ನೇಪಾಳ : ವಿಮಾನ ಪತನ, 13 ಭಾರತೀಯರು ಸಾವು

ಅಗ್ನಿ ಸಂಸ್ಥೆಯ Dornier 228 9N AIG ವಿಮಾನ ನೇಪಾಳ ಕಾಲಮಾನದ ಪ್ರಕಾರ ಬೆಳಗ್ಗೆ 9.46 ರ ಸುಮಾರಿಗೆ ಲ್ಯಾಂಡಿಂಗ್ ಆಗುವಾಗ ಅಪಘಾತ ಕಂಡಿದೆ. ಅಪಘಾತದ ನಿಖರ ಕಾರಣ ಇನ್ನೂ ತಿಳಿದು ಬಂದಿಲ್ಲ ಎಂದು ಅಗ್ನಿ ಸಂಸ್ಥೆ ನಿರ್ದೇಶಕ ಪ್ರಮೋದ್ ಪಾಂಡೆ ಹೇಳಿದ್ದಾರೆ.
13 ಜನ ಭಾರತೀಯರಲ್ಲದೆ ಮೂವರು ಮಕ್ಕಳು, ಇಬ್ಬರು ಡ್ಯಾನಿಷ್ ಪ್ರಜೆಗಳು ಹಾಗೂ ಪೈಲಟ್ ಪಿಎಸ್ ಪಾಠಕ್, ಕೋ ಪೈಲಟ್ ಎಚ್ ಡಿ ಮಹರಜನ್ ಹಾಗೂ ಒಬ್ಬ ಗಗನಸಖಿ ಇದ್ದರು ಎಂದು ತಿಳಿದು ಬಂದಿದೆ.
ಘಟನೆಯಲ್ಲಿ ಗಾಯಗೊಂಡ 6 ಜನರನ್ನು ಪೊಖಾರ ಕಾಲೇಜ್ ಆಫ್ ಮೆಡಿಸನ್ ಸೈನ್ಸಸ್ ಗೆ ಸೇರಿಸಲಾಗಿದ್ದು, ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದು ಬಂದಿದೆ. ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ : 0097714423702 ಹಾಗೂ 0097714410900/Ext 4109
ಪ್ರಯಾಣಿಕರ ಪಟ್ಟಿ ಪ್ರಕಾರ ಆನ್ ಬೋರ್ಡ್ ಆದ 16 ಜನ ಭಾರತೀಯರ ಹೆಸರುಗಳು ಈ ರೀತಿ ಇದೆ:
* ಕೆ.ಮಾಮಾನ್ಯ
* ಎಂ. ಹಾಂಡ
* ಎಂ ಅರೋರ
* ಕೆ ಅರೋರ
* ಟಿ ಸಚದೇವ್
* ಜಿ ಸಚದೇವ್
* ಸಾನಿಯಮ್ ಸುಧರ್
* ಜಿ.ರಾಮನ್
* ಕಿಡಾಂಬಿ ತಿರುಮಲ
* ಲತಾ ಎಚಾಂಬಡೆ
* ಶ್ರೀವ ಕಿಡಾಂಬಿ ತಿರುಮಲ
* ಶ್ರೀಪಾದ ಕಿಡಾಂಬಿ ತಿರುಮಲ
* ಕುಮಾರ್
* ಶ್ರೀಮತಿ ಕುಮಾರ್
ಈ ಪೈಕಿ 13 ಜನ ಮಾತ್ರ ಸಾವನ್ನಪ್ಪಿದ್ದಾರೆ. ಗಾಯಗೊಂಡ ಮಕ್ಕಳಿಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸೆಪ್ಟೆಂಬರ್ 25, 2011ರಲ್ಲಿ ಮೌಂಟ್ ಎವೆರೆಸ್ಟ್ ವೀಕ್ಷಣೆಗೆ ತೆರಳಿದ್ದ 19 ಜನ ಪ್ರಯಾಣಿಕರ ಬುದ್ಧ ವಿಮಾನ ಅಪಘಾತಕ್ಕೀಡಾಗಿತ್ತು.. ಈ ದುರಂತದಲ್ಲಿ ವಿಮಾನದಲ್ಲಿದ್ದ 18 ಜನ ಸಾವನ್ನಪ್ಪಿದ್ದರು. ಮೃತರಲ್ಲಿ 10 ಮಂದಿ ಭಾರತೀಯರು ಇದ್ದರು.












Click it and Unblock the Notifications