ಭಲೇ! ಸದಾನಂದ ಗೌಡರ ಕಚೇರಿಗೂ ಬಂತು ಸಕಾಲ

ಸಿಎಂ ಕಚೇರಿ ಆನ್ ಲೈನ್ ಲೈವ್ ನೋಡುವ ಸೌಲಭ್ಯ ಒದಗಿಸಿದ ನಂತರ ಈಗ ಕಚೇರಿಯ ಕಾರ್ಯ ನಿರ್ವಹಣೆಯನ್ನು ಸಾರ್ವಜನಿಕರು ನೇರವಾಗಿ ಪ್ರಶ್ನಿಸುವ ಅವಕಾಶವನ್ನು ಕಲ್ಪಿಸಿದ್ದಾರೆ.
ಗುರುವಾರ(ಮೇ.10) 35 ಕೋಟಿ ರು ವೆಚ್ಚದ ಕಂದಾಯ ಭವನ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದ ಸದಾನಂದ ಗೌಡ, ಸಕಾಲದಿಂದ ಸರ್ಕಾರಿ ಕೆಲಸದಲ್ಲಿ ಪಾರದರ್ಶಕತೆ ಮೂಡಿಸಬಹುದು ಎಂದರು.
ಸಕಾಲದಲ್ಲಿ ಮಾಹಿತಿ ನೀಡಿದ ಅಧಿಕಾರಿಗಳು ಅರ್ಜಿದಾರರಿಗೆ ದಿನವೊಂದಕ್ಕೆ 20 ರು. ನಂತೆ ವೆಚ್ಚ ಭರಿಸಬೇಕಾಗುತ್ತದೆ. ಇದುವರೆವಿಗೂ 10 ಲಕ್ಷ ಅರ್ಜಿಗಳನ್ನು ಸ್ವೀಕರಿಸಲಾಗಿದೆ.
ಸಕಾಲದ ಅಡಿಯಲ್ಲಿರುವ 11 ಇಲಾಖೆಯ 151 ಸೇವೆಗಳಿಗೆ ಇನ್ನೂ 40 ಸೇವೆಗಳನ್ನು ಸೇರಿಲಾಗುವುದು. ಎಸ್ ಎಂಎಸ್ ಮೂಲಕ ಅರ್ಜಿಯ ಕಾರ್ಯ ಪ್ರಗತಿಯ ಮೇಲೆ ನಿಗಾ ಇಡಬಹುದು ಎಂದು ಸದಾನಂದ ಗೌಡರು ಹೇಳಿದರು.
ಉಳಿದಂತೆ 17 ಸುವರ್ಣ ಸೌಧ ಯೋಜನೆಗಳು, 20 ಲಕ್ಷ ಆಶ್ರಯ ಮನೆಗಳನ್ನು ಕಟ್ಟಲಾಗುವುದು. 40 ಲಕ್ಷ ಜನರಿಗೆ ಸೂರು ಒದಗಿಸವುದು ನಮ್ಮ ಉದ್ದೇಶ ಎಂದು ಸದಾನಂದ ಗೌಡ ತಿಳಿಸಿದರು.












Click it and Unblock the Notifications