ಬೆಂಗಳೂರು: BBMP website hacked
ಬೆಂಗಳೂರು, ಮೇ 11: ರಾಜಧಾನಿ ಬೆಂಗಳೂರಿನ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವೆಬ್‌ಸೈಟ್ ಅನ್ನು ಹ್ಯಾಕ್ ಮಾಡಲಾಗಿದೆ. brothers team ಮುಸ್ಲಿಂ ತಂಡದವರು ಈ ಹ್ಯಾಕಿಂಗ್ ಮಾಡಿದ್ದಾರೆ. ದೇಶದಲ್ಲಿ ಸೈಬರ್ ಕ್ರೈಂನಲ್ಲಿ ಅಗ್ರ ಸ್ಥಾನ ಅಲಂಕರಿಸಿರುವ ಕರ್ನಾಟಕಕ್ಕೆ ಇದು ಮತ್ತೊಂದು ಪೆಟ್ಟು ನೀಡಿದೆ.

ಶುಕ್ರವಾರ ಬೆಳಗ್ಗೆಯಿಂದ ಈ ರೀತಿ ಹ್ಯಾಕ್ ಮಾಡಲಾಗಿದೆ. 'BBMP website hack ಮಾಡುತ್ತಿರುವುದು ಇದೇ ಮೊದಲ ಬಾರಿ. ಆದರೆ ಇದನ್ನು ನಿಲ್ಲಿಸುವುದಿಲ್ಲ. ನಿರಂತರವಾಗಿ ಮುಂದುವರಿಸುತ್ತೇವೆ. ನಮಗೆ ಭದ್ರತೆ ಎಲ್ಲಿದೆ?' ಎಂದು brothers team ಪ್ರಶ್ನಿಸಿದೆ. ಸಾರ್ವಜನಿಕರೊಬ್ಬರು Public TV ಗೆ ನೀಡಿದ ಮಾಹಿತಿಯನ್ನಾಧರಿಸಿ, ಪರೀಕ್ಷಿಸಿದಾಗ BBMP website hack ಆಗಿರುವುದು ದೃಢಪಟ್ಟಿದೆ.
ಚಿನ್ನಸ್ವಾಮಿ ಕ್ರೀಡಾಂಗಣ ಬಳಿ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಲಷ್ಕರ್ ಇ ತೋಯ್ಬಾ (LeT) ಹಾಗೂ ಇಂಡಿಯನ್ ಮುಜಾಹಿದ್ದೀನ್ (IM) ಸಂಘಟನೆಗೆ ಸೇರಿದ ಇಬ್ಬರು ಉಗ್ರರನ್ನು ಮಂಗಳವಾರ (ಮೇ.8) ಬಿಹಾರದಲ್ಲಿ ಬಂಧಿಸಿದ್ದರು. ಇದಕ್ಕೆ ಪ್ರತೀಕಾರವಾಗಿ ಈ ಹ್ಯಾಕಿಂಗ್ ನಡೆದಿದೆ ಎಂದು ಶಂಕಿಸಲಾಗಿದೆ.
BBMP ಆಯುಕ್ತ ಶಂಕರಲಿಂಗೇ ಗೌಡ ಅವರು ಹ್ಯಾಕಿಂಗ್ ಅನ್ನು ದೃಢಪಡಿಸಿದ್ದಾರೆ. ತಕ್ಷಣ BBMP disastrous management ತಂಡಕ್ಕೆ ಮಾಹಿತಿ ನೀಡಲಾಗಿದೆ. ಮುಂದಿನ ಕಾರ್ಯಾಚರಣೆ ನಡೆಸಲಿದ್ದಾರೆ ಎಂದು ದಟ್ಸ್ ಕನ್ನಡಗೆ ಅವರು ತಿಳಿಸಿದ್ದಾರೆ.












Click it and Unblock the Notifications