ಯುರೋ: ರಷ್ಯಾ ವೇಗಕ್ಕೆ ಶರಣಾದ ಚೆಕ್ ರಿಪಬ್ಲಿಕ್

ರಷ್ಯಾ ಈ ಬಾರಿ ಪ್ರಶಸ್ತಿ ಮೇಲೆ ಕಣ್ಣಿಟ್ಟಿದೆ ಎಂದು ಕೋಚ್ ಡಿಕ್ ಅಡ್ವೋಕಾಟ್ ಪಂದ್ಯಕ್ಕೂ ಮುನ್ನ ನೀಡಿದ ಹೇಳಿಕೆಗೆ ಬೆಲೆ ಸಿಗುವಂತೆ ರಷ್ಯನ್ನರು ಮೈದಾನದಲ್ಲಿ ವಿಜೃಂಭಿಸಿದರು.
14ನೇ ನಿಮಿಷದಲ್ಲಿ ಕೊಲ್ಶಿಕೊವ್ ಹೆಡರ್ ಗೋಲ್ ಪೊಸ್ಟ್ ಗೆ ಬಡಿದು ಮುಂದಕ್ಕೆ ಚಿಮ್ಮದಾಗ ಸಿಕ್ಕ ಅವಕಾಶವನ್ನು ಬಳಸಿಕೊಂಡ ಜಗೊವೆಫ್ ಬಲಗಾಲಿನಿಂದ ಭರ್ಜರಿಯಾಗಿ ಹೊಡೆದ ಹೊಡೆತ ಗೋಲಾಗಿ ಪರಿಣಮಿಸಿತು. 23ನೇ ನಿಮಿಷದಲ್ಲಿ ರೊಮಾನ್ ಶಿರಾಕೋವ್ ಅದ್ಭುತ ಗೋಲು ಹೊಡೆಯುವ ಮೂಲಕ ಚೆಕ್ ತಂಡಕ್ಕೆ ಎರಡನೇ ಆಘಾತ ನೀಡಿದರು.
ಚೆಕ್ ಪರ ವಾಕ್ಲವ್ ಪಿಲಾರ್ ಎರಡನೇ ಅವಧಿಯಲ್ಲಿ ಗೋಲು ಹೊಡೆದು ಚೆಕ್ ತಂಡಕ್ಕೆ ಆಸರೆಯಾದರು. ಆದರೆ, ಜಗೊವ್ ಹಾಗೂ ರೋಮಾನ್ ಪವ್ಲಿಯುಚೆಂಕೋ ಮೂರು ನಿಮಿಷಗಳ ಅಂತರದಲ್ಲಿ ತಲಾ 1 ಗೋಲು ಬಾರಿಸಿ ಚೆಕ್ ಆಸೆಗೆ ತಣ್ಣೀರೆರಚಿದರು. [ಮೊದಲ ಪಂದ್ಯದ ವರದಿ ನೋಡಿ]
ಯುರೋ 2012: ತಂಡಗಳು | ವೇಳಾಪಟ್ಟಿ | ಗುಂಪು | ಫಲಿತಾಂಶ |
| ರಷ್ಯಾ | 4 - 1 | ಚೆಕ್ ರಿಪಬ್ಲಿಕ್ |
| 10 (7) | ಗೋಲು ಯತ್ನ(ಗುರಿಗೆ ಹತ್ತಿರವಾಗಿದ್ದು) | 10 (6) |
| 3 | ಕಾರ್ನರ್ಸ್ | 5 |
| 13 | ಫೌಲ್ಸ್ | 15 |
| 2 | ಆಫ್ ಸೈಡ್ | 4 |
| 0 | ಹಳದಿ ಕಾರ್ಡ್ | 0 |
| 0 | ಕೆಂಪು ಕಾರ್ಡ್ | 0 |
ಶನಿವಾರದ ಪಂದ್ಯಗಳು: ಬಿ ಗುಂಪಿನ ಎರಡು ಪಂದ್ಯಗಳು ನಡೆಯಲಿದ್ದು, ಮೊದಲ ಬಾರಿಗೆ ಉಕ್ರೇನ್ ನಲ್ಲಿ ಪಂದ್ಯಗಳು ನಡೆಯಲಿದೆ. ಖಾರ್ಕಿವ್ ನಲ್ಲಿ ನೆದರ್ಲೆಂಡ್ ವಿರುದ್ಧ ಡೆನ್ಮಾರ್ಕ್ ಸೆಣಸಲಿದೆ ನಿಯೋ ಪ್ರೈಮ್ ವಾಹಿನಿಯಲ್ಲಿ 9.30ಕ್ಕೆ ಪ್ರಸಾರವಾಗಲಿದೆ.
ಡೆನ್ಮಾರ್ಕ್ ಮೇಲೆ ನೆದರ್ಲೆಂಡ್ ಮೇಲುಗೈ ಸಾಧಿಸುವ ಸಾಧ್ಯತೆಯಿದೆ. 21 ವರ್ಷದ ಭಾರತ ಮೂಲದ ನೆದರ್ಲೆಂಡ್ ಫಾರ್ವರ್ಡ್ ನರ್ ಸಿಂಗ್ ಮೊದಲ ಪಂದ್ಯವನ್ನು ಆಡುವ ನಿರೀಕ್ಷೆಯಿದೆ.
ಇನ್ನೊಂದು ಪಂದ್ಯದಲ್ಲಿ ಲಿವಿವ್ ನಲ್ಲಿ ಬಲಿಷ್ಠ ತಂಡಗಳಾದ ಜರ್ಮನಿ ಹಾಗೂ ಪೋರ್ಚುಗಲ್ ಕಾದಾಡಲಿದೆ. ಪ್ರಶಸ್ತಿ ಮೇಲೆ ಕಣ್ಣಿಟ್ಟಿರುವ ಜರ್ಮನಿಗೆ ಇದು ಮಹತ್ವದ ಪಂದ್ಯವಾಗಿದೆ. UEFA ಚಾಂಪಿಯನ್ಸ್ ಲೀಗ್ ನಲ್ಲಿ ಬ್ರಯಾನ್ ಮ್ಯೂನಿಚ್ ಪರ ಬಹುತೇಕ ಜರ್ಮನಿ ಅಟಗಾರರು ಆಡಿದ್ದರಿಂದ ಜರ್ಮನಿ ತಂಡ ಉತ್ತಮ ಫಾರ್ಮ್ ನಲ್ಲಿದೆ.
ಪೋರ್ಚುಗಲ್ ಸ್ಟಾರ್ ಆಟಗಾರ ಕ್ರಿಶ್ಚಿಯಾನೋ ರೊನಾಲ್ಡೋ ಅವರ ಆಟದ ಮೇಲೆ ಅವಲಂಬಿತವಾಗಿದೆ. ಈ ಪಂದ್ಯ ಜೂ.10 ರ ಮಧ್ಯರಾತ್ರಿ 12.15ಕ್ಕೆ ಪ್ರಸಾರವಾಗಲಿದೆ.












Click it and Unblock the Notifications