ಮಂಗಳೂರು: ಮಗುವಿಗೆ ಬರ್ತ್ ನೀಡಿದ ಮಹಾತಾಯಿ

ವಿಷಯ ಏನಪಾ ಅಂದರೆ ಮಹರಾಷ್ಟ್ರದ ಧೋಡಾ ಜಿಲ್ಲೆಯ ಶ್ರೀಪುರಾದಲ್ಲಿ ನೆಲೆಸಿರುವ ದಂಪತಿ ತಮ್ಮ ಇಬ್ಬರು ಮಕ್ಕಳೊಂದಿಗೆ ಭಟ್ಕಳದಿಂದ Chennai Okha Expressನಲ್ಲಿ ಚೆನ್ನೈಗೆ ಹೊರಟಿದ್ದರು. ಆದರೆ ಮಾರ್ಗ ಮಧ್ಯೆ ಗರ್ಭಿಣಿ ಲಲಿತಾ ದಾರಾಸಿಂಗ್ ಗೆ labour pain ಶುರುವಾಗಿದೆ. ತಡೆಯಲಾಗದೆ ಆಕೆ ರೈಲಿನಲ್ಲಿರುವ ಟಾಯ್ಲೆಟ್ಟಿಗೆ ತೆರಳಿದ್ದಾರೆ.
ಆಗ, ಉತ್ತರ ಕನ್ನಡ ಜಿಲ್ಲೆಯ ಮುರುಡೇಶ್ವರದ ರಯೀಸ್ ಅಹಮದ್ ಜೆ. ಎಂಬುವವರು ಇದನ್ನು ಗಮನಿಸಿ, ಇತರೆ ಮಹಿಳಾ ಪ್ರಯಾಣಿಕರಿಗೆ ವಿಷಯ ತಿಳಿಸಿದ್ದಾರೆ. ಆದರೆ ಯಾವೊಬ್ಬ ಮಹಿಳೆಯೂ ಅಹಮದ್ ಕರೆಗೆ ಓಗೊಡಲಿಲ್ಲ. ಆದರೆ ಅಹಮದ್ ತಮ್ಮ ಪತ್ನಿ ಜಬೀನ್ ಅವರನ್ನು ಕಂಪಾರ್ಟ್ ಮೆಂಟಿನಲ್ಲೇ ಬಿಟ್ಟು, ತಾವು ಹೊರಬಂದಿದ್ದಾರೆ. ಅಹಮದ್ ಪತ್ನಿ ಧೈರ್ಯ ತಂದುಕೊಂಡು ಗರ್ಭಿಣಿಗೆ ಸುಸೂತ್ರ delivery ಆಗುವುದಕ್ಕೆ ನೆರವಾಗಿದ್ದಾರೆ.
ಟ್ರೈನು Mangalore Central Railway stationಗೆ ಬರುತ್ತಿದ್ದಂತೆ ಮಹಿಳೆ ಮತ್ತು ಮಗುವನ್ನು Lady Goschen Hospitalಗೆ ದಾಖಲಿಸಲಾಯಿತು. ಮಗು ಮತ್ತು ತಾಯಿ ಆರೋಗ್ಯವಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.












Click it and Unblock the Notifications