ಹುಟ್ಟುಹಬ್ಬದ ಮುಖವಾಡ ಧರಿಸಿ ವೇಶ್ಯಾವಾಟಿಕೆ

ಹೌದು, ಮುಂಬೈನಲ್ಲಿ ಹುಟ್ಟುಹಬ್ಬದ ನೆಪ ಹೇಳಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಜಾಲವನ್ನು ಸೋಮವಾರ ರಾತ್ರಿ ಪೊಲೀಸರು ಭೇದಿಸಿದ್ದಾರೆ. Oshiwara ಬಡಾವಣೆಯಲ್ಲಿನ Masala Curry ರೆಸ್ಟೋರೆಂಟ್‌ನಲ್ಲಿ ಈ ವೇಶ್ಯಾವಾಟಿಕೆ ಅಕ್ರಮ ಚಟುವಟಿಕೆಗಳು ನಡೆಯುತ್ತಿದ್ದವು. ರೆಸ್ಟೋರೆಂಟಿನಲ್ಲಿದ್ದ ನಾಲ್ವರನ್ನು ಬಂಧಿಸಲಾಗಿದ್ದು, 11 ಯುವತಿಯರನ್ನು ರಕ್ಷಿಸಲಾಗಿದೆ. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು, ವೇಶ್ಯಾವಾಟಿಕೆ ಜಾಲವನ್ನು ಪತ್ತೆಹಚ್ಚಿದ್ದಾರೆ.
ಟೀನಾ ಅಲಿಯಾಸ್ ಅನಿತಾ ಛಬ್ರಾ ವೇಶ್ಯವಾಟಿಕೆ ಜಾಲದ ಸೂತ್ರಧಾರಿಣಿ. ಅವಳ ಗೆಳೆಯ ಮೋಹನ್ ತೋಲಾನಿ ಹುಟ್ಟುಹಬ್ಬದ ಪಾರ್ಟಿ ಆಯೋಜಕ. ಇಬ್ಬರನ್ನೂ ಪೊಲೀಸರು ಬಂಧಿಸಿದ್ದಾರೆ. ರೆಸ್ಟೋರೆಂಟ್ ಮಾಲೀಕ ನಾವೇದ್ ಬೈಜಿ ಮತ್ತು ಮ್ಯಾನೇಜರ್ ಚಕ್ರಧರ ಜಲಂಧರ್ ಅವರನ್ನೂ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ತೋಲಾನಿ ತನ್ನ ಮಹಿಳಾ ಸ್ನೇಹಿತೆಯರಿಗೆ sms ಮಾಡಿ, ಕೈತುಂಬಾ ಹಣ ಸಂಪಾದಿಸಬೇಕಾದರೆ ಪಾರ್ಟಿಗೆ ಬನ್ನಿ ಎಂದು ಆಹ್ವಾನಿಸಿದ್ದ. ಅನಂತರ ಪುರುಷ ಗ್ರಾಹಕರನ್ನು ಆಹ್ವಾನಿಸಿ ತಾನು ಹುಟ್ಟುಹಬ್ಬದ ಪಾರ್ಟಿ ಆಯೋಜಿಸುತ್ತೇನೆ ಎಂದು ಹೇಳುತ್ತಿದ್ದ. ಹುಟ್ಟುಹಬ್ಬದ ಪಾರ್ಟಿಗಳಿಗೆ ಆಗಮಿಸುವ ಪುರುಷ ಅತಿಥಿಗಳಿಂದ 3 ಸಾವಿರ ರೂ. ಹಣವನ್ನು ತೋಲಾನಿ ಪೀಕುತ್ತಿದ್ದರೆ, ಯುವತಿಯರಿಗೆ ಉಚಿತ ಪ್ರವೇಶ ಒದಗಿಸುತ್ತಿದ್ದ.
ಕೈತುಂಬಾ ಹಣ ಸಂಪಾದಿಸುವ ಮತ್ತು ವಿಲಾಸಿ ಜೀವನ ನಡೆಸುವ ಆಸೆಯಿಂದ ಅನೇಕ ಯುವತಿಯರು ಪಾರ್ಟಿಗೆ ಬರುತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ. ಕೆಲವು ಯುವತಿಯರು ಕಾಲೇಜ್ ವಿದ್ಯಾರ್ಥಿನಿಯರು, ರೂಪದರ್ಶಿಯರು ಮತ್ತು ಸಣ್ಣಮಟ್ಟದ ಚಿತ್ರನಟಿಯರಾಗಿದ್ದಾರೆ. ಪ್ರತಿಷ್ಠಿತ ಮನೆತನದ ಕೆಲವು ಯುವತಿಯರೂ ಒಳಗೊಂಡಿದ್ದರು. ಪುರುಷ ಅತಿಥಿಗಳು ಶ್ರೀಮಂತ ಮನೆತನವರಾಗಿದ್ದಾರೆ ಎಂದೂ ಪೊಲೀಸರು ತಿಳಿಸಿದ್ದಾರೆ.












Click it and Unblock the Notifications