• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

MBA ಜಾಣೆ ಬಿಎಂಟಿಸಿ ಬಸ್ಸಿನಲ್ಲಿ ಏನ್ ಮಾಡ್ತಿದ್ಲು ಗೊತ್ತಾ?

By Srinath
|
Smitha Shree
ಬೆಂಗಳೂರು, ಜೂನ್ 7: ಬಿಎಂಟಿಸಿ ಬಸ್‌ಗಳಲ್ಲಿ ಅಮಾಯಕ ಮಹಿಳಾ ಪ್ರಯಾಣಿಕರನ್ನು ಪೀಡಿಸುತ್ತಿದ್ದ ಕಂಡಕ್ಟರ್ ಕಾಮಣ್ಣನ ಬಗ್ಗೆ ಮೊನ್ನೆಯಷ್ಟೇ ಓದಿದ್ದೀರಿ. ಈಗ ಪ್ರಯಾಣಕರಿಗೆ ಕಂಡಕವಾಗಿದ್ದ ಯುವತಿಯ ಬಗ್ಗೆ ತಿಳಿಯಿರಿ. ಈ ಯುವತಿ ಸಾಮಾನ್ಯಳಲ್ಲ. ಎಂಬಿಎ ಪಾಸು ಮಾಡಿರುವ ಜಾಣೆ.

ಆಧುನಿಕ ಜೀವನಶೈಲಿಗೆ ಮೈ-ಮನ ಒಪ್ಪಿಸಿದ್ದ ಈ MBA ಪದವೀಧರೆ ಬಿಎಂಟಿಸಿ ಬಸ್‌ಗಳಲ್ಲಿ ತನ್ನ ಕೈಚಳಕ ತೋರುತ್ತಿದ್ದಳು. ಪ್ರಯಾಣಿಕರನ್ನು ಯಾಮಾರಿಸಿ, ಅವರ ಪರ್ಸ್ ಕಳವು ಮಾಡುತ್ತಿದ್ದಳು. ಇಂತಿಪ್ಪ ಯುವತಿ ಈಗ ಬಾಣಸವಾಡಿ ಪೊಲೀಸರ ಅತಿಥಿಯಾಗಿದ್ದಾಳೆ. ಎಂಟು ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ 10 ಸಾವಿರ ರೂಪಾಯಿ ಹಣವನ್ನು ಈ ಯುವತಿಯಿಂದ ವಶಪಡಿಸಿಕೊಂಡಿದ್ದಾರೆ.

ಬಾಣಸವಾಡಿಯ OMBR ಲೇಔಟ್ ನಿವಾಸಿ ವರುಣಾಶ್ರೀ (24) ಅಲಿಯಾಸ್ ಜಿ ವಿ ಸ್ಮಿತಾಶ್ರೀ ಬಂಧಿತಳು. ಸ್ಮಿತಾಳ ತಂದೆ ವೆಂಕಟರಾಘವ ಕೃಷ್ಣ ತಮಿಳುನಾಡಿನಲ್ಲಿದ್ದು, ತಾಯಿ ಹೇಮಲತಾ ಮನೆ ಕೆಲಸ ಮಾಡಿ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿದ್ದರು. ಸ್ಮಿತಾ ತಮ್ಮ ಅವಿನಾಶ್ 10ನೇ ತರಗತಿಯಲ್ಲಿ ಓದುತ್ತಿದ್ದಾನೆ. 2011ರಲ್ಲಿ ಪ್ರತಿಷ್ಠಿತ ಕಾಲೇಜಿನಲ್ಲಿ ಎಂಬಿಎ ಮುಗಿಸಿದ್ದ ಈ ಯುವತಿ ಒಳ್ಳೆಯ ಕೆಲಸಕ್ಕೆ ಸೇರಿಕೊಂಡು ಅಮ್ಮನ ಕನಸು ಈಡೇರಿಸದೆ ಆಧುನಿಕ ಜೀವನಶೈಲಿಗೆ ಸೋತು, ಕಳ್ಳತನಕ್ಕೆ ಕೈಹಾಕಿದ್ದಳು.

