ಮೇ 15ಕ್ಕೆ ಅಂಡರ್ ಪಾಸ್ ನಲ್ಲಿ ವಾಹನ ಓಡಿಸಿ

Kadirenahalli Underpass
ಬೆಂಗಳೂರು, ಮೇ.4: ಕದಿರೇನಹಳ್ಳಿ ಅಂಡರ್ ಪಾಸ್ ಕೊನೆಗೂ ಮೇ.15ರಂದು ಉದ್ಘಾಟನೆಗೊಳ್ಳಲಿದೆ ಎಂದು ಬನಶಂಕರಿ ವಾರ್ಡ್ ಕೌನ್ಸಿಲರ್ ಎಎಚ್ ಬಸವರಾಜು ಹೇಳಿದ್ದಾರೆ.

ಜೆಪಿ ನಗರ, ಬನಶಂಕರಿ, ಜಯನಗರ ಹಾಗೂ ಕುಮಾರಸ್ವಾಮಿ ಲೇಔಟ್ ಗೆ ಸಂಪರ್ಕ ಹಾದಿಯಾಗಿರುವ ಈ ಕದಿರೇನಹಳ್ಳಿ ಅಂಡರ್ ಪಾಸ್ ಈ ವರ್ಷದ ಮಾರ್ಚ್ ತಿಂಗಳೊಳಗೆ ಪೂರ್ಣಗೊಳ್ಳಲಿದೆ ಎಂದು ಸಿಎಂ ಸದಾನಂದ ಗೌಡರು ಭರವಸೆ ನೀಡಿದ್ದರು.

ಮಾರ್ಚ್,2008ರಲ್ಲಿ 28.72 ರು ವೆಚ್ಚದಲ್ಲಿ ಆರಂಭವಾದ ಅಂಡರ್ ಪಾಸ್ ಕಾಮಗಾರಿ 10 ತಿಂಗಳಲ್ಲಿ ಪೂರ್ಣಗೊಳ್ಳಬೇಕಿತ್ತು. ಆದರೆ, ಅನೇಕ ವಿಘ್ನಗಳನ್ನು ಎದುರಿಸಿದ ಗುತ್ತಿಗೆದಾರರು ಕಾಮಗಾರಿ ವಿಳಂಬದಿಂದಾಗಿ ಭಾರಿ ದಂಡ(ಸುಮಾರು 80 ಲಕ್ಷ ರು.) ವನ್ನು ಕಟ್ಟಿದ್ದಾರೆ.

ಕಾಮಗಾರಿ ವಿಳಂಬ ಮಾಡಿ ದಂಡ ಕಟ್ಟಿದ ಕಂಪನಿಯನ್ನು ಬ್ಲ್ಯಾಕ್ ಲಿಸ್ಟ್ ಗೆ ಸೇರಿಸುವಂತೆ ಗೃಹ ಸಚಿವ ಆರ್ ಅಶೋಕ್ ಅವರು ಸೂಚಿಸಿದರು. ಬಿಬಿಎಂಪಿ ಮಾತ್ರ ಬರೀ ದಂಡ ಪಡೆದು ಸುಮ್ಮನಾಗಿರುವುದು ಏಕೆ? ಎಂಬ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ.

ಅಂಡರ್ ಪಾಸ್ ಕಾಮಗಾರಿ ಈಗಾಗಲೇ ಶೇ.90 ರಷ್ಟು ಪೂರ್ಣಗೊಂಡಿದೆ. ಸರ್ವೀಸ್ ರಸ್ತೆ ಮೇ ತಿಂಗಳ ಮೊದಲ ವಾರದೊಳಗೆ ಸಾರ್ವಜನಿಕರಿಗೆ ಮುಕ್ತವಾಗಲಿದೆ ಎಂದು ಬಿಬಿಎಂಪಿ ವಕ್ತಾರರು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+