ಫೇಸ್ ಬುಕ್ ಸಿಇಒ ಮಾರ್ಕ್ ಮದುವೆ ಪರ್ಫೆಕ್ಟ್ ಟೈಮಿಂಗ್

ಫೇಸ್ ಬುಕ್ ಐಪಿಒ ಬಿಡುಗಡೆ ಆದ ನಂತರ ಮದುವೆಯಾಗಿರುವ ಮಾರ್ಕ್, ಮುಂದೆ ಎಂದಾದರೂ ವಿವಾಹ ವಿಚ್ಛೇದನಗೊಂಡರೂ ತಮ್ಮ ಆಸ್ತಿ ಮೌಲ್ಯ ಉಳಿಸಿಕೊಳ್ಳುವ ಜಾಣತನದ ನಿರ್ಧಾರಕ್ಕೆ ವಕೀಲರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಮದುವೆಗೂ ಮುನ್ನ ಎಲ್ಲಾ ಕ್ಯಾಲಿಫೋರ್ನಿಯಾ ಪ್ರಜೆಗಳಂತೆ ಮಾರ್ಕ್ ಹಾಗೂ ಆತನ ಗೆಳತಿ ಪ್ರಿಸಿಲ್ಲಾ ಚಾನ್ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಮುಂದೊಂದು ದಿನ ವಿಚ್ಛೇದನಗೊಂಡರೆ ಹೇಗೆ ಆಸ್ತಿಯನ್ನು ಹಂಚಿಕೊಳ್ಳಬೇಕು, ಫೇಸ್ ಬುಕ್ ಷೇರುಗಳ ಕತೆ ಏನು ಎಂಬುದನ್ನು ಈಗಲೇ ಮಾರ್ಕ್ ನಿರ್ಧರಿಸಿದ್ದಾರೆ ಎನ್ನಲಾಗಿದೆ.
ಈ ಮೂಲಕ ಹಲವು ಕೋಟಿ ಡಾಲರ್ ಬೆಲೆ ಬಾಳುವ ಫೇಸ್ ಬುಕ್ ಷೇರುಗಳನ್ನು ಹೇಗೆ ಉಳಿಸಿಕೊಳ್ಳಬೇಕು ಎಂಬ ದೂರಾಲೋಚನೆ ಮಾರ್ಕ್ ಮಾಡಿದ್ದಾರೆ. ಆದರೆ, ಫೇಸ್ ಬುಕ್ ವಕ್ತಾರೆ ಈ ರೀತಿ ಯಾವುದೇ ಒಪ್ಪಂದ ಆಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಆದರೆ, ಕ್ಯಾಲಿಫೋರ್ನಿಯಾದ ವಕೀಲರ ಪ್ರಕಾರ ಚಾನ್ ಮಡಿಲಿಗೆ ಕನಿಷ್ಠವೆಂದರೂ 20 ಬಿಲಿಯನ್ ಡಾಲರ್ ಫೇಸ್ ಬುಕ್ ಷೇರುಗಳು ಬಂದು ಬೀಳಲಿದೆಯಂತೆ.
ದೀರ್ಘಕಾಲದ ಸ್ನೇಹಿತೆ ಪ್ರಿಸಿಲ್ಲಾ ಚಾನ್‌ರೊಂದಿಗೆ ಮೇ 19, 2012ರಂದು ವಿವಾಹವಾಗಿರುವುದಾಗಿ ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ 28ರ ಹರೆಯದ ಮಾರ್ಕ್ ಝುಕರ್‌ಬರ್ಗ್ Status ಅಪ್ಡೇಟ್ ಮಾಡಿದ್ದರು.
27ರ ಹರೆಯದ ಪ್ರಿಸಿಲ್ಲಾ ಚಾನ್ ಹಾಗೂ ಝುಕರ್‌ಬರ್ಗ್ ಮೊದಲ ಬಾರಿಗೆ ಹಾರ್ವರ್ಡ್‌ನಲ್ಲಿ ಭೇಟಿಯಾದ ಮೇಲೆ ಸುಮಾರು 9 ವರ್ಷಗಳಿಂದ 'ಡೇಟಿಂಗ್" ನಡೆಸಿದ್ದರು.












Click it and Unblock the Notifications