Hewlett-Packard: 27 ಸಾವಿರ ಮಂದಿ ಮನೆಗೆ

2014ರ ವೇಳೆಗೆ ಜಾಗತಿಕ ಮಟ್ಟದಲ್ಲಿ ಶೇ. 8ರಷ್ಟು ಮಂದಿಯನ್ನು 27 ಸಾವಿರ ಮಂದಿಯನ್ನು ಮನೆಗೆ ಕಳಿಸಲು ಕಂಪನಿ ನಿರ್ಧರಿಸಿದೆ. ವಿಶ್ವದ ಅತಿ ದೊಡ್ಡ personal computer ತಯಾರಿಕೆ ಸಂಸ್ಥೆಯೆನಿಸಿರುವ, HP, ತನ್ನ ವಹಿವಾಟು ಪ್ರಕ್ರಿಯೆಯನ್ನು ಸರಳಗೊಳಿಸಲು ಇದು ಅನಿವಾರ್ಯವಾಗಿದೆ. ಗ್ರಾಹಕರಿಗೆ ಉತ್ತಮ ಅಭಿವೃದ್ಧಿ ಸಂಶೋಧನೆಗಳು, ಉದ್ಯೋಗಿಗಳು ಮತ್ತು ಷೇರುದಾರರಿಗೆ ಅರ್ಹ ಪ್ಯಾಕೇಜ್ ನೀಡಲು ಇದು ಅನಿವಾರ್ಯ ಎಂದು ತಿಳಿಸಿದೆ.
ಇದರಿಂದ ಕಂಪನಿಗೆ 2014ರ ಹಣಕಾಸು ವರ್ಷದ ಅಂತ್ಯದ ವೇಳೆಗೆ 3.0 -3.5 ಶತಕೋಟಿ ಡಾಲರ್ ಉಳಿತಾಯವಾಗಲಿದೆ. ಪ್ರಸ್ತುತ ಕಂಪನಿಯ ಆರ್ಥಿಕ ಪರಿಸ್ಥಿತಿ ಅಷ್ಟೇನೂ ಉತ್ತಮವಾಗಿಲ್ಲ. ಕಳೆದ ತ್ರೈಮಾಸಿಕದಲ್ಲಿ ಕಂಪನಿ ನಿವ್ವಳ ಲಾಭ ಶೇ. 30ರಷ್ಟು ಕುಸಿದಿತ್ತು.
ಆಯಾ ದೇಶದಲ್ಲಿ ನಮ್ಮ ಕಂಪನಿ ಉದ್ಯೋಗಿಗಳ ಆಯ್ಕೆಗೆ ತಕ್ಕಂತೆ ಮತ್ತು ಕಾರ್ಮಿಕ ಕಾನೂನುಗಳಿಗೆ ಅನುಗುಣವಾಗಿ VRS ನಂತಹ ಯೋಜನೆಗಳನ್ನು ಜಾರಿಗೊಳಿಸಿ, ಈ ಉದ್ಯೋಗ ಕಡಿತಕ್ಕೆ ಕ್ರಮ ಕೈಗೊಳ್ಳುವುದಾಗಿ ಕಂಪನಿ ಹೇಳಿದೆ.












Click it and Unblock the Notifications