ಅಮ್ಮನ ದಿನಕ್ಕೆ ಪ್ರಚೋದನಕಾರಿ ಚಿತ್ರ ಬಳಕೆ

mothers-day-time-magazine-provocative-cover
ಲಂಡನ್, ಮೇ 12: ಅದು ಅಂತಾರಾಷ್ಟ್ರೀಯ ಖ್ಯಾತಿಯ ವಾರಪತ್ರಿಕೆ. ಆ ಪ್ರತಿಷ್ಠಿತ ಪತ್ರಿಕೆಯು ಅಮ್ಮನ ದಿನಾಚರಣೆ ಅಂಗವಾಗಿ ತನ್ನ ಮುಖಪುಟದಲ್ಲಿ ಪ್ರಚೋದನಾತ್ಮಕ ಚಿತ್ರ ಛಾಪಿಸಿ, ಜನರ ಭಾವನಗೆಳನ್ನು ಕೆಣಕಿದೆ. ತಾಯ್ತನವನ್ನು ಪವಿತ್ರವೆಂದು ಕಾಣುವ ಮಡಿವಂತರು ಅದನ್ನು ಹೌಹಾರಿದ್ದಾರೆ. ಅಮ್ಮನ ದಿನಾಚರಣೆಗೆ ಇದೆಂತಹ ಕೊಡುಗೆ ಎಂದು ಮೂಗುಮುರಿದಿದ್ದಾರೆ.

ಮಹಾತಾಯಿಯೊಬ್ಬಳು ತನ್ನ ಮೂರು ವರ್ಷದ ಕಂದನಿಗೆ ನಿಂತನಿಲುವಿನಲ್ಲೇ ಹಾಲುಣಿಸುತ್ತಿರುವ ಚಿತ್ರ ಅದು. ನಿಂತನಿಲುವಿನಲ್ಲೇ ಹೀಗೆ ಹಾಲುಣಿಸುತ್ತಿರುವ ಚಿತ್ರದ ಅಡಿಬರಹವೂ Are You Mom Enough? ಎಂದು ಕೀಳು ಅಭಿರುಚಿಯಲ್ಲಿ ಹೀಗೆ ಪ್ರಶ್ನಿಸುತ್ತಿದೆ.

26 ವರ್ಷದ ಜ್ಯಾಮಿ ಲೆನ್ನೆ ಗ್ರುಮೆಟ್ ಎಂಬ ಬ್ಲಾಗರ್ ಇಂತಹ ಪೋಸ್ ನೀಡಿದ್ದಾಳೆ. ಆಕೆಯ ಮಗ ಆರಾಮ್ ಅಮ್ಮನ ಮೊಲೆಗೆ ಬಾಯಿಹಾಕಿರುವ ಅಸಾಮಾನ್ಯ ಚಿತ್ರ ಅದು. ಶುಕ್ರವಾರ ಈ ಸಂಚಿಕೆ ಮಾರುಕಟ್ಟೆ ಪ್ರವೇಶಿಸಿದ್ದು, ಪತ್ರಿಕೆಯ ವ್ಯಾಪಕ ಟೀಕೆಗೆ ಗುರಿಯಾಗಿದೆ. ಪತ್ರಿಕೆಯ loyal readers ಇದೇನಿದು ಅಚಾತುರ್ಯ ಎಂದು ಪ್ರಶ್ನಿಸಿದ್ದಾರೆ.

ತನ್ನ ಇತ್ತೀಚಿನ ಸಂಚಿಕೆಯಲ್ಲಿ ಇಂತಹ ವಿವಾದಾತ್ಮಕ ಚಿತ್ರ ಪ್ರಕಟಿಸಿರುವ ಪ್ರತಿಷ್ಠಿತ ಪತ್ರಿಕೆ TIMEನಲ್ಲಿ ಕ್ರಿಕೆಟ್ ದೇವರು ಎಂದು ಪರಿಣಿಸತರಾಗಿರುವ ನಮ್ಮ ಸಚಿನ್ ತೆಂಡೂಲ್ಕರ್ ಗುಣಗಾನವೂ (ಪುಟ 40) ಇದೆ.

ಆದರೆ ಇದಕ್ಕೆ ಸಮಜಾಯಿಷಿ ನೀಡಿರುವ ಪತ್ರಿಕೆ ತನ್ನ Twitterನಲ್ಲಿ ಹೀಗೆ ಹೇಳಿಕೊಂಡಿದೆ: ಓದುಗರು ನಿಂತ ನಿಲುವಿನಲ್ಲೇ ಪತ್ರಿಕೆಯ face value ಅಳೆಯಬಾರದು. ಒಳಗೆ ಪರಾಂಬರಿಸಿ. "You've seen the cover, but have you read the cover story by @katepickert?" ಎಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+