಪಿಲಾರ್ 6ನೇ ನಿಮಿಷದಲ್ಲಿ ಮತ್ತೊಂದು ಗೋಲು ಗಳಿಸಿ ಗ್ರೆಸ್ ಗೆ ಆಘಾತ ನೀಡಿದರ. ಟೂರ್ನಿಯಲ್ಲಿ ಪಿಲಾರ್ ಗೆ ಇದು ಎರಡನೇ ಗೋಲಾಗಿದೆ.
ಗ್ರೀಸ್ ಗೆ ಆರಂಭದಿಂದಲೂ ಶಕುನ ಸರಿಯಾಗಿರಲಿಲ್ಲ. ಗೋಲ್ ಕೀಪರ್ ಕೊಸ್ಟಾಸ್ ಚಾಲ್ಕಿಯಾಸ್ ಸ್ನಾಯಸೆಳೆತಕ್ಕೆ ಒಳಗಾಗಿ ಹೊರ ನಡೆದರು. ರೆಫ್ರಿ ಕೂಡಾ ವಿಪರೀತವಾಗಿ ಗ್ರೀಸ್ ವಿರುದ್ಧ ನಿರ್ಣಯಗಳನ್ನು ನೀಡಿಬಿಟ್ಟರು. ಗೆಕಾಸ್ ಆಫ್ ಸೈಡ್, ಸಪ್ಲಂಜಿಡಿಸ್ ಹಳದಿ ಕಾರ್ಡ್ ನೀಡಿದ್ದು ದೊಡ್ಡ ಪ್ರಮಾದವಾಗಿದ್ದು, ಪಂದ್ಯದ ಗತಿ ಬದಲಿಸಿಬಿಟ್ಟಿತು.
ಗ್ರೀಕ್ ಪರ ಫಾನಿಸ್ ಗೆಕಾಸ್ ಮತ್ತೊಮ್ಮೆ ಉತ್ತಮ ಆಟ ಪ್ರದರ್ಶಿಸಿ 53ನೇ ನಿಮಿಷದಲ್ಲಿ ಗೋಲು ಗಳಿಸಿ ತಂಡಕ್ಕೆ ಜೀವ ತಂದರು. ಆದರೆ, ಕರಗೋನಸ್, ಸಮರಾಸ್, ಸಲ್ಪಿಂಜಿಡಿಸ್ ಉತ್ತಮ ಆಟದ ನಡುವೆಯೂ ಅದೃಷ್ಟ ಹೀನವಾಗಿದ್ದ ಗ್ರೀಸ್ ತಂಡ ಚೆಕ್ ರಿಪಬ್ಲಿಕ್ ಗೆ ತಲೆ ಬಾಗಿದೆ.
ಚೆಕ್ ರಿಪಬ್ಲಿಕ್ ಈ ಗೆಲುವಿನ ಮೂಲಕ ಕ್ವಾಟರ್ ಫೈನಲ್ ಹಂತ ತಲುಪುವ ಕನಸು ಜೀವಂತವಾಗಿಸಿಕೊಂಡಿದೆ. ಎ ಗುಂಪಿನ ಲೆಕ್ಕಾಚಾರ ಮಾತ್ರ ಕುತೂಹಲ ಕೆರಳಿಸಿದೆ. ರಷ್ಯಾ ವಿರುದ್ಧ 1-4ರ ಹೀನಾಯ ಸೋಲುಂಡಿದ್ದ ಚೆಕ್ ಇವತ್ತು ಆಡಿದ ರೀತಿ ಎಲ್ಲರನ್ನು ಬೆರಗುಗೊಳಿಸಿತು.












Click it and Unblock the Notifications