ಯುವತಿಯ ಅಪಹರಣ, ಸಾಮೂಹಿಕ ಅತ್ಯಾಚಾರ

woman-abducted-gang-molested-in-van
ನವದೆಹಲಿ, ಮೇ 21: ದಕ್ಷಿಣ ದೆಹಲಿಯಲ್ಲಿ ಯುವ ಮಹಿಳೆಯನ್ನು ಅಪಹರಿಸಿದ 5 ಜನರ ದುಷ್ಕರ್ಮಿಗಳು ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿರುವ ಘಟನೆ ನಡೆದಿದೆ. ಚಿಕಿತ್ಸೆಗಾಗಿ ಮಹಿಳೆಯನ್ನು ಅಖಿಲ ಭಾರತ ವೈದ್ಯಕೀಯ ಮಹಾ ಸಂಸ್ಥೆಗೆ (AIIMS) ದಾಖಲಿಸಲಾಗಿದೆ.

ಮಹಿಳೆಯು ಶುಕ್ರವಾರ ರಾತ್ರಿ 7.30ರಲ್ಲಿ ಕೆಲಸ ಮುಗಿಸಿಕೊಂಡು ಬರುತ್ತಿದ್ದಾಗ ಈ ಅಮಾನವೀಯ ಘಟನೆ ನಡೆದಿದೆ. ಗ್ರಾಮೀಣ ಸೇವಾ ವ್ಯಾನಿನ ಚಾಲಕನೊಬ್ಬ ಆರಂಭದಲ್ಲಿ ಮಹಿಳೆಗೆ ಲಿಫ್ಟ್ ಕೊಡುವುದಾಗಿ ವಾಹನದೊಳಕ್ಕೆ ಹತ್ತಿಸಿಕೊಂಡಿದ್ದಾನೆ. ಮಾರ್ಗ ಮಧ್ಯೆ ಉಳಿದ ಆರೋಪಿಗಳನ್ನು ವಾಹನದೊಳಕ್ಕೆ ಹತ್ತಿಸಿಕೊಂಡಿದ್ದಾನೆ.

ಆದರೆ ಆಕೆಯನ್ನು ನಜಾಫ್ ಗಡಕ್ಕೆ ಕರೆದೊಯ್ಯುವ ಬದಲು ನೆಹರೂ ಪ್ರದೇಶದಲ್ಲಿ ನಿರ್ಜನ ಸ್ಥಳಕ್ಕೆ ಕರೆದೊಯ್ದಿದ್ದಾನೆ. ಅಲ್ಲಿ ನಿರ್ಜನ ಪ್ರದೇಶದಲ್ಲಿ ವಾಹನ ನಿಲ್ಲಿಸಿ, ಪಾತಕಿಗಳು ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ.

ನಂತರ ಮಹಿಳೆಯನ್ನು ಮದಾನ್ ಪುರ ಖಾದರ್ ದಲ್ಲಿರುವ ಆಕೆಯ ಮನೆಗೆ ಕರೆದೊಯ್ದು ಬಿಡಲಾಗಿದೆ. ಅಲ್ಲಿಯೂ ಮತ್ತೆ ರೇಪ್ ನಡೆದಿದೆ. ಶನಿವಾರ ಬೆಳಗ್ಗೆ ಮಹಿಳೆಯನ್ನು ವ್ಯಾನಿನಲ್ಲಿ ಕರೆದೊಯ್ದು ನೆಹರೂ ಪ್ರದೇಶದಲ್ಲಿ ಬಿಡಲಾಗಿದೆ. ಮಹಿಳೆಯ ಅಪಹರಣ ಮತ್ತು ಸಾಮೂಹಿಕ ಅತ್ಯಾಚಾರ ಪ್ರಕರಣವನ್ನು ದಾಖಲಿಸಿಕೊಂಡಿರುವ ಪೊಲೀಸರು ಪ್ರಕರಣದ ಸಂಬಂಧ ನಾಲ್ವರನ್ನು ಬಂಧಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+