ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಫ್ರಾನ್ಸ್ : ನಿಕೋಲಸ್ ಸರ್ಕೋಜಿಗೆ ಅಚ್ಚರಿಯ ಸೋಲು

By Mahesh
|
Google Oneindia Kannada News

Nicolas Sarkozy
ಪ್ಯಾರೀಸ್, ಮೇ.7: ಫ್ರಾನ್ಸ್ ಅಧ್ಯಕ್ಷೀಯ ಚುನಾವಣೆಯಲ್ಲಿ ಹಾಲಿ ಅಧ್ಯಕ್ಷ ನಿಕೋಲಾಸ್ ಸರ್ಕೋಜಿ ಅಚ್ಚರಿಯ ಸೋಲು ಅನುಭವಿಸಿದ್ದಾರೆ. ಎರಡು ದಶಕಗಳ ನಂತರ ಸಮಾಜವಾದಿ ತತ್ವದ ಪಕ್ಷದ ನಾಯಕ ಫ್ರಾನ್ಕೊಸ್ ಹೊಲ್ಲಾಂಡೆ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಯುರೋ ವಲಯದ ಎರಡನೇ ಅತಿದೊಡ್ಡ ಆರ್ಥಿಕತೆ ಹೊಂದಿರುವ ಫ್ರಾನ್ಸ್, ಯುನ್ ಭದ್ರತಾ ಮಂಡಳಿಯ ಅಣ್ವಸ್ತ್ರಹೊಂದಿರುವ ಖಾಯಂ ಸದಸ್ಯ ದೇಶವಾಗಿದೆ. ಯುರೋಪಿನ ಆರ್ಥಿಕ ಬಿಕ್ಕಟ್ಟಿಗೆ ಪರಿಹಾರ ಸಿಗಬಹುದು ಎಂಬ ಆಶಾಕಿರಣ ಈಗ ಮೂಡಿದೆ.

ಶೇ 52ಕ್ಕೂ ಅಧಿಕ ಮತಗಳ ಅಂತರದಿಂದ ಹೊಲ್ಲಾಂಡೆ ಗೆದ್ದಿದ್ದಾರೆ. ವೆಚ್ಚ ಕಡಿತದ ಕುರಿತಂತೆ ಜರ್ಮನಿಯ ಜೊತೆ ಫ್ರಾನ್ಸ್ ಮಾಡಿಕೊಂಡ ಸರ್ಕೋಜಿ ಕ್ರಮವನ್ನು ಮುಂದುವರೆಸಲಾಗುವುದು. ಯುರೋಪ್ ಖಂಡದ ಆರ್ಥಿಕ ಕುಸಿತದಿಂದ ಭಾರತ ಉಪಖಂಡ ಸೇರಿದಂತೆ ಯುರೋ ಆಧಾರಿತ ಇತರೆ ದೇಶಗಳ ಮೇಲೆ ಚಿಂತನೆ ನಡೆಸಲಾಗುವುದು ಎಂದು ಅಧ್ಯಕ್ಷ ಹೊಲ್ಲಾಂಡೆ ಹೇಳಿದ್ದಾರೆ.

English summary
Francois Hollande was elected France's first Socialist president in nearly two decades today, dealing a humiliating defeat to incumbent Nicolas Sarkozy and shaking up European politics.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X