ರೆಡ್ಡಿ ಚಿನ್ನದ ಸಿಂಹಾಸನ ಅಸಲಿಯಲ್ಲ; ನಕಲಿ- ಸಿಬಿಐ

ರೆಡ್ಡಿಯ ಸಿಂಹಾಸನ ಚಿನ್ನದ್ದಲ್ಲ ಎಂಬ ಸುದ್ದಿ ಕೇಳಿ ಬಹಳಷ್ಟು ನಿರಾಶರಾಗಿದ್ದಾರೆ. ಆದರೆ ಅದು ಚಿನ್ನ ಲೇಪಿತ ಕುರ್ಚಿಯಂತೂ ಹೌದು. ಈ ಹಿಂದಿನ ಗಾಲಿ ಸುದ್ದಿಯಂತೆ ಇಡೀ ಕುರ್ಚಿ ಚಿನ್ನದಿಂದ ಮಾಡಿದ್ದಲ್ಲ. ಹೊರಗಷ್ಟೇ ಥಳಫಳ. ಒಳಗೆಲ್ಲಾ...
ಸಿಬಿಐ ಇದೀಗ ರೆಡ್ಡಿ ಮನೆಯಿಂದ ಸೆಪ್ಟೆಂಬರ್ 5ರಂದು ವಶಪಡಿಸಿಕೊಂಡ ಅಕ್ರಮ ಸಂಪತ್ತನ್ನು ಅಳೆದೂ ಸುರಿದು, ತೂಗುತ್ತಿದೆ. ಆ ಕಾರ್ಯದಲ್ಲಿದ್ದಾಗ ಈ ಚಿನ್ನದ ಚೇರಿನ ಮೌಲ್ಯ ಅರಿಯುವ ಸಲುವಾಗಿ ಅಕ್ಕಸಾಲಿಗರ ಮೊರೆ ಹೋದಾಗ... 'ಸ್ವಾಮಿ ಇದೆಲ್ಲ ಚಿನ್ನದ್ದಲ್ಲ. ಮೇಲಷ್ಟೇ ಚಿನ್ನ ಮೆತ್ತಿದ್ದಾರೆ' ಎಂದು ಅಕ್ಕಸಾಲಿಗರು ಹೇಳಿದ್ದಾರೆ.
ಅಂದಹಾಗೆ, ಅಂದು ರೆಡ್ಡಿಯ ಕುಟೀರದಲ್ಲಿ 67 ಕೆಜಿ ಚಿನ್ನಾಭರಣ ಸಹಿತ ಒಟ್ಟು 15 ಕೋಟಿ ರೂ. ಸಂಪತ್ತನ್ನು ವಶಪಡಿಸಿಕೊಂಡಿದ್ದೆವು ಎಂದು ಸಿಬಿಐ ಮತ್ತೊಮ್ಮೆ ತಿಳಿಸಿದೆ.












Click it and Unblock the Notifications