ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಒಬಾಮಾ ನಕಲಿ ಸಿಮ್ ಪ್ರಕರಣಕ್ಕೆ ಹೊಸ ತಿರುವು

By Srinath
|
Google Oneindia Kannada News

obama-issued-airtel-sim-nalgonda-new-twist
ನಲಗೊಂಡ (ಆಂಧ್ರ), ಮೇ 3: ಸ್ಥಳೀಯ ನಿವಾಸಿಯೊಬ್ಬ ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮಾ ಅವರ ಭಾವಚಿತ್ರವನ್ನು ಲಗತ್ತಿಸಿ ಹೊಸ ಏರ್ ಟೆಲ್ ಮೊಬೈಲ್ ಸಿಮ್ ಕನೆಕ್ಷನ್ ಪಡೆದ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ.

ಏನಾಗಿತ್ತೆಂದರೆ ಎಂ. ಪ್ರಸಾದ್ ಎಂಬ ವ್ಯಕ್ತಿ SIM card ಅರ್ಜಿಯಲ್ಲಿ ತನ್ನ ಫೋಟೋ ಅಂಟಿಸದೆ ಬರಾಕ್ ಒಬಾಮಾ ಬಳಸಿ, ಮೊಬೈಲ್ ಸಿಮ್ ಗಿಟ್ಟಿಸಿದ್ದ. ಹೀಗೆ ಯಾರದೋ ಫೋಟೊ ಬಳಸಿ 21 ವರ್ಷದ ಪ್ರಸಾದ್ ಪಡೆದಿರುವ ಮೊಬೈಲಿನ ನಂಬರ್ 91775 23297. ಏರ್ ಟೆಲ್ ಸಂಸ್ಥೆಯ ಈ ಅಚಾತುರ್ಯ ಕಿವಿಗೆ ಬೀಳುತ್ತಿದ್ದಂತೆ ಪೊಲೀಸರು ಮೊದಲು ಮೊಬೈಲ್ ಸಂಪರ್ಕವನ್ನು ಸ್ಥಗಿತಗೊಳಿಸಿದ್ದರು.

ಆದರೆ ಅಷ್ಟಕ್ಕೇ ಸುಮ್ಮನಾಗದ ನಲಗೊಂಡ ಪೊಲೀಸ್ ವರಿಷ್ಠಾಧಿಕಾರಿ ನವೀನ್ ಗುಲಾಟಿ ಹೆಚ್ಚಿನ ತನಿಖೆಗೆ ನಡೆಸಿದ್ದಾರೆ. ಈ ಮಧ್ಯೆ, SIM card ಅರ್ಜಿಯಲ್ಲಿ ಕೋಟುಧಾರಿ ಒಬಾಮಾ ಅವರ ಫೋಟೊ ಕಣ್ಣಿಗೆ ರಾಚುವಂತಿದ್ದರು, ಕಣ್ಮುಚ್ಚಿ ಕನೆಕ್ಷನ್ ಕೊಟ್ಟ ಏರ್ ಟೆಲ್ ಅಂಗಡಿಯವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ವಿಷಯ ಏನಪಾ ಅಂದರೆ ಇದೇ ವ್ಯಕ್ತಿ ತನ್ನ ID proof ಗಾಗಿ Driving Licence ಜೆರಾಕ್ಸ್ ಪ್ರತಿಯನ್ನು ನೀಡಿದ್ದ. ಅದರ ಮೇಲೆ ಬೆಳಕು ಚೆಲ್ಲಿದ ಎಸ್ಪಿ ನವೀನ್ ಗುಲಾಟಿ, ಅದರಲ್ಲಿರುವ ಫೋಟೋದಲ್ಲಿ ವ್ಯಕ್ತಿಯ ಗುರುತು ಸಿಗದಂತೆ ಮಸಕುಮಸಕಾಗಿದೆ.

ಇದನ್ನು ನೋಡಿ ಬೆಚ್ಚಿಬಿದ್ದ ಪೊಲೀಸರು ತಕ್ಷಣ RTO ಕಚೇರಿಯತ್ತ ದೌಡಾಯಿಸಿದ್ದಾರೆ. ಪ್ರಸಾದ್ ಗಿಟ್ಟಿಸಿರುವ DL ಸಹ ನಕಲಿಯದ್ದಾಗಿರಬಹುದು ಎಂಬುದು ಪೊಲೀಸರ ಗುಮಾನಿ. ಪ್ರಸಾದ್ ಹೆಸರಿನ ವ್ಯಕ್ತಿ ನಕಲಿ ದಾಖಲೆ ಪಡೆದಿರುವುದರ ಉದ್ದೇಶ ಏನು ಎಂಬುದುನ್ನು ತಿಳಿಯಲು ಪೊಲೀಸರು ಆತನ ಬೆನ್ನುಬಿದ್ದಿದ್ದಾರೆ.

English summary
Barack Obama’s photo being used to get a cellphone SIM card in nalgonda by Prasad. cops suspect that the documents submitted by Prasad at the Regional Transport Authority’s office at Nalgonda to procure his driving licence too could be fake.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X