ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾನ್ಯಾಕೆ ರಾಜೀನಾಮೆ ನೀಡಲಿ ಚಿದು ತಿರುಗೇಟು

By Mahesh
|
Google Oneindia Kannada News

P Chidabaram rejects Resignation Demand
ನವದೆಹಲಿ, ಜೂ.7: 'ನಾನು ಕ್ರಿಮಿನಲ್ ತನಿಖೆ ಎದುರಿಸುತ್ತಿಲ್ಲ, ಯಾವುದೇ ಗುರುತರ ಆರೋಪವನ್ನು ಎದುರಿಸುತ್ತಿಲ್ಲ. ಚುನಾವಣಾ ಮೊಕದ್ದಮೆಗಾಗಿ ರಾಜೀನಾಮೆ ನೀಡುವಂತೆ ಆಗ್ರಹಿಸುತ್ತಿರುವ ಕೆಲ ನಾಯಕರು ಕನಸು ಕಾಣಲಿ. ನಾನು ರಾಜೀನಾಮೆ ನೀಡಲಾರೆ' ಎಂದು ಕೇಂದ್ರ ಗೃಹಸಚಿವ ಪಿ ಚಿದಂಬರಂ ಸ್ಪಷ್ಟವಾಗಿ ಹೇಳಿದ್ದಾರೆ.

ಚುನಾವಣಾ ಅಕ್ರಮಕ್ಕೆ ಸಂಬಂಧಿಸಿದಂತೆ ಮದ್ರಾಸ್ ಹೈಕೋರ್ಟ್ ಗೃಹ ಸಚಿವ ಪಿ ಚಿದಂಬರಂ ಅವರ ವಿರುದ್ಧ ತನಿಖೆಗೆ ಆದೇಶ ಹೊರಡಿಸಿತ್ತು.

2009ರಲ್ಲಿ ಚಿದಂಬರಂ ಅವರು ಚುನಾವಣಾ ಅಕ್ರಮಗಳನ್ನು ನಡೆಸಿ ಗೆಲುವ ಸಾಧಿಸಿದ್ದಾರೆ ಎಂದು ಪರಾಜಿತ ಅಭ್ಯರ್ಥಿ ಎಐಎಡಿಎಂಕೆ ಮುಖಂಡ ರಾಜಕಣ್ಣಪ್ಪ ಅವರು ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ಮದ್ರಾಸ್ ಹೈಕೋರ್ಟ್, ಚಿದಂಬರಂ ಅವರ ವಿರುದ್ಧ ತನಿಖೆಗೆ ಗ್ರೀನ್ ಸಿಗ್ನಲ್ ನೀಡಿತ್ತು.

15ನೇ ಲೋಕಸಭಾ ಸದಸ್ಯರ ಮೇಲೆ ಸುಮಾರು 111ಕ್ಕೂ ಅಧಿಕ ಚುನಾವಣಾ ಅವ್ಯವಹಾರ ಪ್ರಕರಣಗಳು ದಾಖಲಾಗಿದೆ. ಮದ್ರಾಸ್ ಹೈಕೋರ್ಟ್ ನಾನು ಸಲ್ಲಿಸಿದ ಅರ್ಜಿಯನ್ನು ವಜಾಗೊಳಿಸಿದೆ ಎಂದ ಮಾತ್ರಕ್ಕೆ ನಾನು ಅಪರಾಧಿ ಎಂದು ನಿರ್ಧರಿಸುವುದು ಸರಿಯಲ್ಲ ಎಂದು ಚಿದಂಬರಂ ಹೇಳಿದ್ದಾರೆ.

ಹೈಕೋರ್ಟ್ ಆದೇಶ ಹೊರಬಿದ್ದ ಮೇಲೆ ಬಿಜೆಪಿ ರಾಷ್ಟ್ರಾಧ್ಯಕ್ಷ ನಿತಿನ್ ಗಡ್ಕರಿ ಹಾಗೂ ಎಐಎಡಿಎಂಕೆ ಮುಖ್ಯಸ್ಥೆ ಜೆ ಜಯಲಲಿತಾ ಅವರು ತಕ್ಷಣವೇ ಚಿದಂಬರಂ ಅವರ ರಾಜೀನಾಮೆಗೆ ಆಗ್ರಹಿಸಿದ್ದರು. ಪ್ರಧಾನಿ ಮನಮೋಹನ್ ಸಿಂಗ್ ಅವರು ಕೂಡಲೇ ಸಂಪುಟದಿಂದ ಕಿತ್ತುಹಾಕುವಂತೆ ಕೇಳಿಕೊಂಡಿದ್ದರು. ಅದರೆ, ಚಿದಂಬರಂ ಅವರು ಎಲ್ಲಾ ಆರೋಪಗಳನ್ನು ಬದಿಗೊತ್ತಿ, ರಾಜೀನಾಮೆಯನ್ನು ನೀಡುವುದಿಲ್ಲ ಎಂದಿದ್ದಾರೆ. (ಪಿಟಿಐ)

English summary
Home Minister P Chidambaram today(Jun.7) ruled out his resignation in the wake of Madras High Court decision in the election petition against him saying the verdict was not a setback for him but for his rival.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X