ಗೆಳೆಯನ ಜತೆ ಓಡಿಹೋದ ವಿವಾಹಿತ ಶಾಸಕಿ

ಯಾರಪ್ಪಾ ಆ ಮಹಾಪ್ರೇಮಿ ಅಂದಿರಾ!? ಅವರೇ ರೂಮೀ ನಾಥ್ ಎಂಬ 32 ವರ್ಷದ ಶಾಸಕಿ ಯಾನೆ ಪ್ರೇಮಿ ಯಾನೆ ಮುದ್ದಾದ ಮಗುವೊಂದರ ಹೆತ್ತಮ್ಮ. ಯಾನೆ ಪ್ರಿಯಕರನಿಗಾಗಿ ಗಂಡ, ಮಗುವನ್ನು ಬಿಟ್ಟು ಕಳೆದ ಮಂಗಳವಾರ ಪರಾರಿಯಾಗಿರುವ ಜನಪ್ರತಿನಿಧಿ.
ಅಂದಹಾಗೆ ಇವರು ಪ್ರತಿನಿಧಿಸುತ್ತಿರುವುದು ಬಾರ್ಕೋಲಾ ವಿಧಾನಸಭಾ ಕ್ಷೇತ್ರವನ್ನು. ಮೂಲತಃ ಬಿಜೆಪಿ ಪಕ್ಷದವರಾದ ರೂಮೀ ಇದೀಗ ಕಾಂಗ್ರೆಸ್ ಶಾಸಕಿಯಾಗಿದ್ದಾರೆ.
ಅಷ್ಟಕ್ಕೂ ಈಕೆ ಓಡಿಹೋಗಿರುವುದು ಜಾಕಿ ಝಕೀರ್ ಎಂಬ ಸರಕಾರಿ ಉದ್ಯೋಗಿಯನ್ನು. ಓಡಿಹೋಗಿರುವುದು ಪಕ್ಕದ ಬಾಂಗ್ಲಾದೇಶಕ್ಕೆ. ತನ್ನ ಹೆಂಡತಿಯ ಅಪಹರಣವಾಗಿದೆ ಎಂದು ರೂಮಿಯ ಮೊದಲ ಪತಿ ರಾಕೇಶ್ ಸಿಂಗ್ ಅವರು ಮುಖ್ಯಮಂತ್ರಿ ತರುಣ್ ಗೊಗೋಯ್ ಗೆ ಅಲವತ್ತುಕೊಂಡಿದ್ದಾರೆ. ಪೊಲೀಸರು ಈಗ ಈ ಯುವ ಜೋಡಿಯ ಬೆನ್ನುಹತ್ತಿದ್ದಾರೆ.
ದೀರ್ಘ ಕಾಲದ ಗೆಳೆಯ ಜಾಕಿ ಜತೆ ಮದುವೆಯಾಗಲಯು ಈಕೆ ಭರ್ಜರಿ ತಯಾರಿಯನ್ನೇ ನಡೆಸಿದ್ದಾಳೆ. ಒಂದು ತಿಂಗಳ ಹಿಂದೆಯೇ ಜಾಕಿಗೋಸ್ಕರ ಇಸ್ಲಾಂ ಮತಕ್ಕೆ convert ಸಹ ಆಗಿದ್ದಾಳೆ. ಅಸ್ಸಾಂನ ರಾಜ್ಯ ಸಚಿವ ಸಿದ್ದಿಕಿ ಅಹ್ಮದ್ ನೂತನ ದಂಪತಿಯನ್ನು ಹರಿಸಿರುವುದಾಗಿ ಹೇಳಿ ರೂಮೀ ನಾಥ್, ಮದುವೆ ವಿಡಿಯೋವನ್ನು ಮಾಧ್ಯಮಗಳಿಗೆ ತಲುಪಿಸಿದ್ದಾಳೆ.












Click it and Unblock the Notifications