ಬಾಬಾ ರಾಮದೇವ್ ಟ್ರಸ್ಟ್ ಮೇಲೆ 58 ಕೋಟಿ ಹೊರೆ

ದಾನ ದತ್ತಿ, ಉಚಿತ ಸೇವೆ ಹೆಸರಿನಲ್ಲಿ ಔಷಧ ವಿತರಣೆಯಾಗುತ್ತಿದೆ. ಇದರಲ್ಲಿ ಲಾಭ ಮಾಡುವ ಯಾವ ಉದ್ದೇಶವೂ ನಮ್ಮ ಟ್ರಸ್ಟ್ ಗಿಲ್ಲ. ಆದಾಯ ತೆರಿಗೆ ಇಲಾಖೆ ನೋಟಿಸ್ ಪ್ರಶ್ನಿಸಿ ಮೇಲ್ದಧಿಕಾರಿಗಳಿಗೆ ಅರ್ಜಿ ಸಲ್ಲಿಸಲಾಗಿದೆ. ನಮಗೆ ನ್ಯಾಯ ಸಿಗಲಿದೆ ಎಂದು ರಾಮದೇವ್ ಅವರ ವಕ್ತಾರ ಎಸ್ ಕೆ ತಿಜರ್ ವಾಲ ಅವರು ಪಿಟಿಐಗೆ ಹೇಳಿದೆ.
ಟ್ರಸ್ಟ್ ನಿಂದ ಯಾವುದೇ ದಾನ ಧರ್ಮ ನಡೆಯುತ್ತಿಲ್ಲ ಎಂಬ ಆರೋಪವನ್ನು ಅಲ್ಲಗೆಳೆದ ತಿಜರ್ ವಾಲ, ರಾಮ ದೇವ್ ಅವರು ನಡೆಸುತ್ತಿರುವ ಆಸ್ಪತ್ರೆ ಹಾಗೂ ಶಿಕ್ಷಣ ಸಂಸ್ಥೆಗಳ ಪರಿಚಯ ಬಹುಶಃ ಇಲಾಖೆ ಇಲ್ಲವೆಂದು ಕಾಣುತ್ತಿದೆ ಎಂದು ಹೇಳಿದ್ದಾರೆ.
ಆದರೆ, ಟ್ರಸ್ಟ್ ನ ಕಾರ್ಯದ ಬಗ್ಗೆ ಪ್ರಶ್ನಿಸಿರುವ ಇಲಾಖೆ 58 ಕೋಟಿ ರು ತೆರಿಗೆ ಕಟ್ಟುವಂತೆ ಸೂಚಿಸಿದೆ. 2009-10ರ ಆರ್ಥಿಕ ವರ್ಷದ ಹೇಳಿಕೆಯಂತೆ ಟ್ರಸ್ಟ್ 120 ಕೋಟಿ ಆದಾಯ ಹೊಂದಿದೆ.












Click it and Unblock the Notifications