ಹೈಕಮಾಂಡಿಗೆ ಯಡಿಯೂರಪ್ಪ ಭಯ ಕಮ್ಮಿಯಾಗಿಲ್ಲ

2004 ರ ನಂತರ ಬಿಜೆಪಿಗೆ ಆರ್ಥಿಕವಾಗಿ ಆಧಾರವಾಗಿ ನಿಂತವರು ಯಡಿಯೂರಪ್ಪ. ಹತ್ತು ಹಲವು ಚುನಾವಣೆಗಳನ್ನು ಯಡಿಯೂರಪ್ಪ ಅವರ ನಾಯಕತ್ವದಲ್ಲಿ ಬಿಜೆಪಿ ಗೆದ್ದಿರುವುದನ್ನು ತೆಗೆದು ಹಾಕುವಂತಿಲ್ಲ. ಮುಂದಿನ ದಿನಗಳಲ್ಲಿ ಚುನಾವಣೆ ಎದುರಿಸಬೇಕಾದರೂ ಲಿಂಗಾಯತ ಮತಗಳು, ಆರ್ಥಿಕ ನೆರವು ಬೇಕಾದರೆ ಮತ್ತೊಮ್ಮೆ ಯಡಿಯೂರಪ್ಪ ಅವರನ್ನೇ ಹೈಕಮಾಂಡ್ ನೆಚ್ಚಿಕೊಂಡಿದೆ. ಹೀಗಾಗಿ ಯಡಿಯೂರಪ್ಪ ತಮ್ಮ ಆಟವನ್ನು ಸಮರ್ಥವಾಗಿ ಆಡುತ್ತಾ ಬಂದರು.
ಈಗ ಬಿಜೆಪಿ ಮೆಕ್ ಡೊನಾಲ್ಡ್ ರೀತಿ ಆಗಿ ಬಿಟ್ಟಿದೆ. ಬೇರೆ ಬೇರೆ ರಾಜ್ಯಗಳಲ್ಲಿ ಫ್ರಾಂಚೈಸಿ ಗಳನ್ನು ಹೊಂದಿರುವ ಒಂದು ಸಂಸ್ಥೆ ರೀತಿ ಆಗಿದೆ. ಗುಜರಾತ್ ನಲ್ಲಿ ನರೇಂದ್ರ ಮೋದಿ ಇರಬಹುದು, ರಮಣ್ ಸಿಂಗ್ ಇರಬಹುದು ಅಥವಾ ಇಲ್ಲಿ ಯಡಿಯೂರಪ್ಪ ಇರಬಹುದು. ಹೈಕಮಾಂಡ್ ನೇರ ಪ್ರಭಾವ ಇಲ್ಲದೆ ರಾಜ್ಯ ಭಾರ ನಡೆಸಿದರು.
ಯಡಿಯೂರಪ್ಪ played a nice politics.. ಅಧಿಕಾರ ಕಳೆದುಕೊಂಡ ನಂತರವೂ ಸದಾ ಕಾಲ ಅಧಿಕಾರದ ಬಗ್ಗೆ ಮಾತಾಡುತ್ತಾ ಇದ್ದರು. ಜನರ ಮನಸ್ಸಿನಲ್ಲಿ ಸದಾ ನಾನೊಬ್ಬನೇ ರಾಜ ಎನ್ನುವ ರೀತಿ ಯಾತ್ರೆಗಳನ್ನು ಆಯೋಜಿಸಿದರು. ಶಾಸಕರನ್ನು ಒಟ್ಟುಗೂಡಿಸಿದರು. ಕೆಲವು ಕಡೆ ಅವರು ಬಳಸಿದ ಮಾರ್ಗ ಸರಿ ಇಲ್ಲದೆ ಇರಬಹುದು. ಅದರ ಬಗ್ಗೆ ಚರ್ಚಿಸಿದರೆ ದೊಡ್ಡ ಕತೆಯಾಗುತ್ತೆ. ಆದರೆ, ಹೈಕಮಾಂಡ್ ಗೆ ಯಡಿಯೂರಪ್ಪ ಎಂದರೆ ಇನ್ನೂ ಭಯ ಇದ್ದೇ ಇದೆ. ಆ ಕಾರಣಕ್ಕೆ ರಾಜ್ಯದಲ್ಲಿ ಬಿಜೆಪಿ ಬಿಕ್ಕಟ್ಟು ಮುಂದುವರೆಯುತ್ತಲೇ ಇದೆ.
ಹಿಪಾಕ್ರಾಸಿ ಹೇಗಿದೆ ನೋಡಿ : ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ಎಲ್ಲಾ ಸಿಎಂಗಳ ಕಾಲದ ತನಿಖೆಯಾಗಲಿ ಎಂದು ಬಿಎಸ್ ಯಡಿಯೂರಪ್ಪ ಆಗ್ರಹಿಸುತ್ತಿದ್ದಾರೆ. ಇದೇ ರೀತಿ ಕೇಂದ್ರದಲ್ಲಿ 2ಜಿ ತರಂಗ ಗುಚ್ಛ ಹಗರಣಕ್ಕೆ ಸಂಬಂಧಿಸಿದಂತೆ ಎ ರಾಜಾ ಕಾಲದ ತನಿಖೆ ಮಾತ್ರ ಯಾಕೆ? ಎನ್ ಡಿಎ ಸರ್ಕಾರದ ಕಾಲದ ಅಕ್ರಮದ ತನಿಖೆಯೂ ಆಗಲಿ ಎಂದು ಆಗ್ರಹಿಸುತ್ತಿದೆ.
ಕರ್ನಾಟಕದ ಇಮೇಜ್ ಹಾಳು ಮಾಡಿದ್ದು ಚೀನಾ ಎಂಬುದನ್ನು ಮರೆಯುವಂತಿಲ್ಲ. ಗಣಿಗಾರಿಕೆ ಪ್ರಕರಣಕ್ಕೂ 2 ಜಿ ಹಗರಣಕ್ಕೂ ಸಮಾನತೆಯನ್ನು ಕಾಣಬಹುದು. ಬರೀ ಸಿಬಿಐ ತನಿಖೆಯಾಗಿ ಇದು ಉಳಿದಿಲ್ಲ. ಸುಪ್ರೀಂಕೋರ್ಟ್ ಪ್ರತಿ ಹಂತವನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ. ಗಣಿಗಾರಿಕೆ ಆರಂಭದ ದಿನದಿಂದ ಆಗಿರುವ ಅಕ್ರಮಗಳನ್ನು ಬಾಲಿಗೆಳೆಯುವವರೆಗೂ ರಾಜ್ಯಕ್ಕೆ ಉಳಿಗಾಲವಿಲ್ಲ ಎಂದು ಕೃಷ್ಣಪ್ರಸಾದ್ ಹೇಳಿದರು.
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications