ಕಾಲೇಜು ಕ್ಯಾಂಪಸ್ಸಿನಲ್ಲಿ ಲಾ ವಿದ್ಯಾರ್ಥಿನಿ ಮಾನಭಂಗ

chandigarh-law-student-gang-molested-in-suv
ಚಂಡೀಗಢ, ಮೇ 19: ಕಾಲೇಜು ಕ್ಯಾಂಪಸ್ಸಿನಲ್ಲಿ ಕ್ರೀಡಾ ವಾಹನದಲ್ಲಿ ಕಾನೂನು ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿಯ ಮೇಲೆ 24 ಗಂಟೆ ಕಾಲ ಮಾನಭಂಗ ಮಾಡಿರುವ ಘಟನೆ ವರದಿಯಾಗಿದೆ.

ಹರಿಯಾಣಾದ ಸೋನಿಪತ್ ಜಿಲ್ಲೆಯ ಖಾನ್ ಪುರ ಗ್ರಾಮದ ಸಮೀಪವಿರುವ ಭಗತ್ ಪೂಲ್ ಸಿಂಗ್ ಮಹಿಳಾ ಕಾನೂನು ಕಾಲೇಜಿನಲ್ಲಿ ಮೊದಲ ವರ್ಷದ ವಿದ್ಯಾರ್ಥಿನಿಯ ಮೇಲೆ ನಾಲ್ವರು ಕಾಮುಕರು ಬುಧವಾರ ಮತ್ತು ಗುರುವಾರ ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ. ಬಾಧಿತ ವಿದ್ಯಾರ್ಥಿನಿ ಪ್ರಸ್ತುತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕ್ಯಾಂಪಸ್ ಆವರಣದಲ್ಲಿರುವ ಹಾಸ್ಟೆಲಿನಲ್ಲಿ ಬಾಧಿತ ವಿದ್ಯಾರ್ಥಿನಿ ವಾಸಿಸುತ್ತಿದ್ದು, ತನ್ನ ಮೇಲೆ ಅತ್ಯಾಚಾರವೆಸಗಿದ ದುರುಳರ ಹೆಸರುಗಳನ್ನು ಪೊಲೀಸರಿಗೆ ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವಿದ್ಯಾರ್ಥಿನಿಯ ದೂರಿನ ಪ್ರಕಾರ... ಅಮಿತ್ ಎಂಬ ಯುವಕ ಕ್ಯಾಂಪಸ್ ಆವರಣದಲ್ಲಿ ಕ್ಯಾಂಟಿನ್ ನಡೆಸುತ್ತಿದ್ದು, ಆತನೇ ಪ್ರಕರಣದ ಪ್ರಮುಖ ಆರೋಪಿ. ಬುಧವಾರ ಮಧ್ಯಾಹ್ನ ಸದರಿ ವಿದ್ಯಾರ್ಥಿನಿ ಶಾಪಿಂಗ್ ಮುಗಿಸಿಕೊಂಡು ಹಾಸ್ಟೆಲಿನತ್ತ ಧಾವಿಸುತ್ತಿದ್ದಳು. ಆಗ ಅಮಿತ್ ಮತ್ತು ಅವನ ಸ್ನೇಹಿತರು ವಿದ್ಯಾರ್ಥಿನಿಯನ್ನು ತಮ್ಮ ಸ್ಕಾರ್ಪಿಯೋ ಕ್ರೀಡಾ ವಾಹನದೊಳಕ್ಕೆ ಎಳೆದುಕೊಂಡರು.

ಮಾರನೆಯ ದಿನದ ವರೆಗೂ (ಗುರವಾರ) ವಿದ್ಯಾರ್ಥಿನಿಯ ಮೇಲೆ ಅಮಿತ್ ಗ್ಯಾಂಗ್ ಸತತವಾಗಿ ರೇಪ್ ಮಾಡಿದೆ. ಗುರವಾರ ಸಂಜೆ ಆ ವಿದ್ಯಾರ್ಥಿನಿಯನ್ನು ಕಾಲೇಜು ಗೇಟಿನ ಬಳಿ ವಾಹನದಿಂದ ಕೆಳಗೆ ಬಿಸಾಕಿ, ಗ್ಯಾಂಗ್ ಪರಾರಿಯಾಗಿದೆ.

ಪ್ರಕರಣವನ್ನು ಗಂಭಿರವಾಗಿ ಪರಿಗಣಿಸಿರುವ ಕಾಲೇಜು ಮುಖ್ಯಸ್ಥ ಪಂಕಜ್ ಮಿತ್ತಕಲ್ ಅವರು ಮುಂದಿನ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಮೊರೆಹೋಗಿದ್ದಾರೆ. ಈ ಮಧ್ಯೆ, ಕಾಲೇಜಿನ ನೂರಾರು ವಿದ್ಯಾರ್ಥಿನಿಯರು ಶುಕ್ರವಾರ ಭಾರಿ ಪ್ರತಿಭಟನೆ ನಡೆಸಿದ್ದಾರೆ. ಸೋನಿಪತ್- ಗೊಹಾನಾ ಹೆದ್ದಾರಿಯಲ್ಲಿ ಸಂಚಾರ ಬಂದ್ ಮಾಡಿಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+