ಮತ್ತೆ ಯಡಿಯೂರಪ್ಪಗಾಗಿ ಅಡ್ಡಬಿದ್ದ ಈಶ್ವರಪ್ಪ

ಶುಕ್ರವಾರ(ಮೇ.18) ಬೆಳಗ್ಗೆ ಬೆಟ್ಟದ ತಾಯಿ ಚಾಮುಂಡೇಶ್ವರಿಗೆ ಕೈ ಮುಗಿದು ಹೊರ ಬಂದ ಮೇಲೆ ಸುದ್ದಿಗಾರರೊಂದಿಗೆ ಮಾತನಾಡಿದ ಈಶ್ವರಪ್ಪ, ಯಡಿಯೂರಪ್ಪ ಅವರಿಗೆ ಸೂಕ್ತ ಸ್ಥಾನಮಾನ ನೀಡುವ ಬಗ್ಗೆ ಪಕ್ಷದ ಹಿರಿಯ ನಾಯಕರು ಶೀಘ್ರದಲ್ಲೇ ಕ್ರಮ ಕೈಗೊಳ್ಳಲಿದ್ದಾರೆ. ಧರ್ಮೇಂದ್ರ ಪ್ರಧಾನ್ ಹಾಗೂ ಅರುಣ್ ಜೇಟ್ಲಿ ಅವರು ಬಿಕ್ಕಟ್ಟು ಶಮನಗೊಳಿಸುತ್ತಾರೆ ಎಂಬ ವಿಶ್ವಾಸವಿದೆ ಎಂದರು.
ಕಾಂಗ್ರೆಸ್ ಮೇಲೆ ಕಿಡಿ: ವಿನಾಕರಣ ಬಿಜೆಪಿ ಮೇಲೆ ಗೂಬೆ ಕೂರಿಸುವ ಕಾಂಗ್ರೆಸ್ ನಾಯಕರ ವಿರುದ್ಧ ಈಶ್ವರಪ್ಪ ಕಿಡಿಕಾರಿದರು. ಎಸ್ಎಂ ಕೃಷ್ಣ, ಧರಂ ಸಿಂಗ್ ಅವರ ಮೇಲೂ ಅಕ್ರಮ ಗಣಿಗಾರಿಕೆ, ಡಿ ನೋಟಿಫಿಕೇಷನ್ ಪ್ರಕರಣಗಳಿದೆ ಎಂಬುದನ್ನು ಕಾಂಗ್ರೆಸ್ಸಿಗರು ಮರೆತಿರುವಂತಿದೆ.
ಕಾನೂನಿನ ಮುಂದೆ ಯಾರು ದೊಡ್ಡವರಲ್ಲ. ಯಡಿಯೂರಪ್ಪ ಅವರು ಕಾನೂನಿಗೆ ತಲೆ ಬಾಗಿದ್ದಾರೆ. ಕಾನೂನು ಪ್ರಕಾರ ಏನು ನಡೆಯುತ್ತದೋ ಅದು ನಡೆಯಲಿ. ಯಡಿಯೂರಪ್ಪ ಬಿಜೆಪಿ ಪಕ್ಷದ ಹಿರಿಯ ನಾಯಕರು ಎಂಬುದನ್ನು ಕಾಂಗ್ರೆಸ್ಸಿಗರು ನೆಪಿಲ್ಲಿಡಲಿ ಎಂದು ಈಶ್ವರಪ್ಪ ಹೇಳಿದ್ದಾರೆ.











Click it and Unblock the Notifications