ರಾಜಾಗೆ ಬರ್ಥ್ ಡೇ ಗಿಫ್ಟ್ ಸಿಗಲಿಲ್ಲ, ಜೈಲೇ ಗಟ್ಟಿ

ಮೇ.10ರಂದು ರಾಜಾ ತಮ್ಮ ಹುಟ್ಟುಹಬ್ಬ ಆಚರಿಸಿಕೊಳ್ಳುವ ಮೂಡ್ ನಲ್ಲಿರಲಿಲ್ಲ. ಮೇ.11ರಂದು ಬೇಲ್ ಸಿಗುವ ಖುಷಿಯಲ್ಲಿದ್ದರು. ಆದರೆ, ಮೇ.15ರ ತನಕ ತಿಹಾರ್ ಜೈಲಿನಲ್ಲಿ ಕಾಲ ಕಳೆಯಬೇಕಿದೆ.
ಈ ನಡುವೆ ಸಿಬಿಐ ತಂಡ ರಾಜಾ ಅವರಿಗೆ ಜಾಮೀನು ನೀಡುವುದನ್ನು ವಿರೋಧಿಸಿ ಅರ್ಜಿ ಸಲ್ಲಿಸಿದೆ. ರಾಜಾ ಪ್ರಭಾವಿ ನಾಯಕರಾಗಿದ್ದು, ಉಳಿದ ಸಾಕ್ಷಿಗಳನ್ನು ಬೆದರಿಸುವ ಸಾಧ್ಯತೆಯಿದೆ. ಇದರಿಂದ 2ಜಿ ತರಂಗ ಗುಚ್ಛ ಪ್ರಕರಣದ ತನಿಖೆಗೆ ತೊಂದರೆಯಾಗಲಿದೆ ಎಂದು ಸಿಬಿಐ ವಾದಿಸಿದೆ.
ಮಾಜಿ ಟೆಲಿಕಾಂ ಕಾರ್ಯದರ್ಶಿ ಸಿದ್ದಾರ್ಥ್ ಬೆಹುರಾ ಅವರಿಗೆ ಬುಧವಾರ(ಮೇ.9) ಸಿಕ್ಕ ನಂತರ ಎ ರಾಜಾಗೆ ಕೂಡಾ ಜೈಲಿನಿಂದ ಹೊರ ಬೀಳುವ ಆಸೆ ಚಿಗುರೊಡೆದಿತ್ತು. ಫೆ.2 ರಂದು, 2011 ರಂದು ತಿಹಾರ್ ಜೈಲು ಸೇರಿದ್ದ ಮಾಜಿ ಸಚಿವ ರಾಜಾ ಮೇ.9 ರ ತನಕ ಜಾಮೀನು ಅರ್ಜಿ ಹಾಕದೆ ಅಚ್ಚರಿ ಮೂಡಿಸಿದ್ದರು.












Click it and Unblock the Notifications