ಕೆಲಸದ ಒತ್ತಡ: ಮಹಿಳಾ ಟೆಕ್ಕಿ ಆತ್ಮಹತ್ಯೆ

ಮೃತಪಟ್ಟ ಟೆಕ್ಕಿಯನ್ನು ಜ್ಯೋತ್ಸ್ನಾ ನೇಗಿ ಎಂದು ಗುರುತಿಸಲಾಗಿದ್ದು, ಗುರ್ ಗಾಂವ್ ಬಳಿಯ ಖಾಸಗಿ ಸಂಸ್ಥೆಯ ಉದ್ಯೋಗಿಯಾಗಿದ್ದರು ಎನ್ನಲಾಗಿದೆ.
ಆಕೆ ಸಂಬಂಧಿಕರು ಕಳೆದ ರಾತ್ರಿ ಫೋನ್ ಕರೆ ಮಾಡಿದ್ದಾರೆ. ಆದರೆ, ಜ್ಯೋತ್ಸ್ನಾ ಅವರು ಯಾವುದೇ ಕರೆಯನ್ನು ಸ್ವೀಕರಿಸಿಲ್ಲ. ಇದರಿಂದ ಗಾಬರಿಗೊಂಡ ಸಂಬಂಧಿಕರು ಗುರುವಾರ(ಮೇ.3) ಬೆಳಗ್ಗೆ ಬಂದು ನೋಡಿದರೆ ನೇಗಿ ಹೆಣವಾಗಿ ಮಲಗಿದ್ದಳು.
ನೇಗಿ ಬರೆದಿಟ್ಟ ಸೂಸೈಟ್ ನೋಟ್ ನಲ್ಲಿ ಕೆಲಸದ ಒತ್ತಡ, ವೈಯಕ್ತಿಕ ಸಮಸ್ಯೆ ಎಂದಷ್ಟೇ ಹೇಳಿದ್ದಾರೆ. ಆದರೆ, ಯಾರ ಮೇಲೆ ಆರೋಪ ಹೊರೆಸಿಲ್ಲ. ಪೊಲೀಸರು ಸಂಬಂಧಿಕರನ್ನು ವಿಚಾರಿಸಿದ್ದಾರೆ.
ಆಕೆ ಕೆಲಸ ಮಾಡುತ್ತಿದ್ದ ಕಂಪನಿಯಲ್ಲೂ ವಿಚಾರಣೆ ನಡೆಸುತ್ತೇವೆ. ಯಾರ ಮೇಲೂ ಅನುಮಾನ ಬಂದಿಲ್ಲ ಎಂದು ಪೊಲೀಸರು ಹೇಳಿದ್ದಾರೆ. (oneindia news)












Click it and Unblock the Notifications