• search
For Quick Alerts
ALLOW NOTIFICATIONS  
For Daily Alerts

  ಜೋಹಲ್ ಗೆಳೆಯ ಸಾಹಿಲ್ 464 ಕೋಟಿ ವಂಚಕ

  By Mahesh
  |
  ನವದೆಹಲಿ, ಮೇ 29: ಐಪಿಎಲ್ ಟೂರ್ನಿ ಸಮಯದಲ್ಲಿ ಲೈಂಗಿಕ ಕಿರುಕುಳ ಪ್ರಕರಣದಿಂದ ಬೆಳಕಿಗೆ ಬಂದಿದ್ದ ಅಮೆರಿಕನ್ ಮಹಿಳೆ ಜೋಹಾಲ್ ಹಮಿದ್ ಹಾಗೂ ಆಕೆ ಗೆಳೆಯ ಉದ್ಯಮಿ ಸಾಹಿಲ್ ಪೀರ್‌ಝಾದಾ ಮತ್ತೆ ತೊಂದರೆಗೆ ಸಿಕ್ಕಿಕೊಂಡಿದ್ದಾರೆ. ಸಾಹಿಲ್ ಆದಾಯ, ಬಂಡವಾಳ ಹೂಡಿಕೆ ಬಗ್ಗೆ ಅನುಮಾವ ವ್ಯಕ್ತಪಡಿಸಿರುವ ಆದಾಯ ತೆರಿಗೆ ಇಲಾಖೆ ನೋಟಿಸ್ ಜಾರಿ ಮಾಡಿದೆ.

  ಮುಂಬೈ ಮೂಲದ ಸಾಹಿಲ್ ನ ಅಸ್ತಿ ವೌಲ್ಯ 3,000 ಕೋಟಿ ರು ಮೀರುತ್ತದೆ ಎಂದು ಮಾಧ್ಯಮ ವರದಿಗಳ ಆಧಾರದ ಮೇಲೆ ನೋಟಿಸ್ ಜಾರಿ ಮಾಡಿ, ಇಲಾಖೆ ಮುಂದೆ ಹಾಜರಾಗುವಂತೆ ಸಮನ್ಸ್ ನೀಡಲಾಗಿದೆ.

  ಆಸೀಸ್ ಆಟಗಾರ ಲೂಕ್ ಪೊಮರ್ಸ್ ಬ್ಯಾಕ್ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿದಂತೆ ಜೋಹಾಲ್ ರಕ್ಷಿಸಲು ಹೋದ ಸಾಹಿಲ್ ಕೂಡಾ ಸರಿಯಾಗಿ ಪೆಟ್ಟು ತಿಂದಿದ್ದರು. ಆದರೆ, ನಂತರ ಜೋಹಾಲ್ ಹಾಗೂ ಸಾಹಿಲ್ ದೂರು ಹಿಂಪಡೆದು ರಾಜಿ ಮಾಡಿಕೊಂಡು ಪ್ರಕರಣಕ್ಕೆ ಸುಖಾಂತ್ಯ ಹಾಡಿದ್ದರು.

  ಆತ ಮಾಧ್ಯಮಗಳಿಗೆ ನೀಡಿರುವ ಹೇಳಿಕೆ ಮತ್ತು ನಮಗೆ ಸಲ್ಲಿಸಿರುವ ದಾಖಲೆಗಳು ತಾಳೆಯಾಗಬೇಕಿದ್ದು, ಅದನ್ನು ವಿಶೇಷ ಘಟಕದ ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.

  ಆತನ ಇತ್ತೀಚಿನ ವಿದೇಶಿ ಪ್ರಯಾಣ ಮತ್ತು ಹೂಡಿಕೆಯ ವಿವರಗಳನ್ನು ನೀಡುವಂತೆ ಸೂಚಿಸಲಾಗಿದೆ.

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  English summary
  After IPL molestation row, US national Zohal Hamid's close friend Peerzada has recieved Income Tax notice. Mumbai based businessman Sahil was the mastermind of Rs 464 crore gold fraud. Sahil allegedly possess Rs 3,000 Cr illegal assets.

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more