ಬೀಡಿಕಟ್ಟಿಗೆ ಬೆಂಕಿಯಿಟ್ಟ ಉಪ್ಪಿನಂಗಡಿ ಬೀಡಿ ಕಾರ್ಮಿಕರು

ಈ ಮಧ್ಯೆ, ಕೆಲವು ಬೀಡಿ ತಯಾರಿಕಾ ಘಟಕಗಳಲ್ಲಿ ಅದರ ಮಾಲೀಕರು ಬೀಡಿ ತಯಾರಿಸುವುದನ್ನು ಮುಂದುವರಿಸಿದ್ದಾರೆ. ಇದರ ಸುಳಿವರಿತ ಪ್ರತಿಭಟನಾನಿರತ ಬೀಡಿ ಕಾರ್ಮಿಕರು ಮೊನ್ನೆ ಸುಮಾರು 68,000 ಬೀಡಿಗಳಿಗೆ ಬೆಂಕಿ ಹಚ್ಚಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಲ್ಲಿನ ಸುಬ್ರಮಣ್ಯ ಕ್ರಾಸ್ ಸಮೀಪವಿರುವ ದೀಪಕ್ ಎಂಟರ್ ಪ್ರೈಸಸ್ ಘಟಕದ ಮೇಲೆ ದಾಳಿಯಿಟ್ಟ ಸುಮಾರು 75 ಕಾರ್ಮಿಕರು ಈ ಕೃತ್ಯವೆಸಗಿದ್ದಾರೆ. ಇದರಿಂದ 3.88 ಲಕ್ಷ ರುಪಾಯಿ ಮೌಲ್ಯದ ಬೀಡಗಳಿಗೆ ಬೆಂಕಿಗೆ ಆಹುತಿಯಾಗಿವೆ.
ತಕ್ಷಣ ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ. ಬೀಡಿ ಕಾರ್ಮಿಕರ ಒಕ್ಕೂಟದ ನಾಯಕರಾದ ಬಿಎಂ ಭಟ್, ಶೇಖರ್ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಇದೇ ಸಂದರ್ಭದಲ್ಲಿ ಘಟಕದ ಕ್ಲರ್ಕ್ ಹರೀಶ್ ಎಂಬುವವರು ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಸುಮಾರು 20 ಮಂದಿಯ ವಿರುದ್ಧ ದೂರು ದಾಖಲಿಸಿದ್ದಾರೆ.
ಮತ್ತೊಂದು ಪ್ರಕರಣ: ಕೇದಂಬಾಡಿ ಗ್ರಾಮ ಸಮೀಪ ತಿಂಗಳಾಡಿ ಎಂಬಲ್ಲಿ ರಾಧಾಕೃಷ್ಣ ರೈ ಎಂಬುವವರಿಗೆ ಸೇರಿದ ಬೀಡಿ ತಯಾರಿಕಾ ಘಕಕಕ್ಕೂ ಇದೇ ರೀತಿ ಕೋಪೋದ್ರಿಕ್ರತ ಕಾರ್ಮಿಕರು ಬೆಂಕಿಹಚ್ಚಿ ಪರಿಷ್ಕೃತ ಕನಿಷ್ಠ ವೇತನ ಜಾರಿಗೆ ತರಬೇಕು ಎಂದು ಆಗ್ರಹಿಸಿದ್ದರು. ಕಟ್ಟು ಕಟ್ಟಿ ಸಿದ್ಧವಾಗಿದ್ದ ಬೀಡಿಗಳನ್ನು ರಾಧಾಕೃಷ್ಣ ರೈ ಅವರು ಆಟೋ ರಿಕ್ಷಾದಲ್ಲಿ ತುಂಬಿ, ಸಾಗಣೆ ಮಾಡಲು ಸಿದ್ಧತೆ ನಡೆಸಿದ್ದರು. ಆ ವೇಳೆ ಮಾರುತಿ ಕಾರಿನಲ್ಲಿ ಬಂದ ಕಾರ್ಮಿಕರ ಗುಂಪೊಂದು ಈ ಕೃತ್ಯವೆಸಗಿದೆ. ಮತ್ತೊಂದೆಡೆ ಕೌದಿಚ್ಚಾರ್ ಬಳಿ ಸುಮಾರು 50,000 ಬೀಡಿಗಳನ್ನು ಬೆಂಕಿಗೆ ಹಾಕಿದ್ದಾರೆ.












Click it and Unblock the Notifications