• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಜಗನ್ ಕೇಸ್, 4 ಆಂಧ್ರ ಸಚಿವರಿಗೆ ಸಿಬಿಐ ಭೀತಿ

By Mahesh
|
ಹೈದರಾಬಾದ್, ಜೂ.1: ಆಂಧ್ರಪ್ರದೇಶದಲ್ಲಿ ಉಪ ಚುನಾವಣೆ ಹಿನ್ನೆಲೆಯಲ್ಲಿ ಎಲ್ಲಾ ಪಕ್ಷಗಳು ಸಿದ್ಧತೆ ನಡೆಸುತ್ತಿರುವ ಬೆನ್ನಲ್ಲೇ ಜೈಲುಹಕ್ಕಿ'businessmen' ಜಗನ್ ಮೋಹನ್ ರೆಡ್ಡಿ ತಾವಿರುವ ಜೈಲನ್ನೇ ಕಚೇರಿಯಂತೆ ಬಳಸಲು ಪ್ರಾರಂಭಿಸಿದ್ದಾರೆ. ಈ ನಡುವೆ ಜಗನ್ ಅವರನ್ನು ಹೈದಾರಾಬಾದಿನಿಂದ ಬೇರೆಡೆ ಶಿಫ್ಟ್ ಮಾಡಲು ಸಿಬಿಐ ಸಿದ್ಧತೆ ನಡೆಸಿದೆ. ಜೊತೆಗೆ ಆಂಧ್ರಪ್ರದೇಶದ 4 ಸಚಿವರಿಗೆ ಸಿಬಿಐ ಭೀತಿ ಶುರುವಾಗಿದೆ.

ಕಡಪ ಸಂಸದ ಜಗನ್‌ಮೋಹನ್ ರೆಡ್ಡಿ ವಿರುದ್ಧ ಜಾರಿ ನಿರ್ದೇಶನಾಲಯ ವಿದೇಶಿ ವಿನಿಮಯ ಉಲ್ಲಂಘನೆ Foreign Exchange Management Act (FEMA)ಮತ್ತು ಹಣ ಲೇವಾದೇವಿ ನಿಯಂತ್ರಣ ಕಾಯ್ದೆ Prevention of Money Laundering Act (PMLA) ಅನ್ವಯ ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ.

ಧರ್ಮನ ಪ್ರಸಾದ್ ರಾವ್, ಜೆ ಗೀತ್ ರೆಡ್ಡಿ, ಪೊನ್ನಾಲಾ ಲಕ್ಷ್ಮಯ್ಯ ಮತ್ತು ಸಬಿತಾ ರೆಡ್ಡಿ ಅವರ ಮೇಲೆ ಸಿಬಿಐ ಕಣ್ಣಿಟ್ಟಿದೆ.

ದಿವಂಗತ ವೈಎಸ್ ರಾಜಶೇಖರ ರೆಡ್ಡಿ ಅವರು ಮುಖ್ಯಮಂತ್ರಿ ಆಗಿದ್ದ ಕಾಲದಲ್ಲಿ ಕೈಗಾರಿಕಾ, ನೀರಾವರಿ ಮತ್ತು ಗಣಿಗಾರಿಕೆ ಖಾತೆಗಳನ್ನು ಹೊಂದಿದ್ದ ಸಚಿವರುಗಳನ್ನು ಸಿಬಿಐ ಪ್ರಶ್ನಿಸಲಿದೆ.

ಸಬಿತಾ ರೆಡ್ಡಿ ಅವರು ಆಂಧ್ರಪ್ರದೇಶದ ಹಾಲಿ ಗೃಹಸಚಿವೆಯಾಗಿದ್ದು, ಓಬಳಾಪುರಂ ಮೈನಿಂಗ್ ಕಂಪನಿ ಗಣಿ ಅಕ್ರಮಕ್ಕೆ ಸಂಬಂಧಿಸಿದಂತೆ ಈಗಾಗಲೆ ಒಮ್ಮೆ ವಿಚಾರಣೆಗೆ ಒಳಪಟ್ಟಿದ್ದಾರೆ.

ವೈಎಸ್ ರಾಜಶೇಖರ್ ರೆಡ್ಡಿ ಅವರ ಕಾಲದಲ್ಲಿ ಮಂಜೂರಾದ ಭೂಮಿಗಳನ್ನು ಒಂದೊಂದಾಗಿ ವಜಾ ಮಾಡುವಂತೆ ಸಿಬಿಐ ಆಗ್ರಹಿಸಿದೆ. ವೈಎಸ್ ಆರ್ ಕಾಲದಲ್ಲಿ ಮಂಜೂರಾದ ಸರ್ಕಾರಿ ಆದೇಶ ಹಾಗೂ ಅದರಲ್ಲಿ ಸಹಿ ಇರುವ ಸಚಿವರು, ಅಧಿಕಾರಿಗಳು ಈಗ ಸಿಬಿಐ ವಶಕ್ಕೆ ಬರಲಿದ್ದಾರೆ.

ಗಾಲಿ ರೆಡ್ಡಿಗೆ ಗುದ್ದು: ವೈಎಸ್ ಆರ್ ಅವರ ಕಾಲದಲ್ಲಿ 14,000 ಎಕರೆಗೂ ಅಧಿಕ ಭೂಮಿಯನ್ನು ಮಂಜೂರು ಮಾಡಿಸಿಕೊಂಡು ಕಡಪದಲ್ಲಿ ಬ್ರಹ್ಮಿಣಿ ಸ್ಟೀಲ್ ಸ್ಥಾಪನೆ ಮಾಡುವುದಾಗಿ ಕತೆ ಕಟ್ಟಿದ್ದ ಮಾಜಿ ಸಚಿವ ಜನಾರ್ದನ ರೆಡ್ಡಿಗೆ ನಿರಾಶೆಯಾಗಿದೆ.

ಬ್ರಹ್ಮಿಣಿ ಸ್ಟೀಲ್ ಘಟಕಕ್ಕೆ ಮಂಜೂರಾದ ಅಷ್ಟೂ ಭೂಮಿಯನ್ನು ಹಿಂಪಡೆದು ಆಂಧ್ರಪ್ರದೇಶ ಸರ್ಕಾರ ಆದೇಶಿಸಿದೆ.

ಮಾ.12ರಂದು 6 ಆಂಧ್ರಪ್ರದೇಶ ಸಚಿವರು ಹಾಗೂ 8 ಐಎಎಸ್ ಅಧಿಕಾರಿಗಳಿಗೆ ಸುಪ್ರೀಂಕೋರ್ಟ್ ನೋಟಿಸ್ ಜಾರಿ ಮಾಡಿತ್ತು. ಸಾಕ್ಷಿ, ಆಧಾರ ಇರುವುದರಿಂದ ಇರುವ ಮೇಲೆ ಕ್ರಮ ಜರುಗಿಸುವಂತೆ ಸಿಬಿಐಗೆ ಸೂಚಿಸಿತ್ತು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ಇನ್ನಷ್ಟು ಜಗನ್ ಮೋಹನ್ ರೆಡ್ಡಿ ಸುದ್ದಿಗಳುView All

English summary
Four Andhra Pradesh Ministers may come under CBI scanner for their alleged role in issuing controversial Government Orders that have become the basis for filing a case against YSR Congress chief YS Jaganmohan Reddy.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more