ಪಂಚತಾರಾ ಹೋಟೆಲು, ಪಬ್ಬುಗಳ ಮಬ್ಬುಗತ್ತಲಲ್ಲಿ: 2008ರಲ್ಲಿ ಕಾಲೇಜಿಗೆಂದು ಹೊರಟಿದ್ದ ಸ್ಮಿತಾಗೆ ಶಿವಾಜಿನಗರ ಬಸ್ ನಿಲ್ದಾಣದಲ್ಲಿ ಅಚಾನಕ್ಕಾಗಿ ಪರ್ಸೊಂದು ಸಿಕ್ಕಿತು. ಅದನ್ನು ತೆರೆದು ನೊಡಿದ ಸ್ಮಿತಾ, ಅದರಲ್ಲಿ ತನ್ನ ಭವಿಷ್ಯವನ್ನು ಕಂಡಿದ್ದಾಳೆ. ಪರ್ಸಿನಲ್ಲಿದ್ದ 3000 ರುಪಾಯಿ ಅವಳನ್ನು ಹಾದಿ ತಪ್ಪಿಸಿದೆ. ಅಲ್ಲಿಂದಲೇ ಪರ್ಸ್ ಕಳ್ಳತನ ಆರಂಭಿಸಿದ್ದಾಗಿ ಈ ಪುಣ್ಯಾತಗಿತ್ತಿ ಹೇಳಿಕೊಂಡಿದ್ದಾಳೆ. ಸ್ಮಿತಾ, ಸಿನ್ಮಾ ನೋಡೋದು, ದುಬಾರಿ ಬೆಲೆಯ ಬಟ್ಟೆ ಧರಿಸುವುದು, ಚಿಪ್ಪಲಿ, ಸೌಂದರ್ಯವರ್ಧಕಗಳ ಖರೀದಿ ಮಾಡುತ್ತಾ ಬಿಂದಾಸ್ ಆಗಿ ಲೈಫ್ ಎಂಜಾಯ್ ಮಾಡುತ್ತಿದ್ದಳು. ಜತೆಗೆ ಬಾಯ್ ಫ್ರೆಂಡ್ ಗಳ ಚಟವನ್ನೂ ಅಂಟಿಸಿಕೊಂಡಿದ್ದಳು. ಅದಕ್ಕಾಗಿ ಪಂಚತಾರಾ ಹೋಟೆಲುಗಳು, ಪಬ್ಬುಗಳ ಮಬ್ಬುಗತ್ತಲಲ್ಲಿ ಜೀವನ ಸವೆಸುತ್ತಿದ್ದಳು.

ಚಾಲಾಕಿ ಕಳ್ಳಿಯ ರೌಂಡ್ಸ್: ವರುಣಾಶ್ರೀ ಸವೆಸಿದ ಅಡ್ಡ ಮಾರ್ಗಗಳು ಹೀಗಿವೆ: ಕೆ.ಆರ್.ಮಾರುಕಟ್ಟೆ, ರಿಂಗ್ ರೋಡ್, ಮೆಜೆಸ್ಟಿಕ್, ಶಿವಾಜಿನಗರದ ವೋಲ್ವೊ ಬಸ್‌ ಮಾರ್ಗಗಳು. ಹೆಚ್ಚಾಗಿ ಮಹಿಳೆಯರ ಪರ್ಸ್ ಗಳನ್ನೇ target ಮಾಡುತ್ತಿದ್ದ ವರುಣಾ, ಕಾಲೇಜಿನಲ್ಲಿ ಓದುತ್ತಿದ್ದ ದಿನಗಳಿಂದಲೇ ಈ ಕೃತ್ಯ ಎಸಗುತ್ತಿದ್ದಳು. ಇದುವರೆಗೂ 300ಕ್ಕೂ ಹೆಚ್ಚು ಹ್ಯಾಂಡ್ ಬ್ಯಾಗ್, ಪರ್ಸ್, ಚಿನ್ನದ ಸರಗಳನ್ನು ಕಳವು ಮಾಡಿರುವುದು ವಿಚಾರಣೆಯಿಂದ ಗೊತ್ತಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಚಾಲಾಕಿ ಕಳ್ಳಿ ಮನೆಗಳ್ಳತನಕ್ಕೂ ಕೈಹಾಕಿದ್ದಾಳೆ. ಇತ್ತೀಚೆಗೆ ಒಂದು ಮನೆಗಳ್ಳತನ ಮಾಡಿದ್ದಳು. ಆ ಮನೆಯಲ್ಲಿ ಕಳವು ಮಾಡಿದ್ದ ಆಭರಣಗಳನ್ನು ಬಾಣಸವಾಡಿಯ ಚಿನ್ನಾಭರಣ ಅಂಗಡಿಯಲ್ಲಿ ಮಾರಾಟ ಮಾಡುತ್ತಿದ್ದಳು. ಮಫ್ತಿಯಲ್ಲಿದ್ದ ಪೊಲೀಸರು ಆಕೆಯನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದಾಗ... ಒಂದೊಂದೇ ಪ್ರಕರಣಗಳು ಬಹಿರಂಗವಾಗಿವೆ. ವರುಣಾ ವಿರುದ್ಧ ಬಾಣಸವಾಡಿ, ವಿಜಯನಗರ, ಕೆ.ಆರ್.ಪುರ ಹಾಗೂ ಕೋರಮಂಗಲ ಪೊಲೀಸ್ ಠಾಣೆಗಳಲ್ಲಿ ಹತ್ತಾರು ಕಳವು ಪ್ರಕರಣಗಳು ದಾಖಲಾಗಿವೆ.
ಬಾಣಸವಾಡಿ ಠಾಣೆಯ ಪೇದೆ ಸಯ್ಯದ್ ಮೊಯಿನ್ ಈ ಚಾಲಾಕಿ ಕಳ್ಳಿಯ ಬಂಧನದಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Bangalore MBA student stealing purses in BMTC held- The desire to lead life in the fast track led the student to a part-time career in picking pockets and robbery in BMTC buses. Banaswadi police have taken into custody G V Varunasri (Smitha Shree), 24, a resident of OMBR Layout in the City.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more