ಇಂದು ರಕ್ತಪಿಪಾಸು ಬಿನ್ ಲಾಡೆನ್ ಪ್ರಥಮ ತಿಥಿ

ಅವನು ಒಸಾಮಾ ಬಿನ್ ಲಾಡೆನ್. ಅಲ್ ಖೈದಾ ಮುಖ್ಯಸ್ಥ, ವಿಶ್ವದ ಅತ್ಯುಗ್ರ ಹಾಗೆ ಅಮೆರಿಕದ ದಾಳಿಯಿಂದ ನುಚ್ಚುನೂರಾಗಿ ಇಂದಿಗೆ (ಮೇ 2) ಒಂದು ವರ್ಷ ಸಂದಿದೆ. ಆ ರಕ್ತಪೀಪಾಸು ಇಲ್ಲದ ಜಗತ್ತು ಈ ಒಂದು ವರ್ಷವನ್ನು ನೆಮ್ಮದಿಯಾಗಿಯೂ ಕಳೆದಿದೆ.
2001 ಸೆಪ್ಟೆಂಬರ್ 11ರ ದಾಳಿಗೆ ಪ್ರತ್ಯುತ್ತರವಾಗಿ ಲಾಡೆನ್ ನನ್ನು ನಿರ್ನಾಮ ಮಾಡಿ, ನಮ್ಮನ್ನು ನೆಮ್ಮದಿಯಾಗಿರಲು ಬಿಟ್ಟ ಎಂದು ಅಮೆರಿಕ ಸೇರಿದಂತೆ ವಿಶ್ವದೆಲ್ಲೆಡೆ ಜನ ಮಾತನಾಡಿಕೊಳ್ಳುತ್ತಿದ್ದಾರೆ. ಲಾಡೆನ್ ಹತನಾದ ಈ ಒಂದು ವರ್ಷದಲ್ಲಿ ಅವನ ಬಗ್ಗೆ ನೂರೆಂಟು ಸ್ವಾರಸ್ಯಕರ ವಿಷಯಗಳಯ ಬಹಿರಂಗವಾಗಿದೆ.
ಅದನ್ನು 'ದಟ್ಸ್ ಕನ್ನಡ' ಸಹ ದಾಖಲಿಸಿದೆ. ಆ ವರದಿಗಳನ್ನು ಒಂದೊಂದಾಗಿ ಓದಲು ಇಲ್ಲಿ ಕ್ಲಿಕ್ ಮಾಡಿ. ಒಸಾಮಾ ಬಿನ್ ಲಾಡೆನ್ (ಒಬಿಎಲ್)
ಈ ಮಧ್ಯೆ, ಲಾಡೆನ್ ಸಂತತಿಗಳೋ ಅಥವಾ ಅವನದೇ ಅಪರಾವತಾರಗಳು ಸೇಡು ತೀರಿಸಿಕೊಳ್ಳಲು ಒಂದಷ್ಟು ತಂಟೆಗಳನ್ನು ಮಾಡಬಹುದು ಎಂದು ಅಂದಾಜಿಸಲಾಗಿದ್ದು, ಎಲ್ಲೆಡೆ ಕಟ್ಟೆಚ್ಚರ ವಹಿಸಲಾಗಿದೆ. ಆಯಕಟ್ಟಿನ ಸ್ಥಳಗಳಲ್ಲಿ ಭಾರಿ ಬಿಗಿ ಭದ್ರತೆ ಹಾಕಲಾಗಿದೆ.












Click it and Unblock the Notifications