ಈಶ್ವರಪ್ಪ ವಿದೇಶ ಪ್ರವಾಸ: ಏನಂತಾರೆ ಯಡಿಯೂರಪ್ಪ

bjp-chief-eshwarappa-foreign-trip-bsy-reaction
ಬೆಂಗಳೂರು, ಮೇ 9: 'ನಾಡಿನಲ್ಲಿ ಬರಬಿದ್ದು ಜನ ಕಂಗಾಲಾಗಿರುವಾಗ ಆಡಳಿತ ಪಕ್ಷದ ರಾಜ್ಯಾಧ್ಯಕ್ಷರಾಗಿ ಕೆ ಎಸ್ ಈಶ್ವರಪ್ಪ ಅವರು ಸಂಸಾರಸಮೇತ ಮೊನ್ನೆ ಸೋಮವಾರ ದೇಶಾಂತರ ಹೊರಟಿರುವುದಕ್ಕೆ ನಮ್ಮದೇನೂ ಅಭ್ಯಂತರವಿಲ್ಲ. ಅದು ಅವರ ಖಾಸಗಿ ಭೇಟಿ. ಸರಕಾರದ ಪ್ರತಿನಿಧಿಯಾಗಿ ಅವರು ಹೋಗಿಲ್ಲ' ಎಂದು ಜವಾಬ್ದಾರಿಯುತ ಸ್ಥಾನಗಳಲ್ಲಿರುವ ಪ್ರತಿಪಕ್ಷಗಳ ನಾಯಕರು ಷರಾ ಬರೆದಿದ್ದಾರೆ.

ಆದರೆ ಈ ಹಿಂದೆ ನಾಡಿನ ದೊರೆ ಸದಾನಂದ ಗೌಡರೇ ವಿದೇಶಕ್ಕೆ ತೆರಳುತ್ತೇನೆ ಎಂದು ಗಂಟುಮೂಟೆ ಕಟ್ಟಿದಾಗ 'ಸದಾನಂದರೇ ಬೇಡಿ. ಹೋಗಬೇಡೀಪ್ಪಾ ವಿದೇಶಕ್ಕೆ. ಜನ ಬರದಿಂದ ತತ್ತರಿಸಿದ್ದಾರೆ' ಎಂದು ಯಡಿಯೂರಪ್ಪ ತಣ್ಣಗೆ ಹೇಳಿದ್ದರು. ಗೌಡರೂ ಅದಕ್ಕೆ ಸ್ಪಂದಿಸಿ, ಇಲ್ಲ ನಾನು ಹೋಗೊಲ್ಲ ಎಂದು ಫಾರಿನ್ ಟ್ರಿಪ್ ಕ್ಯಾನ್ಸೆಲ್ ಮಾಡಿದ್ದರು.

ಆನಂತರವೂ ಸಚಿವರೊಬ್ಬರು ವಿದೇಶಕ್ಕೆ ತೆರಳಿ, ಸಿಎಂ ಚಿತಾವಣೆಯ ಮೇರೆಗೆ ಅರ್ಧದಲ್ಲೇ ವಾಪಸಾಗಿದ್ದರು. ಆದರೆ ತಮ್ಮ ಶಿವಮೊಗ್ಗದ ಸನ್ಮಿತ್ರ ಈಶ್ವರಪ್ಪ ಅವರು ಏಕಾಏಕಿ ವಿದೇಶಕ್ಕೆ ತೆರಳಿರುವ ಬಗ್ಗೆ ಯಡಿಯೂರಪ್ಪ ಏನನ್ನುತ್ತಾರೆ...ಅಂದರೆ.

'ನಾನು ಯಾರು ರೀ.. ದೊಡ್ಡವರ ಬಗ್ಗೆಯೆಲ್ಲ ಹೇಳೋಕೆ. ನಾನು ಪಕ್ಷದ ಒಬ್ಬ ಸಾಮಾನ್ಯ ಕಾರ್ಯಕರ್ತ. ಅವರು ಪ್ರವಾಸ ಹೋಗಿರುವ ಬಗ್ಗೆ ಪ್ರತಿಕ್ರಿಯೆ ನೀಡಲು ನಾನು ಸೂಕ್ತ, ಯೋಗ್ಯ ವ್ಯಕ್ತಿಯಲ್ಲ. ಆ ಬಗ್ಗೆ ಮುಖ್ಯಂತ್ರಿಗಳನ್ನೇ ಕೇಳಿದರೆ ಒಳಿತು' ಎಂದು ಅಭಿಪ್ರಾಯಪಟ್ಟಿದ್ದಾರೆ.

'ನಾನು ಶಿಕಾರಿಪುರ ವಿಧಾನಸಭಾ ಕ್ಷೇತ್ರದ ಸಾಮಾನ್ಯ ಶಾಸಕ. ಹೀಗಾಗಿ ಇಂತಹ ಮಹತ್ತರ ವಿಚಾರಗಳ ಬಗ್ಗೆ ಮಾತನಾಡಲಾರೆ. ಅದೇ ರೀತಿ ಸಚಿವ ಸಂಪುಟ ವಿಸ್ತರಣೆಯ ಬಗ್ಗೆಯೂ ನೀವು ಮುಖ್ಯಮಂತ್ರಿ ಹಾಗೂ ಬಿಜೆಪಿ ರಾಜ್ಯಧ್ಯಾಕ್ಷ ಈಶ್ವರಪ್ಪನವರನ್ನೇ ಕೇಳಿಕೊಳ್ಳಿ' ಎಂದು ಬಿಎಸ್ ವೈ ಸುದ್ದಿಗಾರರಿಗೆ ಹಿತವಚನ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+