ವಿಪ್ರೋನಿಂದ ಕಾಗದರಹಿತವಾದ ಪೊಲೀಸ್ ಠಾಣೆ

ಪೊಲೀಸ್ ಠಾಣೆ ಗಣಕೀರಣ ಕಾರ್ಯಕ್ಕೆ ವಿಪ್ರೊ ಸಂಸ್ಥೆಗೆ 1.96 ಕೋಟಿ ರೂಗಳನ್ನು ನೀಡಲಾಗಿದೆ. ಪೊಲೀಸ್ ಮಾಹಿತಿ ತಂತ್ರಜ್ಞಾನ ಯೋಜನೆಯ ಅನುಷ್ಠಾನವನ್ನು ಪರಾಮರ್ಶಿಸಲಿರುವ ಈ ಸಮಿತಿ ಯೋಜನೆಯ ಒಟ್ಟೂ ವೆಚ್ಚವನ್ನೂ ಪರಿಗಣಿಸಲಿದೆ ಎಂದು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಹೇಳಿದ್ದಾರೆ.
ಗಣಕೀಕರಣ ಪ್ರಕಿಯೆ ಪೂರ್ಣಗೊಂಡಿರುವ ದೃಢೀಕರಣ ಪತ್ರ ನೀಡಿದ್ದು, ದಾಖಲಾಗುವ ಎಫ್‌ಐಆರ್‌ಗಳನ್ನು ಅಧಿಕಾರಿಗಳು ಕೂಡಲೇ ಪರಿಶೀಲಿಸಲು ಗಣಕೀಕರಣ ನೆರವಾಗುತ್ತದೆ ಎಂದಿದ್ದಾರೆ.
ತಮಿಳುನಾಡು, ಆಂಧ್ರಪ್ರದೇಶ ಮತ್ತು ಗುಜರಾತ್ ನಂತರ ಕರ್ನಾಟಕ ಪೊಲೀಸ್ ಇಲಾಖೆಯ ಗಣಕೀಕರಣದಲ್ಲಿ ಮುಂಚೂಣಿಯಲ್ಲಿದೆ. ಇತರ ರಾಜ್ಯಗಳು ಕೇವಲ ಕ್ರೈಂ, ಕಾನೂನು ಮತ್ತು ಸಂಚಾರ ವಿಭಾಗದಲ್ಲಿ ಮಾತ್ರ ಗಣಕೀಕರಣ ಅಳವಡಿಸಿವೆ.
ರಾಜ್ಯದಲ್ಲಿ ಒಟ್ಟು 900 ಪೊಲೀಸ್ ಠಾಣೆಗಳಿದ್ದು 25 ಸಾವಿರ ಗಣಕ ಯಂತ್ರಗಳನ್ನು ಅಳವಡಿಸಲಾಗಿದೆ. 80 ಸಾವಿರ ಪೊಲೀಸ್ ಸಿಬ್ಬಂದಿಯ ಪೈಕಿ 40 ಸಾವಿರ ಸಿಬ್ಬಂದಿಗೆ ತರಬೇತಿ ನೀಡಲಾಗಿದೆ.












Click it and Unblock the Notifications